ಅನಿತಾ ಸಾಹಿತಿ

Tragedy Inspirational

3.5  

ಅನಿತಾ ಸಾಹಿತಿ

Tragedy Inspirational

ತಪ್ಪಲ್ಲದ ತಪ್ಪು

ತಪ್ಪಲ್ಲದ ತಪ್ಪು

2 mins
257


ತಪ್ಪಲ್ಲದ ತಪ್ಪು


ಮಾಮ ಮಾಮ....


ಪುಟ್ಟಿ ನಿನ್ನ ಕೆನ್ನೆ ಕಚ್ಬೇಕು ಅನ್ಸುತ್ತೆ...


ಇದ್ದಕಿದ್ದ ಹಾಗೆ ಎಚ್ಚರವಾಗಿ ಬರಿ ಟವೆಲ್ ಸುತ್ತಿಕೊಂಡ ಮೈಯಿಂದ ನೀರು ಕುಡಿದು ಮತ್ತೆ ಗಂಡನ ತೋಳಿನಲ್ಲಿ ಬಂಧಿಸಿಕೊಂಡೆ.ಗತಕಾಲದ ನೆನಪು ಇಂದು ಕನಸಿನಂತೆ ಕಾಡಿತ್ತು. ಗಂಡನ ತೋಳಿನಲ್ಲಿ ಇರೋ ಭದ್ರತೆ,ಹಿತ,ಸಾಕಾಗದಷ್ಟು ಬೇಕೆನಿಸುವ ಅವನ ಅಪ್ಪುಗೆ,ಮುದ್ದಾಟ ಇಂದು ಮೊದಲ ಬಾರಿ ನನಗೆ ಸಿಕ್ಕಿದೆ. ನನ್ನವನಲ್ಲಿ ಎಂದು ಕಾಣದ ತೃಪ್ತಿ ಇಂದು ಅವನ ಮುಖದಲ್ಲಿ ಎದ್ದು ಕಾಣುತ್ತಿದೆ.


ಸಿಕ್ಕ ಸಿಕ್ಕವರ ಜೊತೆ ಸುತ್ತಾಡಿ ಇನ್ಯಾರನ್ನೋ ಮದುವೆ ಆಗೋ ಈ ಕಾಲದಲ್ಲಿ ನನ್ನ ನೋವು,ಭಯ ಯಾರಿಗೆ ಹೇಳಲಿ ಎಂದು ತಿಳಿಯದೆ ಒದ್ದಾಡುತ್ತಿದ್ದೇನೆ.ಸುಮಾರು ಹದಿನಾಲ್ಕು ವರುಷಗಳ ಹಿಂದೆ ಅರಿಯದೆ ಮಾಡಿದ ತಪ್ಪು ಇಂದು ಹಿಂಡಿ ಹಿಪ್ಪೆ ಮಾಡಿದೆ.ಬುದ್ದಿ ಬಂದಾಗಿನಿಂದ ಹೇಳ್ಬೇಕು ಅಂದಾಗಲೆಲ್ಲ ಭಯ, ತಪ್ಪಿನ ನಾಚಿಕೆ ನನ್ನನ್ನು ತಡೆಗಟ್ಟಿ ಇಲ್ಲಿವರೆಗೂ ಕರೆ ತಂದಿದೆ.


ಶ್ರಾವಣಿ ಹಾಗೆ ಕಣ್ಣು ಮುಚ್ಚಿದಳು ಅವಳ ಅಂತರಂಗ ಕಹಿ ನೆನಪಿನೊಂದಿಗೆ ಸಾಗಿತ್ತು.


* * *


"ಮಾಮ ನಾನು ನಿನ್ ಪಕ್ಕ ಮಲಗ್ತೀನಿ ಅಮ್ಮ ಹತ್ರ ಜಾಗ ಸಾಕಾಗ್ತಿಲ್ಲ.


