ಶಾಲಾ ಪ್ರಾರಂಭೋತ್ಸವ
ಶಾಲಾ ಪ್ರಾರಂಭೋತ್ಸವ
1 min
394
ಬನ್ನಿ ಮಕ್ಕಳೇ ಬನ್ನಿರಿ ....
ಇಂದು ಶಾಲಾ ಪ್ರಾರಂಭೋತ್ಸವ
ಕಲಿಕೆಯ ಆನಂದಕ್ಕೆ ನವವೈಭವ
ಕನಸಿನ ರೆಕ್ಕೆಗಳ ಬಡಿಯುತ ಬನ್ನಿ
ಮನವ ಜ್ಞಾನದೆಡೆಗೆ ಸೆಳೆದು ತನ್ನಿ
ಪಠ್ಯಗಳಲ್ಲಿ ಮೌಲ್ಯದ ಸಿಹಿ ಬೆರೆಸಿ
ಕ್ರೀಡೆಯಲ್ಲಿ ಜೀವನ ಕಲೆ ತೋರಿಸಿ
ಕಲಿಸುವರು ಗುರುಗಳು ಮುದದಿಂದ
ನಿಮಗಿಲ್ಲ ಯಾವುದೇ ನಿರ್ಬಂಧ
ಪ್ರತಿಭೆಯ ಬೆಳಗಲು ಇಲ್ಲಿದೆ ವೇದಿಕೆ
ವಿದ್ಯಾರ್ಥಿ ವ್ಯಕ್ತಿತ್ವದ ಸರ್ವೋದಯಕೆ
ಗುರಿಯೆಡೆಗೆ ನಡೆಸುವ ಬೆಂಬಲವಿದೆ
ಗೆಲುವಿನ ಹೊನಲಿಗೆ ಹಂಬಲವಿದೆ
ಪುಸ್ತಕಗಳೆಂಬ ಜ್ಯೋತಿಯ ಬೆಳಕಲಿ
ಜಡತನ ಅಳಿದು ಹೊಸತನ ಮೂಡಲಿ
ಭಾಷೆಗಳಿಂದ ಭಾವಗಳು ಚಿಗುರಲಿ
ವಿಷಯಗಳು ವೈಚಾರಿಕತೆ ಅರಳಿಸಲಿ
ಗೆಳೆತನದ ಸಂತಸದಲಿ ನಲಿಯಿರಿ
ನಿರಂತರ ತರಗತಿಗೆ ಹಾಜರಾಗಿರಿ
ಅಂದಿನ ಪಾಠವ ಅಂದೇ ಕಲಿಯಿರಿ
ವಿದ್ಯಾಬಲದಿಂದ ವಿಶಿಷ್ಟರಾಗಿರಿ
ಬನ್ನಿ ಮಕ್ಕಳೇ ಬನ್ನಿರಿ ಶಾಲೆಗೆ
ಸುಜ್ಞಾನದ ಸತ್ಕಾರ ನೀಡುವ ಮನೆಗೆ
