ದೈವಾಸುರರ ಯುದ್ಧ
ದೈವಾಸುರರ ಯುದ್ಧ
ದೇವತೆಗಳು ದಾನವರು
ಬೇರೆಲ್ಲೂ ಇಲ್ಲ ಜಗದೊಳಗೆ
ಅವರಿಹರು ನಮ್ಮೊಳಗೇ
ಮಾನವರ ಮನದೊಳಗೇ
ಸತ್ಯ ಧರ್ಮ ನ್ಯಾಯ ನೀತಿಗಳ
ಸದಾಚಾರ ನೈತಿಕ ಚಿಂತನೆಗಳಲಿ
ನೆಲೆಸುವರು ದೇವತೆಗಳು
ಅಸತ್ಯ ಅಧರ್ಮ ಅನೀತಿ
ದುರಾಚಾರ ದುರ್ನಡತೆಗಳಲಿ
ನೆಲೆಸುವರು ದಾನವರು
ಮನುಜನ ಮನದೊಳಗೆ
ನಡೆಯುತ್ತಲೇ ಇರುವುದು
ನಿರಂತರ ದೇವಾಸುರ ಸಮರ