STORYMIRROR

Prajna Raveesh

Abstract Classics Others

4  

Prajna Raveesh

Abstract Classics Others

ಸಂಕಲ್ಪ

ಸಂಕಲ್ಪ

2 mins
252

ಶಾಂತ ಈಗ ತಾನೇ ಪದವಿ ಪೂರ್ವ ಶಿಕ್ಷಣ ಓದುತ್ತಿರುವ ಚೆಂದದ ಹುಡುಗಿ, ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಎಂದ ಕೂಡಲೇ ಬೇಗ ಮದುವೆ ಮಾಡಿಸಿ ಬಿಡುವ ಪದ್ಧತಿಯಿತ್ತು, ಹಾಗೆಯೇ ಶಾಂತಾಗೂ ಪದವಿ ಪೂರ್ವ ತರಗತಿಯಲ್ಲಿ ಇರುವಾಗಲೇ ಅವಳ ಅಪ್ಪ, ಅಮ್ಮ ಅವಳಿಗೆ ಮದುವೆ ಮಾಡಿಸಿ ಕೊಟ್ಟರು ಆದರೆ ಅವಳಿಗೆ ಈ ಮದುವೆಗೆ ಒಪ್ಪಿಗೆ ಇರಲಿಲ್ಲ ಏಕೆಂದರೆ ಅವಳಿಗೆ ಇನ್ನೂ ಓದಬೇಕೆಂಬ ಹಂಬಲವಿತ್ತು.


ಆದರೆ ಅವಳ ಮನಸ್ಸಿನ ಮಾತುಗಳನ್ನು ಕೇಳುವವರಾರು??, ಹಿಂದಿನ ಕಾಲದಲ್ಲಿ ಹುಡುಗಿ ಎಂದಾದ ಕೂಡಲೇ ಬೇಗನೇ ಮದುವೆ ಮಾಡಿ ಕೊಟ್ಟರೆ ನಮಗೆ ಮತ್ತೆ ಚಿಂತೆ ಇಲ್ಲ ಎಂದು ಯೋಚನೆ ಮಾಡುವ ಅಪ್ಪ, ಅಮ್ಮನೇ ಜಾಸ್ತಿ ಎನ್ನಬಹುದು, ಹಾಗಾಗಿ ಅವಳ ಒಪ್ಪಿಗೆಗೆ ಇಲ್ಲಿ ಅನುವಿರಲಿಲ್ಲ, ಒಂದು ಹುಡುಗನ ಜಾತಕ ಶಾಂತಾಳಿಗೆ ಹೊಂದಿಕೆಯಾಯಿತು ಹಾಗಾಗಿ ಆ ಹುಡುಗನಿಗೆ ಆಕೆಯನ್ನು ಕೊಟ್ಟು ಮದುವೆ ಮಾಡಲಾಯಿತು.


ಅವಳ ಅದೃಷ್ಟವಶಾತ್ ಎಂಬಂತೆ ಹುಡುಗನ ಮನೆಯವರು ಬಹಳ ಒಳ್ಳೆಯವರಾಗಿದ್ದರು, ಸಂಪ್ರದಾಯಸ್ಥ ಕುಟುಂಬದವರು ಆಗಿದ್ದರು, ಈ ಮದುವೆಯಿಂದ ಅವಳ ಮನಸ್ಸಿಗೂ ಕೂಡ ಖುಷಿಯಾಯಿತು, ಹಾಗಾಗಿ ಆ ಮನೆಯಲ್ಲಿ ಶಾಂತಾ ಬಹು ಬೇಗ ಹೊಂದಿಕೊಂಡಳು.


