ಅಮ್ಮಾ ನೀನು
ಅಮ್ಮಾ ನೀನು


ಒಡಲಲಿ ನಾ ಚಿಗುರೊಡೆದಾಗಲೇ
ತಾಯ್ತನದ ಜವಬ್ದಾರಿ ಹೆಗಲೇರಿಸಿಕೊಂಡವಳು ನೀನು
ನಿನ್ನ ನಿದ್ದೆ,ಆಸೆ ಮರೆತು ನನ್ನಲ್ಲೆ ಬದುಕು ಕಂಡವಳು ನೀನು
ಕೈ ತುತ್ತು ತಿನ್ನಿಸಿ, ಎದೆಗಪ್ಪಿಕೊಂಡವಳು ನೀನು
ನನ್ನ ವ್ಯಕ್ತಿತ್ವ ರೂಪಿಸಲು, ಸಂಸ್ಕಾರವೆಂಬ ಉಳಿಪೆಟ್ಟನ್ನು ಕೊಟ್ಟವಳು ನೀನು
ನನ್ನ ಸರಿತಪ್ಪುಗಳಿಗೆ ವಿಮರ್ಶಕಿಯಾಗಿರುವವಳು ನೀನು
ನನ್ನ ತಪ್ಪನ್ನು ಮನ್ನಿಸುವ ಕ್ಷಮಯಾಧರಿತ್ರಿಯೂ ನೀನು
ನನ್ನ ನೈತಿಕ ಬೆಂಬಲವೂ ನೀನು
ನನ್ನ ಬಾಳು ಹಸನಾಗಲೆಂದು ಪಣತೊಟ್ಟವಳು ನೀನು
ನಿನ್ನ ಹೊಗಳಲು ಪದಪುಂಜಗಳಿಲ್ಲ ನನ್ನಲ್ಲಿ
ನಡೆದಾಡುವ ದೇವರ ಕಂಡೆ ನಾನು ನಿನ್ನಲ್ಲಿ