ಅನಿತಾ ಸಾಹಿತಿ

Others

3.8  

ಅನಿತಾ ಸಾಹಿತಿ

Others

ಬಿರುಕು

ಬಿರುಕು

2 mins
3.2K



ಮನೆಯಲ್ಲಿ ತನ್ನ ದಾರಿ ಕಾಯುತ್ತ ಕುಳಿತಿದ್ದ ಗಂಡನನ್ನು ಒಮ್ಮೆ ನೋಡಿ ತಬ್ಬಿಕೊಂಡಳು. ಸುಸ್ತಾಗಿ ಬಂದ ಹೆಂಡತಿ ಮುಖ ನೋಡಿ ತಾನೇ ಕಾಫಿ ಮಾಡಲು ಅಡುಗೆ ಕೋಣೆಗೆ ಹೋದ.ಪ್ರಯಾಣದಿಂದ ಸುಸ್ತಾಗಿ ಬಂದ ಶಾಲಿನಿ ಕಣ್ಣು ಮುಚ್ಚಿ ಸೋಫಾದ ಮೇಲೆ ಒರೆಗಿದಳು.



ಕೇವಲ ಒಂದು ವರ್ಷ ಹಿಂದಷ್ಟೇ ತೀರಿ ಹೋದ ತಾಯಿಯ ನೆನಪು ಇನ್ನು ಮಾಸದೆ ಸುಟ್ಟಗಾಯದಂತೆ ಹಸಿಯಾಗಿತ್ತು. ಆಗಲೇ ಅದೇ ಗಾಯದ ಮೇಲೆ ಬರೆ ಎಳೆದ ಅನುಭವ ಶಾಲಿನಿಗೆ. ವಯಸ್ಸಾ ದ ತಂದೆಯನ್ನು ತನ್ನ ಮನೆಗೆ ಕರೆದಾಗ ಮಗಳ ಮನೆಯಲ್ಲಿ ಬಂದು ಇರುವುದು ಸರಿ ಕಾಣಲ್ಲ ಮಗಳೇ ಎಂದರು. ವಯಸ್ಸಾ ದ ಕಾಲದಲ್ಲಿ ಸರಿಯಾಗಿ ಊಟ ಉಪಚಾರ ಇಲ್ಲದೆ ಸೊರಗಿ ಹೋಗಿದ್ದ ತಂದೆಯನ್ನು ನೋಡಿ ತವರಿಂದ ಹೊರಡುವಾಗ ದುಃಖ ಉಮಾಳಿಸಿದಂತ್ತು ನಿಜ.


ಶಾಲಿನಿ ಅತ್ತು ಅತ್ತು ಕೆಂಪಾಗಿದ್ದ ಕಣ್ಣಿಗಳಿಗೆ ನಿದ್ರೆ ಯಾವಾಗ ಅವರಿಸಿತೋ ಗೊತ್ತಿಲ್ಲ. ಬೆಳಿಗ್ಗೆ ಎದ್ದೊಡನೆ ತಮ್ಮನಿಗೆ "ನಿಮ್ಮ ಮಾಮನಿಗೆ ಏನೋ ಅರ್ಜೆಂಟ್ ಕೆಲಸದ ಮೇಲೆ ಬಿಸಿನೆಸ್ ಟ್ರಿಪ್ ಹೋಗ್ಬೇಕಂತೆ " ನನ್ನ ಇವತ್ತೇ ಬಸ್ಸಿಗೆ ಕುರಿಸಿ ಬಿಡು,ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡ್ತೀನಿ.


"ಎಷ್ಟು ಗಂಟೆಗೆ ಅಂತ ಹೇಳು ಬಿಟ್ಟು ಬರ್ತೀನಿ ಅಂದು ಹೊರಗೆ ಹೋದ "


"ಇನ್ನೆರಡು ದಿನ ಇದ್ದು ಹೋಗೆಂದು ಬಾಯಿ ಮಾತಿಗೂ ಹೇಳದ ತಮ್ಮನ ಮನೆಯಲ್ಲಿ ಇನ್ನೊಂದು ಕ್ಷಣವಿರಲ್ಲೂ ಆಗಲಿಲ್ಲ. ಗಂಡನ ಜೊತೆ ಸಣ್ಣ ಕಾರಣಕ್ಕೆ ಜಗಳವಾಡಿಕೊಂಡು ಬಂದ ಶಾಲಿನಿಗೆ ಎಳ್ಳಷ್ಟೂ ಉಪಚಾರ ಸಿಗಲಿಲ್ಲ. ಮನೆ ಮಗಳು ಅನ್ನೋ ಕಾಟಾಚಾರಕ್ಕೆ ಬಂದ ದಿನ ನಾಮಕವಾಸ್ತೆಗೆ ಮಾತನಾಡಿಸಿದ್ದು ಬಿಟ್ಟರೆ ತಮ್ಮ ಹಾಗು ತಮ್ಮನ ಹೆಂಡತಿ ಸರಿಯಾಗಿ ಮಾತನಾಡಲಿಲ್ಲ. ಸೂಕ್ಷ್ಮವಾಗಿ ನೋಡಿದ ತಂದೆ ಮನಸ್ಸು ನೀರಿನಿಂದ ಹೊರ ತಗೆದ ಮೀನಿನಂತೆ ವಿಲ ವಿಲ ಒದ್ದಾಡಿತ್ತು. ಸೊಸೆ ವೈಶಾಲಿ ಬುದ್ದಿ ಗೊತ್ತಿದ್ದ ಕಾರಣ ಆಗುವ ಜಗಳ ತಪ್ಪಿಸಲು ತಂದೆ ಕಂಡು ಕಾಣದೆ ಹಾಗೆ ಸುಮ್ಮನಿದ್ದರು.


