STORYMIRROR

Vijaya Bharathi.A.S.

Classics Inspirational Children

4  

Vijaya Bharathi.A.S.

Classics Inspirational Children

ಆಡ ಬನ್ನಿ ಮಕ್ಕಳೇ

ಆಡ ಬನ್ನಿ ಮಕ್ಕಳೇ

1 min
261


ಬನ್ನಿ ಬನ್ನಿ ಮಕ್ಕಳೇ

ಆಟದ ಮೈದಾನಕೆ  

ಓಡಿ ಬನ್ನಿ ಎಳೆಯರೇ 

ಕೂಡಿ ಆಡಿ ನಲಿಯುವ


ಇಹುದಿಲ್ಲಿ ಜೋಕಾಲಿ

ಏತ ಏಣಿ ಜಾರುಗುಪ್ಪೆ 

ತಿರುಗುವಾ ತೊಟ್ಟಿಲು 

ವಿಧವಿಧದಾ ಆಟಿಕೆಗಳು


ಕಡಲಂಚಿನ ಈ ತಾಣ

ಮರಳು ಇಹುದು ಎಲ್ಲೆಲ್ಲೂ 

ಮರಳಿನಲ್ಲಿ ಗೂಡು ಕಟ್ಟಿ

ಸಂತಸದಿ ನಲಿಯುವ


ಆಗಸದಲಿ ಕಾರ್ಮೋಡ 

 ಕಾಣುತ್ತಿವೆ ಎಲ್ಲೆಲ್ಲೂ 

ಬೇಗ ಬೇಗ ಆಟ ಮುಗಿಸಿ 

ಮನೆಗೆ ಓಡಿ ಮಕ್ಕಳೇ


Rate this content
Log in

Similar kannada poem from Classics