ಪ್ರೀತಿಯೇ ಇರದ ನಾಡಿನಲ್ಲಿ
ಪ್ರೀತಿಯೇ ಇರದ ನಾಡಿನಲ್ಲಿ
ಪ್ರೀತಿಯೇ ಇರದ ನಾಡಿನಲ್ಲಿ ನಾನಿರುವೆ
ಯೋಚಿಸುತ್ತ ನೀನೆಲ್ಲಿ ಕುಳಿತಿರುವೆ
ಕಂಬನಿ ಜಾರಿದೆ ನಿನ್ನ ಕಣ್ಣಂಚಿನಲ್ಲಿ
ಜಾರಿದ ಹನಿಯಲ್ಲಿ ನಾ ಕಾಣುವೆ ನಿನ್ನಲ್ಲಿ
ನಮ್ಮ ಭೇಟಿಗೆ ದಾರಿಯಿಲ್ಲ
ನಮ್ಮ ಪ್ರೀತಿಗೆ ಮಾತುಯಿಲ್ಲ
ಜೊತೆಗಿದ್ದ ಪಯಣ ಕನಸಂತಾಯಿತಲ್ಲ
ಕನಸಿನ ಪ್ರೀತಿಗೆ ಇನ್ನೂ ಬೆಳಕಿಲ್ಲ
ಪ್ರೀತಿಯ ದೋಣಿಯಲ್ಲಿ ಸಾಗುತ ಬಂದೆವು
ಮೌನದ ಕಡಲಲ್ಲಿ ತೇಲುತ್ತಾ ಬಂದೆವು
ಪ್ರೇಮದ ದಡವ ಸೇರಲು ಹೀಗೆ....
ಸೇರಿದ ದಡವು ತೋರಿದೆ ದಾರಿಯ
ಬೆರಳಂಚಿನ ಪ್ರೀತಿಯ ಕರಗಿಸಲು
ದಾರಿಯೂ ಮುರಿದು ಪ್ರೇಮವು ಜಾರಿ
ಪ್ರೀತಿಯು ಸರಿಯಿತು ಇನ್ನೂ ಹಿಂಹಿಂದೆ
