ಹಾರುವ ಕನಸು
ಹಾರುವ ಕನಸು

1 min

65
ಹಾರಿ ಹೋಗುವೆ ಪ್ರೀತಿ ರೆಕ್ಕೆ ಹೊಸೆದು,
ಭುವಿಯಿಂದ ಜಿಗಿದು ಆಗಸದಿ ತೇಲುವ ಮೇಘದಂಚನು ಹಿಡಿದು...
ನಡೆದಿಹೆ ನೀನು ಹೃದಯದ ಪ್ರೇಮ ಬೀದಿಯಲಿ,
ನಡೆದು ಬಾರೆ ಕೈ ಹಿಡಿದು ಸೊಗಸು ನೋಡೆ ಕಣ್ತೆರೆದು...
ಬಯಸಿದೆ ಚುಕ್ಕಿಗಳ ಚಂದಿರನ ಮರೆತು,
ಜಿಗಿದು ನೆಗೆದೆನ್ನ ಪ್ರೇಯಸಿಗಾಗಿ ಭುವಿಗೆ ತರುವೆ ತಾರೆಗಳೆ ಅಳೆದು...
ವಿಸ್ಮಯಾಶ್ಚರ್ಯ ನಯನದಿ ನನ್ನ ಮನಸಲಿ ನೆಲೆಸಿ ನಲಿದಿಹೆ,
ಬಯಸುವೆ ಯುಗಯುಗದಲಿ ನೀನಾಗಿರೆನ್ನ ಬಿದು...