ನಿನ್ನ ಜೊತೆಯಾಗಿ ನಾ ಸಾಗುವೆ
ನಿನ್ನ ಜೊತೆಯಾಗಿ ನಾ ಸಾಗುವೆ
ಬಿಸಿಲಿನ ಕಿರಣ ನಿನ್ನ ಕಣ್ಣ ಒಳಗೆ
ಬಂದೇ ಬರುವೆ ನಿನ್ನ ಬಳಿಗೆ
ಮುದ್ದು ಮಾಡುವೆಯೋ ಬಿಂಕ ತೊರುವೆಯೋ
ನಿನಗೆ ಬಿಟ್ಟದು ನಿನಗೆ ಬಿಟ್ಟದ್ದು....
ಹಗಲು ಇರುಳು ನಿನ್ನ ಬೆರಳು
ಹಿಡಿದು ನಡೆಸುವೆ ನೀ ನಡೆಯುವ
ಪ್ರತಿ ದಾರಿಯಲ್ಲು ನಿನ್ನ ನೆರಳಾಗಿ
ಒಪ್ಪಿಕೊಳ್ಳುವೆಯೋ ಇಲ್ಲ ತಿರಸ್ಕರಿಸುವೋ
ನಿನಗೆ ಬಿಟ್ಟದ್ದು ನಿನಗೆ ಬಿಟ್ಟದ್ದು....
ಪ್ರತಿ ಉಸಿರುಗೂ ನಿನ್ನ ಧ್ವನಿಯಾಗಿ
ಆ ಧ್ವನಿಗೆ ಸ್ವರವಾಗಿ ನಿನ್ನ ಜೊತೆ ನಾ ಇರುವೆ
ಕಾಲಗಳು ಉರುಳಿದರು ಜನ್ಮವೇ ಕಳೆದರು
ಸಾಗುವೆ ನಿನ್ನ ಜೊತೆಗೆ ಬರುವೆಯೋ ಇಲ್ಲವೋ ಬಿಡುವೇಯೊ
ನಿನಗೆ ಬಿಟ್ಟದ್ದು ನಿನಗೆ ಬಿಟ್ಟದ್ದು.... ಸಖಿಯೇ