ಶಿರ್ಷಿಕೆ :ಗೌತಮ ಬುದ್ಧ
ಶಿರ್ಷಿಕೆ :ಗೌತಮ ಬುದ್ಧ
ಲೇಖಕರು:ಕಿರಣ್ ಬಿನ್ನಾಳ್. ಬೆನಕನಾಳ
ಕವನ
ಜನಿಸುವಾಗಲೆ ಮಹಾಪುರುಷನಾಗಿಹನು//
ನೀಳಬಾಹು, ವಿಶಾಲ ಎದೆ ಊರ್ದ್ವ ಮುಖ ರೋಮಧಾರೆ ಉಳ್ಳವನು//
ನೀಳ ಕೈಗಳ ಮೃದು ಹಸ್ತ ನವಿರಾದ ಪಾದ ಹೊಂದಿದವನು//
ವಿಭೂತಿ ಪುರುಷರುಳ್ಳ ಸರ್ವ ಲಕ್ಷಣ ಉಳ್ಳ ಶಾಂತಿ ಧೂತ ಮಹಾನ್ ಗೌತಮ ಬುದ್ಧನಿವನು. //
ಬೌದ್ಧ ಧರ್ಮದ ಹರಿಕಾರ ಗೌತಮ ಬುದ್ಧ//
ಆಧ್ಯಾತ್ಮ ತತ್ವಗಳಿಂದ ಜಗತ್ತನ್ನೆ ಗೆದ್ದ//
ಕ್ಷಣಿಕ ಸುಖಕ್ಕಾಗಿ ಸಾಗರದಷ್ಟು
ದುಃಖ ಪಡಬೇಡವೆಂದ//
ಆಸೆಯೆ ದುಃಖಕ್ಕೆ ಮೂಲವೆಂದು
ಇಡಿ ಜಗತ್ತಿಗೆ ಸಾರಿದ.//
ಮನಸ್ಸು ಪ್ರೀತಿಯಿಂದ ಕೂಡಿರಲಿ//
ನಕಾರಾತ್ಮಕ ಚಿಂತನೆಗಳಿಂದ ದೂರವಿರಲಿ//
ಭೂತ ಭವಿಷ
್ಯದ ಬಗ್ಗೆ ಚಿಂತಿಸದಿರು//
ವರ್ತಮಾನದಲಿ ಬಂದ ಫಲಾಫಲ ದೂರ ತಳ್ಳದಿರು//
ಹೊರಗೆ ಪ್ರಾಪಂಚಿಕ ಸುಖಭೋಗ ದೊರೆವುದು//
ನಮ್ಮನಸಿನ ಸಂತೋಷದಿಂದ ನೆಮ್ಮದಿ ದೊರೆವುದು//
ಕಿತ್ತೊಗೆ ನಿಮ್ಮೊಳಗಿನ ಬಯಕೆಗಳನ ಸರಮಾಲೆ//
ದೊರೆವುದು ನಿನಗೆ ಜ್ಞಾನೋಧಯವೆಂಬ ಹೂಮಾಲೆ//
ತೆಗೆದುಕೊ ಮನಸೆಂಬ ಮರ್ಕಟವ ಹತೋಟಿಯಲ್ಲಿಡಲು ಕ್ರಮ//
ಹತೋಟಿಯಲ್ಲಿಡದಿದ್ದರೆ ನಿನ್ನ ಸಾಧನೆ ಶೂನ್ಯಕೆ ಸಮ//
ಸ್ವಾರ್ಥವ ತ್ಯಜಿಸಿ ನಡೆ ನಿಸ್ವಾರ್ಥದ ಹಾದಿಲಿ//
ದಯೆ, ಸಹಾನುಭೂತಿ ಇರಲಿ ಇತರೆ ಜೀವ, ನಿರ್ಜೀವಗಳಲಿ //
ಎಂಬ ಈ ತತ್ವಗಳ ಜಗಕೆ ಸಾರಿ ಹೇಳಿದ ಬುದ್ಧ //
ಜ್ಞಾನೋದಯದಿ ಜಗವ ಗೆದ್ದು ವಿಶ್ವಕ್ಕೆ ಬೆಳಕಾದ