"ಇಲ್ಲಿ ಹೊರಗೆ ಚಳಿ ಇದೆ ಪುಟ್ಟಿ, ಪರವಾಗಿಲ್ಲ ಹೋಗ್ಲಿ ಬಾ"


"ಪುಟ್ಟಿ ನಿಂಗೆ ಈ ಬಟ್ಟೆ ಶಕೆ ಆಗಲ್ವ"


"ಇಲ್ಲ ಮಾಮ "


"ಪುಟ್ಟಿ ಒಂದು ಪಪ್ಪೀ ಕೊಡಮ್ಮ"


"ಮಾಮ ನಾನು ಮಲಗ್ತೀನಿ"


"ಮಾಮ ನಿನ್ನ ಕೈ ಭಾರ ಇದೆ, ಕೈ ಹಾಕ್ಬೇಡ"


"ಪುಟ್ಟಿ ಕಚಗುಳಿ ಇಡ್ಲ" ಕೆಲವು ನಿಮಿಷಗಳ ನಂತರ


"ಮಾಮ ಕಚಗುಳಿ ಇಡೋದು ಬಿಟ್ಟು ಮೈ ಮೇಲೆ ಬಂದಿದ್ದೀಯಾ, ಎದ್ದೇಳು ಮಾಮ ನೀನು ತುಂಬಾ ಭಾರ ಇದ್ದೀಯಾ"


"ಪುಟ್ಟಿ ಇಲ್ಲಿ ನಡೆದಿದ್ದು, ನಿನ್ನ ಮುಟ್ಟಿದ್ದು ಯಾರ ಹತ್ರನು ಹೇಳ್ಬೇಡ, "


* * *


"ಲೋ ರಘು ಪುಟ್ಟಿನ ನಮ್ಮ ರಾಧಾತ್ತೆ ಮನೆಗೆ ಕರ್ಕೊಂಡು ಹೋಗೋ ಒಂದೇ ಸಮನೆ ಹಠ ಅಜ್ಜಿ ಮನೆಗೆ ಹೋಗ್ಬೇಕು ಅಂತ"


"ಆಯಿತ್ತಕ್ಕ ಕಳಿಸು"


"ಪುಟ್ಟಿ ಹೋಗುವಾಗ ಚಾಕೊಲೇಟ್ ತಿಂದು ಹೋಗೋಣ"


"ಪುಟ್ಟಿ ದಾರಿಯಲ್ಲಿ ಹೋಗುವಾಗ ಮಾಮ ಹತ್ರ ಅದು ಬೇಕು ಇದು ಬೇಕು ಅಂತ ಹಠ ಮಾಡ್ಬಾರ್ದು ಆಯ್ತಾ "


"ಸರಿ ಮಮ್ಮಿ"


"ಪುಟ್ಟಿ ಅಲ್ಲಿ ಮರ ಗಿಡ ಕಾಣ್ತಿದಿಯಲ್ಲ ಅಲ್ಲಿ ಸ್ವಲ್ಪ ಹೊತ್ತು ಕುತ್ಕೊಂಡು ಹೋಗೋಣ "


"ಯಾಕೆ ಮಾಮ "


"ನನಗೆ ಸುಸ್ತು ಬಂಗಾರಿ ಅದ್ಕೆ "


"ಮಾಮ ಮೊನ್ನೆ ಮಾಡಿದಂಗೆ ಮೈ ಒಳಗೆ ಕೈ ಹಾಕ್ತಿದ್ದೀಯಾ"


"ಪುಟ್ಟಿ ನಿನ್ ಕೆನ್ನೆ ಕಚ್ಬೇಕು ಅನಿಸ್ತಿದೆ"


"ಮಾಮ ನೀನು ಮುಟ್ಟಿದ್ರೆ ಹೇಗೇಗೋ ಆಗುತ್ತೆ".


