ಸ್ನೇಹದ ಕಣಿವೆಯಲ್ಲಿ...
ಸ್ನೇಹದ ಕಣಿವೆಯಲ್ಲಿ...
ಸ್ನೇಹದ ಕಣಿವೆಯಲ್ಲಿ ಹರಿವ
ನೆನಪು ಎಷ್ಟು ಸುಂದರ
ನೋಡಿದಷ್ಟೂ ದೂರ ಕಾಣೋ
ನೀಲಿ ದಿಗಂತದ ಅಂಬರ
ಈ ಸ್ನೇಹದೊಡಲ ನೋಡಲು
ಇಳಿದನಂತೆ ಚಂದಿರ...
ನೂರು ದಾರಿ ಸೇರಿದಾಗ
ಒಂದು ಸುಂದರ ಸಂಗಮ
ಹಲವು ಕ್ಷಣಗಳ ಸೃಷ್ಟಿ ಮಾಡುವ
ಮಧುರವಾದ ಸಮಾಗಮ
ಇದೇನೇ ಸ್ನೇಹ.. ಇದೆಲ್ಲ ಸ್ನೇಹ...
ಸ್ನೇಹದ ಸಿಹಿ ಸಾಗರದಲ್ಲಿ
ನೆನಪಿನ ಅಲೆ ಸೋಕಿವೆ
ಕರೆದಿವೆ ಇನ್ನಷ್ಟು ದೂರಕೆ
ಸಾಗಲು ಮತ್ತೆ ಮುಂದಕೆ
ಪಯಣ ನಿರಂತರ.. ಈ ಸ್ನೇಹ ಅಮರ...
ಎಲ್ಲೋ ಹೊರಟಿರುವ ಎಲ್ಲ ಹೆಜ್ಜೆಗಳು
ಮರಳಿವೆ ಸ್ನೇಹಕಾಗಿ
ಹೆಜ್ಜೆ ಗುರುತುಗಳೆಲ್ಲ ಉಳಿದಿವೆ
ನೆನಪಿನ ಮುದ್ರೆಯಾಗಿ
ಈ ಸ್ನೇಹ ತುಡಿತ.. ಈ ಸ್ನೇಹ ಶಾಶ್ವತ...
