ಬಾನಂಗಳ
ಬಾನಂಗಳ
ನೋಡ ಬನ್ನಿ ನೋಡ ಬನ್ನಿ
ಹಾರುತಿಹ ಹಕ್ಕಿಗಳಾ
ಲೋಹದಾ ಹಕ್ಕಿಗಳಾ
ನೀಲಿ ಬಾನಿನಂಗಳದಲಿ
ಸಾಗುತಿರುವ ಹಕ್ಕಿಗಳಾ
ನೋಡಬನ್ನಿ ನೋಡಬನ್ನಿ
ಲೋಹದಾ ರೆಕ್ಕೆಗಳ ಬಿಚ್ಚಿ
ಸುಯ್ಯನೇ ಹಾರುತಿಹಾ
ಲೋಹದ ಹಕ್ಕಿಗಳಾ
ಆತ್ಮ ನಿರ್ಭರತಯಾ
ಪ್ರತೀಕವೆನಿಸಿ ಸಾಗುತಿಹ
ಅಂತರಿಕ್ಷದಿ ಅದ್ಭುತಗಳ
ಸೃಷ್ಟಿಸುತಾ ಹಾರುತಿಹ
ವೈಮಾನಿಕ ಹಕ್ಕಿಗಳಾ
ನೋಡಬನ್ನಿ ನೋಡಬನ್ನಿ