ಆಕೆಗೆ ಇನ್ನೂ 18 ವರ್ಷ, ಆತನಿಗೆ 21 ವರ್ಷ, ಹಿಂದಿನ ಕಾಲದಲ್ಲಿ ಈಗಿನ ಕಾಲದ ರೀತಿಯಲ್ಲ ಮದುವೆ ಆಗಿ 1 ವರ್ಷ ಆಗುವಾಗಲೇ ಹೆರಿಗೆಯಾಗುತ್ತಿತ್ತು ಹಾಗಾಗಿ ಈ ದಂಪತಿಗಳಿಗೂ ಕೂಡ ಮಕ್ಕಳು ಬೇಕೆಂಬ ಹಂಬಲವಾಯಿತು, ತುಂಬಾ ಸಂಪ್ರದಾಯಸ್ಥ ಮನೆತನ ಆದ ಕಾರಣ ಪ್ರತಿ ದಿನವೂ ಮನೆಯಲ್ಲಿ ಪೂಜೆ, ಪುರಸ್ಕಾರಗಳು ನಡೆಯುತ್ತಿತ್ತು ಆದರೂ ಇವರು ಮದುವೆಯಾಗಿ 12 ವರ್ಷಗಳಾದರೂ ಕೂಡ ಮಕ್ಕಳಾಗಿರಲಿಲ್ಲ!!


ಇದರಿಂದ ಮನೆಯವರಿಗೆ ಚಿಂತೆಯಾಗಲು ಶುರುವಾಯಿತು, ಮಕ್ಕಳಿಗಾಗಿ ಮಾಡದ ಹೋಮ, ಹವನಗಳಿಲ್ಲ, ಸುತ್ತದ ದೇವಾಲಯಗಳಿಲ್ಲ, ಇಷ್ಟು ಕೂಡ ದೇವರನ್ನು ನಂಬಿ, ಮಕ್ಕಳಾಗಲಿ ಎಂಬ ಸಂಕಲ್ಪವನ್ನು ಮಾಡಿಕೊಂಡರೂ ಕೂಡ ಮಕ್ಕಾಗುತ್ತಿಲ್ಲವಲ್ಲ ಎಂಬ ಚಿಂತೆ ಕಾಡಲು ಶುರುವಾಯಿತು ಮನೆಯವರಿಗೆ, ಹೀಗೆ ಮನೆ ಕೆಲಸ, ತೋಟದ ಕೆಲಸ, ಕೊಟ್ಟಿಗೆಯ ಕೆಲಸವೆಂದು, ನಿತ್ಯ ಪೂಜೆ ಎಂದು ದೇವರನ್ನು ನಂಬಿಕೊಂಡು, ದೇವರು ದಾರಿ ತೋರುವನು ಎಂಬ ನಂಬಿಕೆಯಿಂದ 12 ವರ್ಷಗಳನ್ನೇ ಕಳೆದರು ದಂಪತಿಗಳು!!


ಇನ್ನು ಹೀಗೆ ವರ್ಷ ದೂಡುವುದು ಸರಿಯಲ್ಲ, ಇನ್ನೂ ಕೂಡ ಮಕ್ಕಳಾಗದಿದ್ದರೆ ವಯಸ್ಸು ಮೀರಿ ಹೋದೀತು, ನಂತರ ಹೆರಿಗೆಗೆ ಕಷ್ಟವಾದೀತು ಇನ್ನೇನು ಮಾಡುವುದು ಎಂದು ಯೋಚನೆ ಮಾಡುವಾಗ ಥಟ್ಟನೇ ಅವರಿಗೆ ಜ್ಯೋತಿಷ್ಯರ ಬಳಿ ಹೋಗಿ ಪರಿಹಾರೋಪಾಯಗಳನ್ನು ಕೇಳುವುದೇ ಒಳಿತು ಎಂದು ಅನಿಸಿತು ಹಾಗಾಗಿ ಅವರು ಜ್ಯೋತಿಷಿಗಳ ಬಳಿ ಹೋಗಿ ಪರಿಹಾರೋಪಾಯಗಳನ್ನು ಕೇಳಿದರು.


