ಗುರುವಂದನೆ"#Thankyou Teacher "
ಗುರುವಂದನೆ"#Thankyou Teacher "
ಪದಗಳ ಆಗರವಿಹುದು
ಎನ್ನೆದೆಯ ಗುಡಿಯಲಿ
ಗುರು ಕೆತ್ತಿದ ಆಕರವಿದು
ನಡೆಯುತಿಹುದು ಸಾಧನೆಯ ಹಾದಿಯಲಿ
ಕಲ್ಲೊಂದು ಶಿಲೆಯಾದಂತೆ
ಜನ ಮೆಚ್ಚಿದ ಕಲೆಯಾದಂತೆ
ಗುರುವಿನ ತ್ಯಾಗಕೆ ಮಿಗಿಲು
ಸರಿಹೊಂದದು ಮುಗಿಲು
ಒಲುಮೆಯ ಮಾತಿಂದ
ನಲ್ಮೆಯ ಪಾಠ
ನಗು ನಗುತಲೇ ಕಲಿಸುತಿಹ
ಮರೆಯಲಾಗದ ಜೀವನ ಪಾಠ
ಹಿಂತಿರುಗಿ ನಾ ಕಂಡಾಗ
ಗುರುವೇ ಮೇಣದ ಬತ್ತಿ
ಶಿಷ್ಯ ಕುಲಕೆ ಬೆಳಕನೆರೆದಿಹ
ತಾ...ಹೊತ್ತಿ......
ತೀರಿಸಲಾಗದ ಋಣ
ಎದೆಯಲಿಹುದು ಗೌರವದ ಹೂರಣ
ಗುರುವರ್ಯರ ಪಾದಕೆ ಅಕ್ಷರಗಳ ಆಭರಣ
ವಂದಿಪೆ..ಗುರುವೇ...ನಾ..ಶಿರಬಾಗಿ ವಂದಿಪೆ...