ಮಲೆನಾಡ ಮಡಿಲಲ್ಲಿ
ಮಲೆನಾಡ ಮಡಿಲಲ್ಲಿ
ಸುತ್ತಲೂ ಹಸಿರ ವನರಾಶಿಯ ಸಿರಿ
ನಟ್ಟ ನಡುವೆಯಲ್ಲೊಂದು ಹೆಂಚಿನ ಮನಿ
ಅದೇ ನಮ್ಮ ಪುಟ್ಟ ಅರಮನಿ
ಇರುವುದು ಮಳೆಯ ನಾಡಲ್ಲಿ..!!
ರೊಯ್ಯನೆ ಗಾಳಿ ಬೀಸಲಿ
ತಂಪಾದ ಮಳೆ ಎಷ್ಟಾದರೂ ಸುರಿಯಲಿ
ಬಂದೇ ಬರುತಾನಲ್ಲ ಆಗಸದಲ್ಲಿ ರವಿ
ನಮಗೆಂದೆಂದೂ ಈ ಮನೆಯೇ ಸರಿ..!!
ಹಪ್ಪಳ ಸಂಡಿಗೆ ಕೋಡುಬಳೆ ಚಕ್ಕುಲಿ
ಇರಲಿ ಜೊತೆಗೊಂದು ಉಪ್ಪಿನಕಾಯಿ
ನಡು ನಡುವೆ ಓದಿನೊಂದಿಗೆ ಇರಲಿ
ಸಿಹತಿನಿಸಿನ ಸವಿಯಾದ ಸಿಹಿ..!!
ಇರಲೇಬೇಕು ಮನೆಯ ತುಂಬಾ
ಮುದ್ದಾದ ಮಾತಿನ ಸವಿ
ಅದನರಿತು ಮಳೆಯ ನಾಡಲ್ಲಿ
ಬಾಳುವನನೇ ನಿಜವಾದ ಕವಿ..!!
