ಅಮ್ಮಾ
ಅಮ್ಮಾ
ನವಮಾಸ ಉದರದಲ್ಲಿಟ್ಟು ಪೋಷಿಸಿ
ತನ್ನ ಕನಸುಗಳನ್ನೆಲ್ಲಾ ಬದಿಗೊತ್ತಿ
ಮಗುವನ್ನು ಸಲಹುವಳು ಪ್ರೀತಿ ಬೆರೆಸಿ
ಬಾಳ ಪಯಣದಿ ಸಂಸಾರದ ನೇಗಿಲನೆತ್ತಿ
ಹಗಲಿರುಳು ಶ್ರಮಿಸುವಳು ಬೆವರು ಸುರಿಸಿ
ತನ್ನವರ ಖುಷಿಯಲ್ಲಿಯೇ ತನ್ನ ಖುಷಿ ಕಾಣುವಳು
ಜಾರಿ ಬಂದ ಕಣ್ಣೀರನ್ನು ಸೆರಗ ತುದಿಯಲಿ ಒರೆಸಿ
ಸಂಸ್ಕಾರವೆಂಬ ಬೀಜ ಬಿತ್ತಿ ಮೊದಲ ಗುರುವಾಗುವಳು
ಜ್ಞಾನವೆಂಬ ಬೆಳಕನ್ನು ಕರುಳಕುಡಿಯೊಳಗೆ ಪಸರಿಸಿ
ಇನ್ನೊಂದು ಮನೆಯ ಬೆಳಕಾಗು ಮಗಳೇ ಎಂದು
ತಾ ನೋವುಂಡು ಕಾಪಿಟ್ಟ ಮಗಳನ್ನು ಕೊಡುವಳು
ಮಗಳು ಚೀರಿಡುವಾಗ ಹೆರಿಗೆ ನೋವು ಎಂದು
ತಾನೊಳಗೊಳಗೇ ಸಂಕಟಪಟ್ಟರೂ ಧೈರ್ಯ ತುಂಬುವಳು
ಇಷ್ಟೆಲ್ಲಾ ನೋವುಂಡು ತ್ಯಾಗ ಜೀವನ ನಡೆಸುವ ಹೆಣ್ಣು
ತನ್ನವರ ಖುಷಿ, ನೋವು, ಸಂಕಟಗಳ ಅರಿಯುವ ಕಣ್ಣು
ತನ್ನಮ್ಮನ ಗರ್ಭದಿಂದ ಚಿಗುರೊಡೆದು ಹೊರಬಂದ ಹೂವು
ಅವಳನ್ನರಿತು ಅವಳಿಗೆ ಖುಷಿಯನ್ನೀವ ಮಕ್ಕಳಾಗೋಣ ನಾವು.
