ಗುರುವೆಂದರೆ..?
ಗುರುವೆಂದರೆ..?
ಗುರುವೆಂದರೆ ಅಜ್ಞಾನವ ತೊಲಗಿಸಿ ಜ್ಞಾನವ ನೀಡುವರು
ಗುರುವೆಂದರೆ ವಿಧ್ಯೆ ನಯ ವಿನಯವ ಕಲಿಸಿದವರು
ಗುರುವೆಂದರೆ ಸುಜ್ಞಾನದ ಹಾದಿಯ ತೋರಿಸಿದವರು
ಗುರುವೆಂದರೆ ಶಿಷ್ಯವೆಂಬ ಜ್ಯೋತಿಗೆ ಬತ್ತಿಯಾದವರು. |
ಗುರುವೆಂದರೆ ಶಿಸ್ತಿನ ಬದುಕು ಕಲಿಸೊ ಸಿಪಾಯಿವರು
ಗುರುವೆಂದರೆ ಶಾಲ ಗರ್ಭ ಗುಡಿಯ ದೇವರವರು
ಗುರುವೆಂದರೆ ನಿಜ ಬದುಕಿನ ಮಾರ್ಗದರ್ಶಕರವರು
ಗುರುವೆಂದರೆ ನಮ್ಮ ಬದುಕಿನ ದ್ರೋಣಾಚಾರ್ಯರು.
ಗುರುವೆಂದರೆ ಉತ್ತಮ ಸಮಾಜ ನಿರ್ಮಾಪಕರು
ಗುರುವೆಂದರೆ ತತ್ವ ಭೋದಿಸೊ ಜ್ಞಾನಿಯವರು
ಗುರುವೆಂದರೆ ನೀತಿ ಮಾರ್ಗದಲ್ಲಿ ನಡೆವವರು
ಗುರುವೆಂದರೆ ಗುರಿಯ ಮಾರ್ಗ ತೋರುವವರು. |
ಗುರುವೆಂದರೆ ಸಮಾಜದಿ ನಿಸ್ವಾರ್ಥ ಜೀವಿಯವರು
ಗುರುವೆಂದರೆ ಎಲ್ಲರ ಬಾಳಿಗೆ ಬೆಳಕಾಗುವವರು
ಗುರುವೆಂದರೆ ಸರಸ್ವತಿ ಮಾತೆಯ ಅವತಾರದವರು
ಗುರುವೆಂದರೆ ಫಲಾಪೇಕ್ಷೆ ಎಂದೂ ಬಯಸದವರು. |
ಗುರುವೆಂದರೆ ಸರಿ ತಪ್ಪು ತಿಳಿಸುವ ನ್ಯಾಯಾದೀಶರು
ಗುರುವೆಂದರೆ ವಿಧ್ಯೆ ದಾನದ ಹರಿಕಾರರು
ಗುರುವೆಂದರೆ ನಿಜವಾದ ಸಮಾಜ ಸುಧಾರಕರವರು
ಗುರುವೆಂದರೆ ಬ್ರಹ್ಮ ವಿಷ್ಣು ಮಹೇಶ್ವರ ಸಮಾನರು. |