STORYMIRROR

Prabhakar Tamragouri

Inspirational

2  

Prabhakar Tamragouri

Inspirational

ಗುರಿ

ಗುರಿ

1 min
184

ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು

ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು ...?

ಕಣ್ಣುಗಳು ಕನಸುಗಳನ್ನು ಕಾಣುತ್ತಲೇ ಇದೆ ಮನಸ್ಸಿನ ಭಾವನೆ ಮುದುಡುತ್ತಲೇ ಇದೆ 

ಎದೆಯಲ್ಲಿನ ನೋವು ಇನ್ನೂ ಹಾಗೆ ಇದೆ ಚಿಗುರುತ್ತಾ ಕನಸು ....?


ಒಂದೇ ಒಂದು ಸಲ ಆ ಕನಸು ನನಸಾಗಬೇಕೆನ್ನುವ ಆಸೆ !ನನಸಾಗದಿದ್ದರೆ 

ಬದುಕೆಲ್ಲಾ ನಿರಾಸೆ ಆದರೂ , ಛಲ ಬಿಡದೇ ಮುನ್ನುಗ್ಗುವೆ ಗುರಿ ಮುಟ್ಟುವುದೇ ಕನಸು ....?

ಕಾತುರದಿಂದ ಹಗಲಿರುಳು ಕಾಯುತ್ತಿರುವೆ ಕನಸಿಗೆ ನನಸಾಗಬಹುದೆಂಬ ದೂರದಾಸೆ ಇನ್ನೂ ಉಳಿದಿವೆ ದಿನಗಳು ಈಡೇರುತ್ತಾ ಕನಸ್ಸೆಂಬ ಗುರಿ ....?

ಕಣ್ಣುಗಳು ಹನಿಗೂಡುತ್ತಿವೆ ಮನದಲ್ಲಿ ದುಗುಡ ಹೆಚ್ಚಾಗುತ್ತಿದೆ ಕಳೆಯುತ್ತಿವೆ ದಿನಗಳು

...ನನಸಾಗುತ್ತಾ ಕನಸು ...??!


Rate this content
Log in

Similar kannada poem from Inspirational