* * *


ಮೈ ಪೂರಾ ಬೆವತು ಹೋಗಿದೆ, ಗಂಡ ಗಾಢ ನಿದ್ದೆಯಲ್ಲೂ ನನ್ನನ್ನು ಬಿಗಿದಪ್ಪಿ ಮಲಗಿದ್ದಾನೆ ಒಳ್ಳೆ ಗಂಡ, ಒಳ್ಳೆ ಅತ್ತೆ ಮಾವ ಇಂಥ ಕುಟುಂಬ ಪಡೆಯೋಕೆ ಪುಣ್ಯ ಮಾಡಿರ್ಬೇಕು, ಆದ್ರೆ ಅರಿಯದ ವಯಸ್ಸಿನಲ್ಲಿ ಮಾಡಿದ ತಪ್ಪು ಬುದ್ದಿ ಬಂದಾಗಿನಿಂದ ಪದೇ ಪದೇ ಕಾಡುತ್ತಲೇ ಇದೆ.


ಇದಕೆ ಪರಿಹಾರವೇನು? ಮರೆಯೋದ? ಪಶ್ಚಾತಾಪ ಪಡ್ತಾ ಬದುಕೋದ? ಇದ್ರಲ್ಲಿ ನನ್ನ ತಪ್ಪೇನು? ಶ್ರಾವಣಿ ಯೋಚಿಸುತ್ತ ಗಂಡನ ದಿಂಬಿನ ಕೆಳಗೆ ಏನೋ ಇದೆ ಎಂದು ಗಮನಿಸಿದಳು ಒಂದು ಡೈರಿ ಹಾಗೂ ಅದರ ಮೇಲೆ ಒಂದು ಪತ್ರ ಇಡಲಾಗಿತ್ತು.ಅರೆ ಇದು ನನ್ನ ಡೈರಿ ಇವರೇಕೆ ಇಲ್ಲಿ ತೆಗೆದಿಟ್ಟುಕೊಂಡಿದ್ದಾರೆ ಶ್ರಾವಣಿ ಮೈಯಲ್ಲ ನಡುಕ ಶುರುವಾಯಿತ್ತು.ಏನೆಲ್ಲಾ ಓದಿರಬಹುದೆಂದು ಭಯಗೊಂಡಳು.ಓದಿದ್ದರೆ ಇವರೇಕೆ ನನ್ನನ್ನು ಏನೂ ಪ್ರಶ್ನಿಸಲಿಲ್ಲ,ಮತ್ತೇನಿದು ಪತ್ರ ಎಂದು ಪತ್ರ ತೆರೆದಳು.


ಹೀಗೆಂದು ಬರೆದಿತ್ತು..


ಉತ್ತರ ಸಿಗದ ಪ್ರಶ್ನೆಗಳ ನೆನಪಲ್ಲಿ ಬದುಕೋದು ಬಿಟ್ಟು ತಿಳಿಯದ ವಯಸ್ಸಿನಲ್ಲಿ ಮಾಡಿದ ತಪ್ಪು ತಪ್ಪಲ್ಲ ಎಂಬುದು ಅರಿತು ಬದುಕೋದು ಜಾಣತನ. ಸಿಕ್ಕ ಒಳ್ಳೆ ಭವಿಷ್ಯವನ್ನ ಹಾಳು ಮಾಡಿಕೊಳ್ಳೋದು ಶುದ್ಧ ಮುಟ್ಟಾಳತನ.ಯಾರ್ಯಾರೋ ಏನೇನೋ ಮಾಡಿ ಹೊಸ ಭವಿಷ್ಯ ಕಟ್ಟಿಕೊಂಡು ಸುಂದರ ಜೀವನ ಸಾಗಿಸೋರ ಮಧ್ಯೆ ಎಂದೋ ನಡೆದು ಹೋದ ಘಟನೆಗಾಗಿ ಕೊರಗೋದು ಸರಿ ಅಲ್ಲ, ಏನೂ ತಿಳಿಯದ ನಿನ್ನ ಉಪಯೋಗಿಸಿಕೊಂಡ ನೀಚ ಮನುಷ್ಯ ಇಂದು ಆತ ಎಲ್ಲವನು ಮರೆತು ಹೆಂಡ್ತಿ ಮಕ್ಕಳೊಂದಿಗೆ ಆರಾಮವಾಗಿರಲು ನೀನೇಕೆ ತಪ್ಪಲ್ಲದ ತಪ್ಪಿಗೆ ಚಿಂತಿಸುತ್ತಿರುವೆ.