ಆಗ ಜ್ಯೋತಿಷಿಗಳು ಇಬ್ಬರ ಜಾತಕಗಳನ್ನು ನೋಡಿ, ನಿಮಗೆ ಗುರು ದೋಷವಿದೆ ಹಾಗಾಗಿ ಅದುವೇ ಮಕ್ಕಳಾಗದೆ ಇರಲು ಮುಖ್ಯ ಕಾರಣ ಎಂದರು ಹಾಗೂ ನಿಮ್ಮ ಮನೆಯ ಪಿತೃಗಳಿಗೆ ಪಿತೃ ಕಾರ್ಯಗಳನ್ನು ಸರಿಯಾಗಿ ನೆರವೇರಿಸದೇ ಇದ್ದ ಕಾರಣ ಅವರ ಮನಸ್ಸಿನ ನೋವೇ ನಿಮಗೆ ಗುರು ದೋಷವಾಗಿ ಪರಿಣಮಿಸಿದೆ ಎಂದಾಗ ಶಾಂತಾಳ ಮಾವನವರು ಶಾಂತಾ ಮದುವೆಯಾಗುವುದಕ್ಕೆ ಮುಂಚೆ ಮನೆ ಬಿಟ್ಟು ಹೋಗಿದ್ದರು, ಅವರನ್ನು ಹುಡುಕುವ ಪ್ರಯತ್ನಕ್ಕೆ ನೀವು ಹೋಗಿರಲಿಲ್ಲ ಹಾಗಾಗಿ ಅವರು ಈಗ ಜೀವಂತವಾಗಿ ಇರಲಿಕ್ಕಿಲ್ಲ ಹಾಗಾಗಿ ಅವರಿಗೆ ನೀವು ಯಾವ ಪಿತೃ ಕಾರ್ಯಗಳನ್ನು ಕೂಡ ಮಾಡಿರುವುದಿಲ್ಲ ಹಾಗಾಗಿ ಇದುವೇ ಗುರ ದೋಷವಾಗಿ ಕಾಡುತ್ತಿದೆ ಎಂದಾಗ ಶಾಂತಾಳ ಅತ್ತೆಗೆ ಶಾಂತಾಳ ಗಂಡ 3 ನೆಯ ವಯಸ್ಸಿನಲ್ಲಿ ಇರುವಾಗಲೇ ತನ್ನನ್ನು ಬಿಟ್ಟು ಬೇರೆಡೆಗೆ ಹೋದ ತನ್ನ ಗಂಡನ ನೆನಪಾಯಿತು.


ಜ್ಯೋತಿಷ್ಯರು ಅವರು ಯಾವಾಗ ತೀರಿ ಹೋಗಿದ್ದಾರೆ ಎಂಬ ಖಚಿತ ಮಾಹಿತಿಯಿಲ್ಲ ಹಾಗಾಗಿ ಬಹುಳ ಪಾಡ್ಯದ ದಿನದಂದು ಪಿತೃ ಕಾರ್ಯ ಮಾಡಲು ಪ್ರಶಸ್ತ ದಿನ ಹಾಗಾಗಿ ಆ ದಿನವೇ ನೆರವೇರಿಸಿಕೊಂಡು ಬನ್ನಿ ಎಂದು ಪ್ರತಿ ವರ್ಷವೂ ಬಹುಳ ಪಾಡ್ಯದ ದಿನದಂದು ಪಿತೃ ಕಾರ್ಯಗಳನ್ನು ನೆರವೇರಿಸಿದ ನಂತರ ಒಂದೇ ವರ್ಷದ ಅವಧಿಯಲ್ಲಿ ಅವರಿಗೆ ಅವಳಿ ಜವಳಿ ಮಕ್ಕಳು ಹುಟ್ಟಿದರು!!, ಅದೂ ಕೂಡ ಒಂದು ಗಂಡು, ಒಂದು ಹೆಣ್ಣು ಅವಳಿ ಜವಳಿ ಮಕ್ಕಳು!!


ಹಾಗಾಗಿ ಯಾವುದೇ ಕಾರ್ಯಗಳು ನೆರವೇರಲು ದೇವರ ಕೃಪೆಯ ಜೊತೆಗೆ ಗುರು ಹಿರಿಯರ ಆಶೀರ್ವಾದ ಹಾಗೂ ಅವರ ಮನಸ್ಸಿಗೆ ನೋವಾಗದಂತೆ ಸರಿಯಾಗಿ ಪಿತೃ ಕಾರ್ಯ ಗಳನ್ನು ನೆರವೇರಿಸುವುದರ ಜೊತೆಗೆ ಅವರ ಮನೋಸಂಕಲ್ಪವೂ ಬೇಕಾಗುತ್ತದೆ.


Rate this content
Log in

Similar kannada story from Abstract