ಅಮ್ಮ ನಿನ್ನ ತೋಳಿನಲ್ಲಿ
ಅಮ್ಮ ನಿನ್ನ ತೋಳಿನಲ್ಲಿ
ಪುಟ್ಟ ಮಗುವಾಗಿದ್ದೆ ನಾನು
ಅಮ್ಮ ನಿನ್ನ ತೋಳಿನಲ್ಲಿ
ದಿನವೆಲ್ಲಾ ಬೆಚ್ಚಗೆ ಮಲಗಿದ್ದೆ
ಹಿತವಾದ ನಿನ್ನ ಮಡಿಲಲ್ಲಿ
ಯಾವ ಪರಿಚಯವೂ ಇರದೇ
ಅಳುತ್ತಾ ಈ ಭುವಿಗೆ ಬಂದೆ
ನಿನ್ನ ಸನಿಹವೆಂದು ಹೊಸತೆನಿಸದೇ
ನಂಟು ಬೆಳೆದಿತ್ತು ಹುಟ್ಟಿನಿಂದಲೇ
ಉದರದೊಳಗೆ ಆಶ್ರಯ ನೀಡಿ
ನವಮಾಸಗಳು ಜೋಪಾನ ಮಾಡಿ
ಸೃಷ್ಟಿಯಾಗಿದ್ದು ನಾ ನಿನ್ನಿಂದಲೇ
ನಿನ್ನ ಪ್ರೀತಿಯೇ ನನಗಾಸರೆ
ಎಷ್ಟು ಬಂಧುಗಳಿರಲಿ ಯಾರ ಪ್ರೀತಿಯಿರಲಿ
ನಿನ್ನ ಮಮತೆಗೆ ಸರಿಸಾಟಿ ಇಹುದೇ
ಅಮ್ಮನೆಂದರೆ ಅಕ್ಕರೆಯ ಮಡಿಲು
ಸಕಲ ಜೀವಿಗಳಿಗೂ ಜನನಿಯೇ ಮೊದಲು