ಇಂದಿಗೆ ಆ ಕಹಿ ನೆನಪು ಮರೆಯಾಗಲಿ.ಹೆಣ್ಣು ಮಾಡದ ತಪ್ಪಿಗೆ, ತಪ್ಪಾಗಿದೆ ಅಂತ ತಿಳಿದು ಕಣ್ಣೀರು ಹಾಕದೆ ಮರೆವು ಅನ್ನೋ ವರವನ್ನ ಸದುಪಯೋಗಿಸಿಕೊಳ್ಳಬೇಕು.ಈ ಬುದ್ದಿ ಇಷ್ಟು ದಿನ ದೇವರು ಕೊಡದಿದ್ದರೂ ಇಂದಾದರೂ ನಿನಗೆ ಕೊಡಲಿ.ನೀನೆಂದಿಗೂ ನನ್ನವಳು. ಇದೆಲ್ಲ ಓದಿದ್ದಿನಿ ಎಂದು ಆತಂಕ ಬೇಡ.


ಕ್ಷಮೆ ಇರಲಿ ನಿನಗೆ ಗೊತ್ತಿಲ್ಲದೇ ನಿನ್ನ ಡೈರಿ ಓದಿದ್ದಕೆ.ಇದು ಒಳ್ಳೇದೇ ಆಯಿತ್ತು ನಿನ್ನ ನೋವು ನನಗೆ ತಿಳಿದದ್ದು ಅದಕ್ಕಾಗಿ ಈ ಪತ್ರ.


-ಇಂತಿ 

ಎಂದಿಗೂ ನಿನ್ನವನ್ನು.


ಶ್ರಾವಣಿ ಗಂಡನ ಮುಖವನ್ನು ನೋಡುತ್ತಾ ನೀವು ನನಗೆ ದೇವರು ಕೊಟ್ಟ ವರ ಎಂದು ಅವನ ಎದೆಯೊಳಗೆ ಬಚ್ಚಿಟ್ಟುಕೊಂಡಳು.ಆತ ಗಾಢ ನಿದ್ದೆಯಲ್ಲಿ ಮುಳಗಿದ್ದ.



ಮುಕ್ತಾಯ



ಇದು ಕೇವಲ ಕಾಲ್ಪನಿಕ ಕತೆ ಯಾರಿಗೂ ಅನ್ವಯಿಸುವುದಿಲ್ಲ, ಹಾಗಾಗಿದಲ್ಲಿ ಅದು ಕಾಕತಾಳೀಯ.ಎಷ್ಟೋ ಹೆಣ್ಣು ಮಕ್ಕಳ ಜೊತೆ ಇಂಥ ಅದೆಷ್ಟೋ ಘಟನೆಗಳು ನಡೆಯುತ್ತಿರುತ್ತವೆ ಅರಿಯದ ವಯಸ್ಸಿನಲ್ಲಿ ತಪ್ಪು,ಸರಿ,ಎಂದು ಅರಿತು ಯಾರಿಗಾದರು ತಿಳಿಸುವ ಮೊದಲೇ ತಪ್ಪಿನ ಭಯ ಕಾಡಲು ಹೆಣ್ಣು ಒಳ ಒಳಗೆ ನೋವನ್ನುಣ್ಣುತ್ತಿರುತ್ತಾಳೆ.ತಪ್ಪಲ್ಲದ್ದ ತಪ್ಪಿಗೆ ಪಶ್ಚಾತಾಪ ಬೇಡ ಸುಂದರವಾದ ಭವಿಷ್ಯ ಕಟ್ಟಿಕೊಳ್ಳಿ.






Rate this content
Log in

Similar kannada story from Tragedy