STORYMIRROR

Prashant hadapadh

Drama

3  

Prashant hadapadh

Drama

The Dice

The Dice

2 mins
11

ಊರಿಂದ ದುಡಿಯೆಲೆಂದು ಬಂದ  ಸ್ನೇಹಿತರು  ಒಂದು  room rent ಗೆ ತೆಗೆದುಕೊಂಡಿರುತ್ತಾರೆ, ಅದರಲ್ಲಿ ಒಬ್ಬ ಸ್ನೇಹಿತ  ತನ್ನ  office ಸ್ನೇಹಿತರೊಂದಿಗೆ  ಕೇರಳ  trip ಗೆ  ಹೋಗಿ ಬಂದಿರುತ್ತಾನೆ ,trip ಮುಗಿಸಿಕೊಂಡು  ಬರುವಾಗ ಅವನ ಜೊತೆ  ದಾಳಗಳನ್ನು ತೆಗೆದುಕೊಂಡು ಬಂದಿರುತ್ತಾನೆ ,ಆ ದಾಳಗಳು ಅವನಿಗೆ ಸಮುದ್ರದ ಅಂಚಿನಲ್ಲಿ ದೊರೆತಿರುತ್ತದೆ , ಅದನ್ನು ಅವನು ಅಲ್ಲಿಂದ ಎತ್ತಿಕೊಂಡು ಬಂದಿರುತ್ತಾನೆ  ,ಆ ದಾಳಗಲ ಸ್ಪರ್ಷದಿಂದ , ಅವನು ಆ ದಾಳಗಳ ವಶಕ್ಕೆ ಹೋಗುತ್ತಾನೆ , ಇದರಿಂದ ಅವನು ತುಂಬ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾನೆ ಯೋಚನೆಗೂ ನಿಲುಕದ  ಮಾತು ,ಉಹೆಗು ಮೀರಿದ ಬುದ್ದಿವಂತಿಕೆ ಅವನಲ್ಲಿ ಕಂಡು ಬರುತ್ತದೆ ಮಾತಿನ ದಾಟಿಯು ಬದಲಾಗುತ್ತದೆ ಇದರಿಂದ ಅವನ ಸ್ನೇಹಿತರು ಭಯಗೊಳ್ಳುತ್ತಾರೆ, ಅವನ ಸ್ನೇಹಿತರು psychiatrist ಬಳಿ  ಹೋಗಿ  ಆಗಿರುವ ವಿಚಾರವನ್ನು ತಿಳಿಸುತ್ತಾರೆ .

ಅವರಿರುವ ಜಾಗಕ್ಕೆ  psychiatrist ಬರುತ್ತಾನೆ , ಅವನ ವಿಚರಿಸಲು ಕೋಣೆಗೆ ಹೋಗುತ್ತಾನೆ  ಆ ಕೋಣೆಯಲ್ಲಿ  ದಾಳಗಳನ್ನು ಕೈಯಿಂದ ಆಡಿಸುತ್ತ  psychiatrist ಅನ್ನು  ಪಗಡೆ ಆಟ ಆಡಲು ಕರೆಯುತ್ತಾನೆ ,psychiatrist ಅವನ ಮುಂದೆ ಬಂದು ಕುಳಿತು ಕೊಳ್ಳುತ್ತಾನೆ , ದಾಳಗಳ ಸದ್ದಿನಿಂದ  ಅವನು ಮೈಮರೆತು ಬಿಡುತ್ತಾನೆ , ಇದರಿಂದ ಅವನ ಅಂತರಂಗದಲ್ಲಿ ಕುರುಕ್ಷೇತ್ರ ನಡೆಯುತ್ತದೆ, ಮೆದಳು ಕೌರವರ ತರ ವರ್ತಿಸಿದರೆ , ಮನಸ್ಸು  ಪಾಂಡವರ ತರ ಇರುತ್ತೆ ,ದೇಹ ಕುರುಕ್ಷೇತ್ರ ,ಆದರೆ ಈ ಸರತಿ  ಪಾಂಡವ ಮತ್ತು ಕೌರವರನ್ನು ಇಬ್ಬರನ್ನು ನಾಶ ಮಾಡುವ ಛಲ ತೊಟ್ಟಿರುತ್ತಾನೆ  ಶಕುನಿ .

