ಕಾವ್ಯ ದಿನ
ಕಾವ್ಯ ದಿನ
ವಿಶ್ವ ಕಾವ್ಯ ದಿನದ ಶುಭಾಶಯಗಳು
ಕಲ್ಪನೆಯ ಕೂಸೊಂದು ಜನಿಸಿರಲು
ಭಾವಗಳ ತೊಟ್ಟಿಲಿನಲಿ ತೂಗಿರಲು
ಪದ ಪ್ರಾಸ ಲಯ ರೂಪ ತಾಳಿರಲು
ಕವನವೆಂಬ ನಾಮವ ಪಡೆದಿರಲು
ಮನದ ದುಗುಡಗಳಿಗೆ ನೀನೇ ಸಂಗಾತಿ
ಸಂತಸಕೆ ಸಾಧನೆಗೆ ಕವನವೇ ಸ್ಫೂರ್ತಿ
ಬರೆದಂತೆ ತರುವೆ ಕವಿಯೆಂಬ ಕೀರ್ತಿ
ಕವಿತೆಯೆಂಬ ಮಿತ್ರ ತರುವ ಉನ್ನತಿ
ಹೊಸಲೋಕವೊಂದರ ಅನಾವರಣ
ಕವನಗಳೊಂದಿಗೆ ಸಾಗಿದೆ ಪಯಣ
ಸುಂದರ ಅಭಿವ್ಯಕ್ತಿಗೆ ಮನಮಂಥನ
ವಾಗ್ದೇವಿಯ ಲಾಲಿತ್ಯವಿದು ಕವನ
ಸೌಂದರ್ಯದ ರಸಧಾರೆಯೇ ಕಾವ್ಯಕುಸುಮ!
ಕವಿಯ ಮನೆಯಂಗಳದಲಿ ಹರಡಿ ಘಮ!!
ಸೆಳೆದಿದೆ ಸಹೃದಯ ದುಂಬಿ ಬಳಗವನು!
ಜೇನ ಅನುಭವ ನೀಡಿ ಪಡೆದಿದೆ ಧನ್ಯತೆಯನು!!
