STORYMIRROR

Gireesh pm Giree

Thriller Others

2  

Gireesh pm Giree

Thriller Others

ಬಣ್ಣಬಣ್ಣದ ಬದುಕು

ಬಣ್ಣಬಣ್ಣದ ಬದುಕು

1 min
118

ನೀನು ನಾನೆಂದು ಬೇಧವ ಮರೆತು ಬಾಳೋಣ

ಜೊತೆಯಲ್ಲಿ ಕುಳಿತು ಊಟವ ಮಾಡೋಣ

ಎಲ್ಲರೂ ಸ್ನೇಹ ಸಮಾಧಾನದಿಂದ ಇರೋಣ

ಜೀವನವೇ ಕೆಲ ಸಮಯವೆಂದು ತಿಳಿಯೋಣ


ಒಬ್ಬರ ದುಃಖವ ಒರೆಸುವ ಕೈಯಾಗಲಿ ನಿಂದು

ಆಪತ್ಕಾಲದಲ್ಲಿ ನಮ್ಮ ಹಿಂದೆ ನಿಂತವನೇ ನಿಜವಾದ ಬಂದು

ಯಾರ ಅನ್ಯತಾ ಬಯಸಬೇಡ ನೀ ಎಂದೆಂದೂ

ಯಾರಲ್ಲೂ ಹೇಳಬೇಡ ನಾನು ನನ್ನ ತನ್ನದೆಂದು


ಜಗದ ಮಾಯೆಗೆ ತಲೆಬಾಗಬೇಕಾದ ಜನ್ಮ

ತನ್ನ ಕಾಲ ಮುಗಿದ ಮೇಲೆ ಸಾವಿಗೆ ಮೌನ

ಅಂದುಕೊಂಡಂತೆ ಸುಲಭವಲ್ಲ ಜೀವನ

ಅದರ ನಿಜ ಸಾರ ಅರಿತರೆ ಜೀವನವೇ ಪಾವನ 


Rate this content
Log in

Similar kannada poem from Thriller