ಅಮ್ಮನ ಕೈ ತುತ್ತು
ಅಮ್ಮನ ಕೈ ತುತ್ತು
ಅಮ್ಮನ ಕೈ ತುತ್ತು
ಮರೆಯಬಹುದೇ ನೀ ಅಮ್ಮನ ಕೈ ತುತ್ತು
ಹುಟ್ಟ್ಟಿದಾಗಲೇ ಕೊಟ್ಟಳಲ್ಲ ನಿನಗೆ ಸಿಹಿ ಮುತ್ತು
ಅವಳೇ ಒಂದು ಕೋಟಿ ಸ್ವತ್ತು, ಆದರೆ ನಿನ್ನ ಷರತ್ತು
ಕೇಳಲ್ಪಟ್ಟು ಅವಳು ಅರ್ಧ ಸತ್ತಳು ಅತ್ತು, ಅತ್ತು....
ಆದರೂ ಬಿಟ್ಟು ಕೊಡದೆ ತನ್ನ ಗತ್ತು
ಹೊರಟಳಾ ತಾಯಿ ಗಂಟು ಮೂಟೆಯನ್ನು ಹೊತ್ತು
ಕಂಡೂ ಕಾಣದ ದಾರಿಯಲಿ ತನ್ನನೇ ತಾ ಮರೆತು.....
ಮರೆಯಬಹುದೇ ನೀ ಅಮ್ಮನ ಕೈ ತುತ್ತು
ಹುಟ್ಟ್ಟಿದಾಗಲೇ ಕೊಟ್ಟಳಲ್ಲ ನಿನಗೆ ಸಿಹಿ ಮುತ್ತು
ಒಂದೊಂದು ಕೈತುತ್ತಿಗೂ ಕೊಟ್ಟಳು ಅಮ್ಮ ನಿನಗೆ ಪ್ರೀತಿ
ನಿನಗೆ ಕಾಣದಾಯಿತೇ ಅವಳ ಪರಿಸ್ಥಿತಿ
ದುಖ್ಖವನು ನುಂಗಿ ತೊಡಿಸಿದಳು ನಿನಗೆ ಅಂಗಿ
ಅವಳ ಕಣ್ಣೀರು ಕಾಣದಾಯಿತೋ ನಿನಗೆ ಕಮಂಗಿ
ತಾನೆಂದು ಬಿಸಿಯೂಟ ಉಣಲಿಲ್ಲ, ತಂಗಳ ತಿಂದು
ತಣ್ಣೀರಲಿ ಮಿಂದು, ನಿನಗಾಗಿ ದುಡಿದಳು ನೊಂದು, ಬೆಂದು!!
ನೀ ಯಾರಿಗಾದೆಯೋ ತಿಳಿವಲ್ದು ಎಲೆ ಮಾನವ
ತಾಯಿಗಾದರೂ ಆಗಿ, ನಿನ್ನ ಪಾಪವ ತೊಳೆದುಕೊ ದಾನವ
ಮರೆಯಬಹುದೇ ನೀ ಅಮ್ಮನ ಕೈ ತುತ್ತು
ಹುಟ್ಟ್ಟಿದಾಗಲೇ ಕೊಟ್ಟಳಲ್ಲ ನಿನಗೆ ಸಿಹಿ ಮುತ್ತು
ದೇವರ ಧ್ಯಾನದಿ ಮರೆಯಲು ಯತ್ನಿಸಿದಳು ಸಂಸಾರವ
ಮನೆ ಮನವ ಗುಡಿಸಿ ಸಾರಿಸಿದನು ಕಂಡ ಆ ದೈವ
ಮನ ಮಿಡಿದು ಅಕ್ಕರೆಯಿಂದ ಸಕ್ಕರೆಯ ಕೊಟ್ಟು
ಮನೆ ಮನದಿ ನೆಮ್ಮದಿಯ ಕೊಟ್ಟು
ಕಾಪಾಡಿತು ಎನ ತಾಯಿಯಾದ ಮಗುವ
ಈ ತಾಯಿಯ ಪ್ರೀತಿ ಕಂಡು ತಾನಾಯಿತು ಕುರುಡು
ಆ ದೈವ, ನಿನಗೊಲಿಯದಿದ್ದರೆ ನಾ ಗಂಧದ ಕೊರಡು
ನಾ ಮುಕ್ತಿಯ ಮಾರ್ಗವ ತೋರದಿದ್ದರೆ ಈ ಜೀವ ಬರೀ ಬರುಡು
ಮರೆಯಬಹುದೇ ನೀ ಅಮ್ಮನ ಕೈ ತುತ್ತು
ಹುಟ್ಟ್ಟಿದಾಗಲೇ ಕೊಟ್ಟಳಲ್ಲ ನಿನಗೆ ಸಿಹಿ ಮುತ್ತು
ಇದ್ದಾಗ ನೆನೆಯಲಿಲ್ಲ ನೀ, ಸತ್ತಾಗ ನನೆಯುವೆಯಾ ಓ ಕರುಳೇ
ನಿನ್ನ ತಾಯಿಯ ಪ್ರೀತಿಯೇ ನಿನಗೆ ಹರಳು ಓ ಅರುಳು ಮರುಳೇ.....
ಅದಿಲ್ಲದೆ ನಿನ್ನ ಜೀವನ ಬರೀ ಮರುಳು ಮರುಳು......
ಮರೆಯಬಹುದೇ ನೀ ಅಮ್ಮನ ಕೈ ತುತ್ತು
ಹುಟ್ಟ್ಟಿದಾಗಲೇ ಕೊಟ್ಟಳಲ್ಲ ನಿನಗೆ ಸಿಹಿ ಮುತ್ತು.....
