ಹೇಗೆ ಮರೆಯಲಿ?
ಹೇಗೆ ಮರೆಯಲಿ?
ಬಿಳಿಯ ಕೊಳದಲ್ಲಿ
ಫಳಫಳ ಹೊಳೆವ
ನಿನ್ನ ಕಣ್ಮಣಿಗಳನು
ಹೇಗೆ ಮರೆಯಲಿ?
ನೂರು ಭಾವನೆಗಳನು
ಏಕಕಾಲದಿ ಬೀರುವ
ಆ ನಿನ್ನ ಕಣ್ಣೋಟವನು
ಹೇಗೆ ಮರೆಯಲಿ?
ನೋಟದಲಿ ಪ್ರೀತಿಯ
ಹೊಳೆ ಹರಿಸುವ
ಆ ನಿನ್ನ ಕಣ್ಣೋಟವನು
ಹೇಗೆ ಮರೆಯಲಿ?
ಒಲವ ನಿವೇದನೆಯನು
ಕುಡಿನೋಟದಲಿ ಬೀರುವ
ಆ ನಿನ್ನ ಕಣ್ಣೋಟವನು
ನಾ ಹೇಗೆ ಮರೆಯಲಿ?

