ನಾನು ಮತ್ತು ದೇಶ
ನಾನು ಮತ್ತು ದೇಶ
ಎಲ್ಲರೂ ಬನ್ನಿರಿ ರಾಷ್ಟ್ರದ್ವಜಕ್ಕೆ ಗೌರವ ಸಲ್ಲಿಸೋಣ
ಸೈನಿಕ ಬೀಜವನ್ನು ಯುವಕರೇ ಒಮ್ಮೆ ಬಿತ್ತರಿಸೋಣ
ಜೀವ ಇರುವ ತನಕ ದೇಶಕ್ಕಾಗಿ ಹೋರಾಟಮಾಡುವೆ
ಸೈನಿಕರಂತೆ ದೇಶಕ್ಕಾಗಿ ವೀರ ಮರಣವ ಅಪ್ಪುವೆ
ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ
ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ
ನಮ್ಮ ಮುದ್ದು ಕೂಸುವನ್ನು ಸೈನಿಕರಂತೆ ಬೆಳೆಸುತ್ತೇನೆ
ಶಿವಾಜಿಯ ವೀರ ಸಾಹಸ ಕತೆಯನ್ನು ಹೇಳುತ್ತಿದ್ದೇನೆ
ದುಷ್ಟ ಬ್ರಿಟಿಷರಂತೆ ಬರುವ ರಕ್ಕಸರನ್ನು ಕೊಲ್ಲುತ್ತೇನೆ
ಇನ್ನೂ ಕಷ್ಟಪಡುತ್ತೀರಾ ಅಮ್ಮನ ಮಡಿಲ ರಕ್ಷಿಸುತ್ತೇನೆ
ವೀರರಂತೆ ರಣರಂಗದಲ್ಲಿ ಹೋರಾಟ ಮಾಡುತ್ತೇನೆ
ದುಷ್ಟ ಶಿರವನ್ನು ತಾಯಿಗೆ ಅಭಿಷೇಕ ಮಾಡುತ್ತೇನೆ
ನರನಾಡಿನಲ್ಲೂ ದೇಶ ಅಮ್ಮ ಎಂದೇ ಕೇಳುತ್ತಿದೆ
ಯುವಕರಲ್ಲೂ ದೇಶಪ್ರೇಮ, ಭಕ್ತಿಯು ಬೆಳೆದಿದೆ
ಅಮ್ಮನ ಮಡಿಲ ಮಲಿನಗೊಳಿಸಿದ್ದಾರೆ ಹಲವಾರು
ನಮ್ಮ ದೇಶದ ಮಾತನಾಡಲು ಅವರು ಯಾರು?
ನಾನೇ ನಮ್ಮ ದೇಶಕ್ಕಾಗಿ ಅರ್ಪಣೆ ಮಾಡುವೆನು
ಜೋರಾಗಿ ಭಾರತ ಮಾತಾ ಕೀ ಜೈ ಹೇಳುವೆನು
ಮಲಗಿದರು,ನಮ್ಮ ದೇಶದ ಚಿತ್ರಣ ಕಂಡುಬರುವುದು ಪುನಃ ಸಂಸ್ಕೃತಿ, ಸಾಹಿತ್ಯ ಕಮಲದಂತೆ ಅರಳುವುದು