ಚಿಣ್ಣರು ಆಡಿದರು ಹೋಳಿಯ
ಚಿಣ್ಣರು ಆಡಿದರು ಹೋಳಿಯ
ಪುಟ್ಟನು, ಕಿಟ್ಟನು,ರಾಮುವು,ಶಾಮುವು
ಶಂಭುವು, ರಾಜುವು,ಸೋಮುವು,ದ್ಯಾಮುವು
#Rabg barse ಹೋಳಿಯ ಆಡಲೆಂದು ಸೇರಿದರು
ಬಾನಲಿ ಮಿನುಗುವ ಚಂದದ ಕಾಮನ ಬಿಲ್ಲನು
ಚಿಣ್ಣರೆಲ್ಲರು ಕಂಡು ಬೆಗ್ಗಸ ಬೆರಗಾದರು
ಕಾಮನ ಬಿಲ್ಲಿನ ಏಳು ಬಣ್ಣವ ಧರೆಗಿಳಿಸಿದರು
ಕಿತ್ತಳೆ, ಹಳದಿ, ಹಸಿರು, ನೀಲಿ, ಊದಾನೀಲಿ
ನೇರಳೆ ಎಂದು ಮಳೆ ಬಿಲ್ಲಲಿ ಉಪಲಬ್ಧವಾದ
ಸಪ್ತ ವರ್ಣಗಳನು ಬೆರೆಸಿ ಹೋಳಿಯನು ಆಡಿದರು
ಗಗನದ ಬಿಸುಗದಿರನು ಬಿಸಿಲೊಡನೆ ಬರಲು
ಕೆಂಪು ಬಣ್ಣವನು ಅವನ ಬಳಿ ಕೇಳಿದರು
ಅರ್ಕನು ಕೊಟ್ಟ ಕೆಂಪು ಕಿರಣದ ಬಣ್ಣದೊಂದಿಗೆ
ನಲಿಯುತ ಖುಷಿಯಲಿ ಹೋಳಿಯನು ಆಡಿದರು
ತಾರಾಬಲದ ತಿಂತಿಣಿ ಜೊತೆಗೆ ತಂಗದಿರನು ಬರಲು
ತಾರಕೆಗಳು ಚಿನ್ನದ ಬಣ್ಣದಲಿ ನಿಗಿ ನಿಗಿ ಹೊಳೆಯುತಿರಲು
ಚಿಣ್ಣರು ಚಂದನ ಬಳಿ ಬೆಳದಿಂಗಳ ಬಿಳಿ ಬಣ್ಣವ ಪಡೆದರು
#Rang barse ಎನ್ನುತ ಹಾಡುತ ಹೋಳಿಯನಾಡಿದರು
ಹಚ್ಚ ಹಸಿರಿನ ದುಕೂಲವ ತಳೆದ ನಿಸರ್ಗ ದೇವಿಯ
ತನುಜೆಯೊಂದಿಗೆ ಮಾತನಾಡಿ ಪಚ್ಚೆಯ ಬಣ್ಣವ ಪಡೆದರು
ನಿಸರ್ಗ ನಿರ್ಜರೆ ಕೊಟ್ಟ ಬಣ್ಣದಲಿ ಹೋಳಿಯನು ಆಡಿದರು
ಯದೃಚ್ಛೆಯಾಗಿ ಹಾರಾಡುತ್ತಿದ್ದ ವರ್ಣರಂಜಿತ ದುಂಬಿಯ
ಬಾ ಬಾ ಎನ್ನುತ ಬಳಿಗೆ ಕರೆದು ಬಣ್ಣವನು ಕೇಳಿದರು
ಯಥೇಷ್ಟ ವರ್ಣಗಳ ಕಾಯದಿ ಹೊಂದಿದ್ದ ದುಂಬಿಯಿಂದ
ಚಿಣ್ಣರು ವಿಪುಲ ಬಣ್ಣಗಳ ಪಡೆದು ಹೋಳಿಯಾಡಿದರು
ಜುಳುಜುಳು ಹರಿವ ಮಿಸುಗುವ ನದಿಯನು ಕಂಡರು
ಅದರ ಸಿಹಿ ನೀರನು ಬಾಯಾರಿದ ಬಾಲಕರು ಕುಡಿದರು
ಅದರೊಳಗೆ ಆಡುವ ಮತ್ಸ್ಯಗಳನು ಕಂಡರು
ಅವಕೆ ಮಂಡಕ್ಕಿಯ ಭೋಜನ ಮಾಡಿಸಿದರು
ಅವುಗಳ ಚಂದದ ಬಣ್ಣವ ಪಡೆದು ಹೋಳಿಯನಾಡಿದರು
ಚೆಂದದಿ ಬಿರಿದು ನಿಂತ ವನಕುಸುಮಗಳ ಕಂಡರು
ಅವುಗಳ ಅಕ್ಷಯ ಬಣ್ಣವ ನೋಡಿ ಅಚ್ಚರಿ ಪಟ್ಟರು
ಪುಷ್ಪಗಳಿಂದ ವಿಭಿನ್ನ ಬಣ್ಣವ ಪಡೆದು ಹೋಳಿಯಾಡಿದರು
ಚಿಣ್ಣರೆಲ್ಲ ಕೂಡಿ ಬೃಹತ್ ಕಾಡಿಗೆ ಹೋದರು
ಅಲ್ಲಿ ಕುಣಿಯುವ ತನ್ವಿ ಮಯೂರಿಯ ಕಂಡರು
ಅದರ ಬಣ್ಣವ ಕಂಡು ಮೂಖವಿಸ್ಮಿತರಾದರು
ಅದರ ಬಳಿ ಬಣ್ಣವ ಕೇಳಿ ಪಡೆದು ಹೋಳಿಯಾಡಿದರು
ಚಿಣ್ಣರೆಲ್ಲ ನಿಸರ್ಗದೊಳಗಿನ ಬಣ್ಣವ ಬಳಿಸಿಕೊಂಡು
ಚಂದದಿ #Rang barse ಹೋಳಿಯ ಹಬ್ಬ ಮಾಡಿದರು.
