ಸುನಾಮಿ
ಸುನಾಮಿ
ಕಡಲು ನೋಡಲು ಸುಂದರವೆನಿಸುವುದು
ಸಣ್ಣ ತೆರೆಗಳ ಅಪ್ಪುವಾಗ
ಕಾಣದ ಸುನಾಮಿಯೊಂದು
ಅಲೆಗಳಾ ಬೆನ್ನ ಹಿಂದೆ ಅಡಗಿರಬಹುದು
ಹೆಣ್ಣು ಮೌನದಲ್ಲಿ
ಅಂದವೆನಿಸುವಳು
ಅಂತರಾಳದ ಭಾವ
ಅರಿತಿರುವವರು ಮಾತ್ರವೇ
ಅವಳಾ ಮೌನದ ಅರ್ಥ ಕಂಡುಹಿಡಿಯಬಲ್ಲರು
ಇವಳಲ್ಲು ಒಂದು ಸುನಾಮಿಯುಂಟು
ಅಪ್ಪಳಿಸಲು ಬಿಡದಿರಿ ಕೆಣಕಿ ಅವಳ