"ಅಲ್ಲರೀ ಚಿಕ್ಕ ಚಿಕ್ಕ ವಿಷಯಕ್ಕೆ ಪದೇ ಪದೇ ತವರು ಮನೆಗೆ ಗಂಡನ ಬಿಟ್ಟು ಬಂದ್ರೆ ನೋಡೋ ಜನ ಏನ್ ತಿಳ್ಕೊಳಲ್ಲ ಹೇಳಿ ".


"ಎರಡು ತಿಂಗಳ ಹಿಂದೆ ಬಂದು ಚಿನ್ನದ ನೆಕ್ಲೆಸ್ ತೆಗೆದುಕೊಂಡು ಹೋದ್ಲು,ಈಗ ಅಮ್ಮದು ಚಿನ್ನದ ಬಳೆಗಾಗಿ ಬಂದಿದಾಳೆ ಅನ್ಸುತ್ತೆ". ರೂಮಿನಲ್ಲಿ ಮಾತನಾಡುತ್ತಿದ್ದ ತಮ್ಮ ಹಾಗು ತಮ್ಮನ ಹೆಂಡತಿ ವೈಶಾಲಿ ಮಾತನ್ನು ರಾತ್ರಿ ಆಕಸ್ಮಿಕವಾಗಿ ಶಾಲಿನಿ ಕಿವಿಗೆ ಬಿದ್ದಿತ್ತು.


ಶಾಲಿನಿಗೆ ಯಾಕೋ ಮನಸ್ಸು ಭಾರವಾಯಿತು ತಾಯಿ ಇಲ್ಲದ ತವರಿಗೆ ಬರಬಾರದು ಎಂದು ರಾತ್ರಿಯೆಲ್ಲಾ ಅವಳ ನೋವು ಕಣ್ಣೀರಾಗಿ ಹರಿದಿತ್ತು. ಶಾಲಿನಿ ತಾಯಿ ಆಕೆಗೆಂದೇ ಮಾಡಿಸಿಟ್ಟ ನೆಕ್ಕ್ಲಾಸನ್ನು ತಾಯಿಯ ನೆನಪಿಗೆಂದು ತೆಗೆದುಕೊಂಡು ಹೋಗಿದ್ದಕ್ಕೆ ಸಂಬಂಧಗಳಲ್ಲಿ ಬಿರುಕು ಮನೆ ಮಾಡಿತ್ತು. ಸೂಕ್ಷ್ಮ ಶಾಲಿನಿ ಮನಸ್ಸು ಒಡೆದು ಕನ್ನಡಿಯೆಂತೆ ಚೂರು ಚೂರಾಗಿದ್ದವು.


ಮರು ದಿನವೇ ಹೋಗುವಾಗ "ರಾಜೀವ್ ಮೊನ್ನೆ ತನ್ನೆ ಹೊಸದು ತಾಳಿ ಚೈನ್ ಮಾಡಿಸಿದ್ದಾರೆ ಅದೇ ಕೊರಳ ತುಂಬಾ ಆಗುತ್ತೆ ಇದು ನೀನೇ ಇಟ್ಕೋ ನಿನ್ನಗೆ ಚೆನ್ನಾಗಿ ಒಪ್ಪುತ್ತೆ" ತನ್ನ ಅಮ್ಮನ ನೆಕ್ಕ್ಲಾಸ್ನನ್ನು ಬ್ಯಾಗಿಂದ ತೆಗದು ವೈಶಾಲಿಗೆ ಕೊಟ್ಟು ಗಂಡನ ಮನೆ ಕಡೆ ದಾರಿ ಹಿಡಿದಳು.


ಶಾಲೂ ಕಾಫೀ ಅಂದಾಗ ಎಚ್ಛೆತ್ತು ಗಂಡನ ಕಡೆ ಒಮ್ಮೆ ನೋಡಿ ಎಷ್ಟೇ ಜಗಳಾಡಿದರು ಎಂದಿನಂತೆ ಪ್ರೀತಿ ಮಾಡುವ ಗಂಡನನ್ನು ಬಿಟ್ಟು ಹೋದದ್ದು ಪಿಚ್ಚೆನಿಸಿತ್ತು, ಕಾಫಿ ಕುಡಿಯುತ್ತ ತಾಯಿ ಹೇಳಿದು ನೆನಪಾಗಿ " ತಂದೆ ತಾಯಿ ಗಟ್ಟಿ ಇದ್ದಾಗ ಮಾತ್ರ ಅಣ್ಣ ತಮ್ಮ ಅಕ್ಕ ತಂಗಿ ಅನ್ನೋ ಮಾತು ಸತ್ಯವಾಯಿತು ಅಂತ ಉಸುರಿದಳು "


                        




Rate this content
Log in