STORYMIRROR

JAISHREE HALLUR

Abstract Children Stories Classics

4  

JAISHREE HALLUR

Abstract Children Stories Classics

ಹೂವ ಮಾರುವ ಹುಡುಗಿ

ಹೂವ ಮಾರುವ ಹುಡುಗಿ

1 min
356

ಹೂವು ಬೇಕೆಂದು ಸಂತೆಯೊಳು ನಿಂತು ಬೇಡಿದೆ,

ಹೂವ ತರುವವಳ ಕಾಯ್ದೆ.


ಆವ ಗಳಿಗೆಯಲಿ ಮಿಂಚಿ ಪ್ರತ್ಯಕ್ಷವಾದಳೋ.. 

ಆ ಪುಟ್ಟ ಪೋರಿಯ ಕೈಲಿ ಹೂವಮಾಲೆ...

ಒತ್ತೊತ್ತಾದ ಹೆಣೆದ ಮಲ್ಲೆ. 


ನೋಟೊಂದನು ನೀಡಿ ಹೂವ ಕೊಳ್ಳುವಾಸೆ, 

ಯಾಕೋ ಮೈಮರೆತು ನಿಂತೆ, ಎದೆತಾಳತಪ್ಪಿದಂತೆ.


ಕಾದ ಕಬ್ಬಿಣಕೆ ಸಲಾಖೆಯೇಟಿನಂತೆ..

ಗಡಚ್ಚಿಕ್ಕುವ ಗಾಡಿ ಸದ್ದಿಗೆ ಎಚ್ಚೆತ್ತು, 

ಮನೆಯತ್ತ ಸಾಗಿದೆ ಹೇಗೋ ಕಾಣೆ! 

ಹೂವ ಕೊಳ್ಳದೇ ಬರಿಗೈಲಿ ಬಂದಿದ್ದೆ.


ಕನಸಲ್ಲೂ ಬಂದು ಕಾಡಿದ ಆ ಪೋರಿ, 

ಮುಡಿತುಂಬ ಮಲ್ಲೆದಂಡೆಮುಡಿದು, 

ಗಮ್ಮನೆ ಅಮರಿ......ಕಣ್ಬಿಟ್ಟೆ .

ಮಬ್ಬಿತ್ತು ಇನ್ನೂ ಸರೀರಾತ್ರಿ...

ಕಳೆಯಲು ಬಹಳ ಹೊತ್ತಿತ್ತು...


ಚಿತ್ತ ಕದಡಿ ಮನಸೆಲ್ಲ ಅಯೋಮಯ..

ಮತ್ತದೇ ನೆನಪಲ್ಲಿ ಹೂವ ಮಾರುವ

ಹುಡುಗಿ ನಸುನಕ್ಕ ದಿಟ್ಟ ನಗೆ...



Rate this content
Log in

Similar kannada poem from Abstract