STORYMIRROR

venu g

Romance

2  

venu g

Romance

ಅವಳಿಗೋಸ್ಕರ

ಅವಳಿಗೋಸ್ಕರ

1 min
220

ನುಡಿಯದ ಮತ್ತೊಂದು ಇದೆ

ನೀ ಗಮನವಿಟ್ಟು ಕೇಳು ನನ್ನ ಓಲವೇ

ನೀ ಎಷ್ಟೇ ಸುತ್ತಿದ್ದರೂ ನನ್ನತರಾ ಹುಡುಗ ಸಿಗನೇ


ಈ ಭೂಮಿ ಬಾನಿಗೂ..... ಆಸರೆ ಯಾರೇ

ಆದರೆ ನೀ ಹೋಗು ಪ್ರತಿ ಜಾಗಕ್ಕೂ ಕಾವಲು ನಾ ಇರುವೇ

ಏನೇ ಆದರೂ ನಾ ನಿನ್ನೊಂದಿಗೆ ಇರುವೆ


ಎಂದು ಹೃದಯದ ಹಳೆಯಲಿ ಸಹಿ ಮಾಡಿ ಕೊಡುವೇ

ಈ ಜಗಕೆ ಆ ಸೂರ್ಯ ಬೆಳಕು

ಆದ್ರೆ ನನ್ನ ಪ್ರಪಂಚಕ್ಕೆ ನೀ ತಾನೇ ದೀಪದ ಚಿಲುಮೆ


ನನ್ನ ಆಸರೆ .... ನಾ ನಿನ್ನ ಕೈಸೇರೇ

ಎಲ್ಲ ನಿನದೇ ನೆನಪು ತುಂಬಿದೆ

ಮನದ ಒಳಗೆ ಗುಡಿಯ ಕಟ್ಟಿರುವೆ ಓ ದೇವತೆ


ಸಾಲು ಸಾಲು ಪತ್ರ ಬರೆದೆ

ಪತ್ರದ ತುಂಬಾ ನಿನ್ನದೇ ಹೆಸರೇ

ಸಾವೇ ಬಂದರು ಸಾಧಿಸಿ ಬರುವೆ


ನಿನ್ನ ಜೊತೆ ನಾ ಬಾಳುವೆ ನನ್ನ ಚೆಲುವೆ

ಈ ಜೀವವು ನಗಬೇಕು ಎನಿಸಿದೆ

ಅನು ದಿನವೂ ಅನುಕ್ಷಣವೂ ನಿನ್ನೊಂದಿಗೆ


ನಿನ್ನ ಹೆಸರೇ ನನ್ನ ಕವಿತೆಯ ಸ್ಫೂರ್ತಿಯ ಸಾಲು

ಅದರಲೇ ಬದುಕಿರುವೆ ಪ್ರತಿ ದಿನವೂ

ನನ್ನ ಆಸೆಯ ಹೂವೇ ನೀ ನನ್ನ ಬಿಟ್ಟು ಹೋಗದಿರು ಮನವ


Rate this content
Log in

Similar kannada poem from Romance