ಇದಾದ ಸ್ವಲ್ಪ ದಿನದಲ್ಲಿ psychiatrist ಮರಣ ಹೊಂದುತ್ತಾನೆ ,ಇದಾನು ಕಂಡ ಶಕುನಿ ನಗುತ್ತಾನೆ  ನಕ್ಕು  ಇದಿನ್ನು  ಆರಂಬ ಅಷ್ಟೆ  , ಅಂತ್ಯ  ತುಂಬ ಘೊರವಾಗಿರುತ್ತದೆ , ಎಂದು ನಗಲಾರಂಬಿಸುತ್ತಾನೆ ,ಇದರಿಂದ ಅವನ ಸ್ನೇಹಿತರು ಇನ್ನೂ ಭಯಗೊಳ್ಳುತ್ತಾರೆ .

ಇದ್ದಕ್ಕಿದ್ದಂತೆ ಅವರ ಮನೆಗೆ ಅನಿಶ್ಚಿತ  ವ್ಯಕ್ತಿಯ  ಆಗಮನವಾಗುತ್ತೆ  , ಆ ವ್ಯಕ್ತಿ  ಅವರ ಸ್ನೇಹಿತನ (ಶಕುನಿ) relative ಹೇಳಿಕೊಂಡು ಬಂದಿರುತ್ತಾನೆ  ನೋಡಲು  ಅಂದವಾಗಿ , ಕಣ್ಣಲ್ಲಿ  ತೆಜಸ್ಸು , ನೋಡಲು ಸರಳ್ವಾಗಿರುತ್ತದೆ , ಅವನ ಸ್ನೇಹಿತರು ಆಗಿರುವ ವಿಷಯವನ್ನು ತಿಳಿಸುತ್ತಾರೆ  ಅದನ್ನು ಅರಿತ ಅನಿಶ್ಚಿತ ವ್ಯಕ್ತಿ  ,ಅವನ ಜೊತೆ ಮಾತನಾಡಲು ಸ್ವಲ್ಪ ಹೊತ್ತು  ಕೇಳುತ್ತಾನೆ  ಅದಕ್ಕೆ  ಆ ಸ್ನೇಹಿತರು ಅವನ ರೂಮ್ ತೋರಿಸುತ್ತಾರೆ ,ಅವನು ಒಳಗಡೆ ಹೊಗುತ್ತಾನೆ,

ಆ ವ್ಯಕ್ತಿಗೆ ದಾಳಗಳ ಸದ್ದು ಕೇಳುತ್ತದೆ ,  ಆ ವ್ಯಕ್ತಿ  ನಿದಾನವಾಗಿ "ಶಕುನಿ  ಮಾಮ " ,ಅವನು  ಹಿಂದೆ ತಿರುಗುತ್ತಾನೆ , ಆ ಮಾರು ವೇಷದಲ್ಲಿ  ಬಂದಿದ್ದು  ಶ್ರೀ ಕೃಷ್ಣ  ಆಗಿರುತ್ತಾನೆ  ನಾಶವಾದ ದಾಳಗಳು ಸಿಗಲು ಕಾರಣ ಸಿಗುತ್ತದೆ ,

"ಕುರುಕ್ಷೇತ್ರ  ಯುದ್ದದ ಕೊನೆಯಲ್ಲಿ  ಎಲ್ಲ ಕೌರವರು ಅಂತ್ಯವಾಗಿ ಪಾಂಡವರು ಜಯಬೇರಿ  ಬಾರಿಸಿದಾಗ ಶಕುನಿಯ ದಾಳಗಳನ್ನು ಅರ್ಜುನನಿಗೆ  ಕೊಟ್ಟು ಶ್ರೀ ಕೃಷ್ಣ  ಹೀಗೆ ಹೇಳುತ್ತಾನೆ ,ಈ ದಾಳಗಳನ್ನು  ನಾಶಮಾಡು ಯಾರಿಗು ಸಿಗಬಾರದು ಎಂದು ಆದರೆ ಅರ್ಜುನ  ಈ ವಿಷಯವನ್ನು  ಗಂಬೀರವಾಗಿ  ತೆಗೆದುಕೊಳ್ಳದೆ ಸಮುದ್ರದಲ್ಲಿ ಏಸೆಯುತ್ತಾನೆ , ಈ  ವಿಷಯ ತಿಳಿದ ಶ್ರೀ ಕೃಷ್ಣ ,ತುಂಬಾ  ದೊಡ್ಡ ತಪ್ಪು ಮಾಡಿದೆ ಅರ್ಜುನ  ಆ ದಾಳಗಳು ಯಾರೊಬ್ಬರಿಗು  ಸಿಕ್ಕರು ,ಅದರಿಂದ ಇನ್ನೊಂದು ಕುರುಕ್ಷೇತ್ರ ಆಗುವುದರಲ್ಲಿ ಯಾವುದೆ ಸಂಶಯವಿಲ್ಲ  ಆದರೆ  ಈ ಬಾರಿ ನಡೆಯುವುದು ಆಂತರಿಕ ಕುರುಕ್ಷೇತ್ರವಾಗಿರುತ್ತದೆ  ಈ ಯುದ್ದ ಎಷ್ಟು ಕ್ರೂರವಾಗಿರುತ್ತದೆ  (ಭಯಂಕರವಾಗಿರುತ್ತದೆ) ಎಂದರೆ  ಭೂಮಿಯ ಮೇಲೆ ಯಾವ ಮನುಷ್ಯ  ಪ್ರಾಣಿ  ಪಕ್ಷಿ  ಯಾವುದೆ ಜೀವಿ  ಬದುಕುಳಿಯುವುದಿಲ್ಲ  , ಎಂದು  ಶ್ರೀ ಕೃಷ್ಣ  ಅರ್ಜುನನಿಗೆ  ಹೇಳುತ್ತಾನೆ ", 

ಆದರೆ  ಆ ದಾಳಗಳು ಇವನ  ಕೈಗೆ ಸಿಕ್ಕಿರುತ್ತದೆ ,  ಇದರಿಂದ ಇನ್ನೊಂದು ಕುರುಕ್ಷೇತ್ರ ನಡೆಯದಿರಲು  ಶ್ರೀ ಕೃಷ್ಣ   ಬಂದಿರುತ್ತಾನೆ  ಮಾರು ವೇಷದಲ್ಲಿ , ಆದರೆ ಶಕುನಿ ಕಂಡು ಹಿಡಿಯುತ್ತಾನೆ , ಶಕುನಿಯು ಅವನ ಜೊತೆ ಪಗಡೆ ಆಡಲು ಆಮಂತ್ರಣ ಕೋಡುತ್ತಾನೆ ,ಶ್ರೀ ಕೃಷ್ಣ ಒಪ್ಪಿಕೊಳ್ಳುತ್ತಾನೆ, ಆದರೆ ಆ ದಾಳಗಳು ಶ್ರೀ ಕೃಷ್ಣ ನ  ಮಾಯೆಗೆ ಮಂಕಾಗುತ್ತವೆ , ಸೊತ  ಶಕುನಿ , ಪಂದ್ಯದ ಪ್ರಕಾರ ಶ್ರೀ ಕೃಷ್ಣ  ಆ ದಾಳಗಳನ್ನು  ನಾಶ  ಮಾಡುತ್ತಾನೆ , ಇದರಿಂದ ಆಗುವ ಅನಾಹುತವನ್ನು  ಶ್ರೀ ಕೃಷ್ಣ  ತಡೆಯುತ್ತಾನೆ . 


Rate this content
Log in

More kannada story from Prashant hadapadh

Similar kannada story from Drama