ದೀಪಾವಳಿ
ದೀಪಾವಳಿ
ಮನೆಯ ಅಂಗಳದಲಿಲ್ಲ
ಅಂದವಾದ ಗೂಡುದೀಪ
ಜಗಲಿಯಲಿ ನಾನಿಟ್ಟಿಲ್ಲ
ಸುಂದರವಾದ
ಸಾಲುದೀಪ
ಹಬ್ಬ ಎನುವ
ಗದ್ದಲವಿಲ್ಲ
ಪಟಾಕಿಯ
ಸದ್ದಿಲ್ಲ
ಎಲ್ಲರ ಸಂಭ್ರಮವ
ನಾನೋಡುವಾಗ
ಮನದಲ್ಲೊಂದು ಪುಟ್ಟ
ಆಸೆ...
ಬಣ್ಣದ ಬಟ್ಟೆ ತೊಟ್ಟು
ಮನೆಯ ತುಂಬಾ
ಓಡಾಡುವ ಆಸೆ
ಅಯ್ಯೋ...
ಮರತೇ ಹೋದೆ
ಪುಟ್ಟ ಗೂಡು
ನಮ್ಮದೆಂದು...
ನಾ ಮೆಚ್ಚಿ ಬರೆಯುವಾಗಲೂ
ಕಣ್ಣಲಿ...ಬೇಡ ಎಂದರೂ
ಬರುತಿದೆ ಕಣ್ಣೀರು
ಈ ನಗುವೆಂಬ ಮುಖವಾಡ
ಇನ್ನೆಷ್ಟು ದಿನ ನಾ ತೊಡಲಿ...
ಭಾರ ಎಂದೆನಿಸುತಿದೆ
ಈ ಮುಖವಾಡದ ಸಂಗ...
ಹೇ ದೀಪಾವಳಿ
ಕೊಡುಗೆ ನೀ ನನಗೆ
ನಗುವಿನ ಖಾನಾವಳಿ.....!
