ಅಮ್ಮ
ಅಮ್ಮ


ಹಸಿದಾಗ ಹೇಳಲಾರದೆ ನಾ ಅತ್ತಾಗ ಎತ್ತಿ
ಮುತ್ತನಿಟ್ಟು ಎದೆ ಹಾಲು ಉಣಿಸಿದವಳು ನೀನು
ತೊದಲು ನುಡಿಯಲಿ ಊಟ ಬೇಡವೆಂದು ಹಠಹಿಡಿದಾಗ
ಚಂದಿರನ ತೋರಿಸಿ, ಮುದ್ದು ಮಾಡಿ ತುತ್ತನ್ನು ತಿನ್ನಿಸಿದವಳು ನೀನು.
ಜನುಮ ದಿನದ ಖುಷಿಯನ್ನು ಗೆಳೆತಿಯರೊಂದಿಗೆ ಸಂಭ್ರಮಿಸಲು
ಆಸೆಯಿದ್ದರೂ ಅಪ್ಪನ ಸಿಡುಕು ಮೋರೆ ಕಂಡು ನಾ ಸಪ್ಪಗಾದಾಗ
ಕೂಡಿಟ್ಟ ಕಾಸನ್ನು ತಂದು ಕೊಟ್ಟವಳು ನೀನು.
ನಾ ಉತ್ತಮ ಅಂಕ ಪಡೆದು ಉತ್ತೀರ್ಣಳಾದಾಗ
ನೆರೆಹೊರೆಯವರಿಗೆ ಸಿಹಿ ಮಾಡಿ ಹಂಚಿದವಳು ನೀನು.
ಬಡತನದಿಂದ ಶಿಕ್ಷಣ ಮುಂದುವರೆಸಲಾಗದೇ
ನಿರಾಸೆಯಿಂದ ನೋವಿನ ಸಿಟ್ಟನ್ನು ನಿನ್ನ ಮೇಲೆ ಕಕ್ಕಿದ್ದೆ ನಾನು
ನನ್ನ ಮಾತಿನಿಂದ ನೊಂದರೂ ಕಣ್ಣೀರು ಬಂದರೂ ನೀ ಮೌನವಹಿಸಿದ್ದೆ ನೀನು
ಅಮ್ಮಾ ನಿನ್ನಲ್ಲಿರುವ ತಾಳ್ಮೆ ಸಹನೆ ತ್ಯಾಗ ಮಮತೆಯನ್ನು ಮೆಚ್ಚಿದೆನು ನಾನು
ಅಮ್ಮ ಅನ್ನುವ ಪದವು ತ್ಯಾಗದ ಪ್ರತಿರೂಪ ಎಂದು ತಿಳಿಸಿದೆ ನೀನು
ಓ ಕಾಲವೇ ಮತ್ತೆ ಹಿಂತಿರುಗಿಸುವೆಯಾ ನನ್ನನ್ನು ಬಾಲ್ಯಕ್ಕೆ
ಅಮ್ಮನ ಮಡಿಲಲ್ಲಿ ಮಲಗಿ ಎಲ್ಲ ದುಗುಡಗಳನ್ನು ಮರೆತು ನೆಮ್ಮದಿಯಾಗಿ ನಿದ್ರಿಸೋಕೆ