ಜೀವನದ ಮಾತು
ಜೀವನದ ಮಾತು

1 min

791
ಕವಿದಿದೆ ಕಾರ್ಮೋಡ
ಬರ ಬಹುದಾ ಬರ ಸಿಡಿಲ
ಈ ಜೀವ ಸಾಗದು ಬಹು ದೂರ
ಹೇಳುವವನು ನಾ ಯಾರ........ ?॥೨॥
ಕೂಡಿ ಕಳಿದ ಲೆಕ್ಕವೆಲ್ಲಾ
ಅ ಭಗವಂತನ ಕೈಲಿದೆಯಲ್ಲಾ
ಇನ್ನು ಎಷ್ಟು ದಿವಸ ಬದುಕುವೆಂದು
ಯಾರು ನಿನಗೆ ಹೇಳುವುದಿಲ್ಲ
ಇದ ಹೇಳಲು ನಾ ಯಾರ......?॥೨॥
ಸಾಗರದಂತ ಜಗತ್ತಿನಲ್ಲಿ
ನಿನ್ನ ಪಾತ್ರ ಏನಿದೆ ಇಲ್ಲಿ
ತಿಳಿದು ಬಾಳು ಈ ಜಗದಲ್ಲಿ
ಇದ ಹೇಳಲು ನಾ ಯಾರ .....॥೨॥
ಹುಟ್ಟು -ಸಾವು ಎರಡಕ್ಷರವು
ಕಳೆದೆ- ಪಡೆದೆ ಮೂರಕ್ಷರವೂ
ಬಿಸಿಲು-ಕತ್ತಲು ಮೂರಕ್ಷರ
ಇದರ ಜೊತೆಯಲ್ಲಿ ಸಾಗುವುದು
ನಿನ್ನ ಜೀವನ ಪ್ರತಿ ದಿವಸ.....