ಸಿಂಹಿಣಿ
ಸಿಂಹಿಣಿ
ಅದೊಂದು ದಟ್ಟ ಕಾನನ. ದಟ್ಟವಾದ ಮರಗಳು ಮುಗಿಲನ್ನು ಮುಟ್ಟಿ ಸೂರ್ಯನಿಗೆ ಚಪ್ಪರ ಹಾಕಿದ್ದವು. ಈ ಕಾಡಿನಲ್ಲಿ ಮೃಗರಾಜ ಸಿಂಹನ ಕಾರುಬಾರು ಹೆಚ್ಚು. ಈ ಮೃಗರಾಜನಿಗೆ ಹೆದರಿ ಕಾಡಿನ ಇತರ ಪ್ರಾಣಿಗಳು ತಮ್ಮ ತಮ್ಮ ