STORYMIRROR

Prashant hadapadh

Abstract Children Stories Others

3  

Prashant hadapadh

Abstract Children Stories Others

ಸ್ನೇಹಿತರು

ಸ್ನೇಹಿತರು

2 mins
16

ನನ್ನ ಸ್ನೇಹಿತನ ಕಥೆ ಅವನು ಶಾಲೆಯಲ್ಲಿ ಒದುತ್ತಿರುವ ಸಮಯದಲ್ಲಿ ಆದ ಒಂದು ಘಟನೆಯಿದು.ಆಗತಾನೆ ಸರಕಾರದ ವತಿಯಿಂದ ಶಾಲೆಯಲ್ಲಿ ಉಚಿತ ಸೈಕಲ್ ಕೊಡುತ್ತಿದ್ದರು , ಆ ಸೈಕಲ್ ಗೋಸ್ಕರ ತಾನು ಒದುತ್ತಿರುವ ಪ್ರೈವೆಟ್ ಶಾಲೆಯನ್ನು ಬಿಟ್ಟು ಸರಕಾರಿ ಶಾಲೆಗೆ ಬರುತ್ತಾನೆ. ಅಲ್ಲಿ ಅವನಿಗೆ ಕೆಲವು ಹುಡುಗರ ಸ್ನೇಹವಾಗುತ್ತದೆ. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಹಾ-ಮೇದಾವಿಗಳು. ಹೊಸ ಹೊಸ ಅಡ್ವೆಂಚರ್ ಮಾಡುವುದರಲ್ಲಿ ಮುಂದು. ಒಂದು ದಿನ ಹೀಗೆ ಅವನು ಮತ್ತು ಅವನ ಸ್ನೇಹಿತರಿಗೆ ನೀಲಿ ಸಿನಿಮಾದ ಬಗ್ಗೆ ಆಸಕ್ತಿ ಉಂಟಾಗುತ್ತದೆ. ಅದು ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಎಲ್ಲರೂ ಒಂದು ಪ್ಲ್ಯಾನ್ ಹಾಕಿ ಸ್ವಲ್ಪ ಸ್ವಲ್ಪ ದುಡ್ಡು ಜಮಾ ಮಾಡಿ ಬಾಡಿಗೆಗೆ CD ಖರಿದಿಸುತ್ತಾರೆ. ಆದರೆ ನೋಡುವುದು ಎಲ್ಲಿ ಎಂಬ ಪ್ರಶ್ನೆ ಉಂಟಾಗುತ್ತದೆ. ತನ್ನ ಗೆಳೆಯ ಮಂಜನ ಮನೆ ಊರಿಂದ ಹೊರಗಡೆ ಇರುತ್ತದೆ ಮನೆಯಲ್ಲಿ ಯಾರು ಇರೋದಿಲ್ಲ ಅಪ್ಪ ಅಮ್ಮ ಗದ್ದೆಗೆ ಕೆಲಸಕ್ಕೆ ಹೋಗಿರುತ್ತಾರೆ. ಅಷ್ಟೆ ಅಲ್ಲದೆ ಅವರ ಮನೆಯಲ್ಲಿ CD ಪ್ಲೇಯರ್ ಇರೋದ್ರಿಂದ ಎಲ್ಲರು ಮಂಜನಾ ಮನೆಗೆ ಹೋಗಲು ನಿರ್ದರಿಸುತ್ತಾರೆ. ಜೊತೆಗೆ ಟೈಮ್ ಪಾಸ್ ಮಾಡಲು ಅಂತ ಗೋಲಿಸೋಡ , ಬಟಾಣಿ , ಕುರ್ಕುರೆ, ತಗೊಂಡು ಹೋಗಿರುತ್ತಾರೆ. ಮಂಜನಾ ಮನೆಯಲ್ಲಿ ಯಾರು ಇಲ್ದೆ ಇರೊದ್ರಿಂದ ಟಿವಿ ಆನ್ ಮಾಡಿ cd ಹಾಕುತ್ತಾರೆ. ಇನ್ನೆನು ಸಿನೆಮಾ ಶುರು ಆಗಬೇಕು ಅನ್ನೊಷ್ತೊತ್ತಿಗೆ ಕರೆಂಟ್ ಹೋಗುತ್ತದೆ. CD ಅದರಲ್ಲೆ ಸ್ಟಕ್ ಆಗುತ್ತದೆ. ಏಷ್ಟೆ ಪ್ರಯತ್ನ ಮಾಡಿದರು cd ನಾ ಹೊರತೆಗೆಯಲು ಆಗುವುದಿಲ್ಲ . ಎಲ್ಲರು ಕರೆಂಟ್ ಬಂದಮೇಲೆ ತೆಗೆಯೊಕೆ ಬರುತ್ತೆ ಅಂತ ಕುಡುತ್ತಾರೆ. ಸ್ವಲ್ಪ ಹೊತ್ತಲ್ಲೆ ಎಲ್ಲರೂ ನಿದ್ರೆಗೆ ಜಾರುತ್ತಾರೆ ಸ್ವಲ್ಪ ಹೊತ್ತಿನ ನಂತರ ಹೊರಗಿನಿಂದ ಯಾರೊ ಬಾಗಿಲು ಬಡೆಯುತ್ತಿರುವ ಶಬ್ದ ಕೇಳುತ್ತದೆ. ನಿದ್ದೆ ಗಣ್ಣಲ್ಲೆ ಇದ್ದ ಒಬ್ಬ ಸ್ನೇಹಿತ ಹೋಗಿ ಬಾಗಿಲನ್ನು ತೆಗೆಯುತ್ತಾನೆ. ಮಂಜನ ಅಪ್ಪನನ್ನು ನೋಡಿ ನಿದ್ದೆಯಲ್ಲ ಹಾರಿ ಹೋಗುತ್ತದೆ.

 ಅಪ್ಪ "ಎನ್ ಮಾಡ್ತಿದ್ರಲಾ ಬಾಗ್ಲ್ ಹಾಕಿ ", ಎಂದಾಗ 

ಸ್ನೇಹಿತ "ಓದುತ್ತಾ ಇದ್ವಿ ತೊಂದರೆ ಆಗ್ಬಾರ್ದು ಅಂತ ಬಾಗಿಲು ಹಾಕಿದ್ವಿ " ಅಂತ ಹೇಳ್ತಾನೆ.


ಮೆಲ್ಲನೆ ಎಲ್ಲರನ್ನು ಎಬ್ಬಿಸಿ ಅಲ್ಲಿಂದ ಎಸ್ಕೇಪ್ ಆಗುತ್ತಾರೆ. ಆದರೆ ಮಂಜ ಅಲ್ಲೆ ಗೊರಕೆ ಹೊಡೆಯುತ್ತ ಮಲಗಿರುತ್ತಾನೆ. ಅವನ ಅಪ್ಪ ಬಂದಿರೋದು ಗೊತ್ತಾಗಲ್ಲ. ಅದೆ ಸಮಯಕ್ಕೆ ಹೋಗಿರೊ ಕರೆಂಟ್ ಕೂಡ ಬರುತ್ತೆ . ಆಫ್ ಆಗಿರೊ ಟಿವಿ ಆನ್ ಆಗಿ ನಿಂತಿರೊ ಸಿನಿಮಾ ಮುಂದುವರೆಯುತ್ತದೆ. ಅದನ್ನು ನೋಡಿ ಮಂಜನ ಅಪ್ಪ , ಮಲಗಿರೊ ಅವುನ್ನ ಎಬ್ಬಿಸಿ ಹೊಡೆಯುತ್ತಾನೆ.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract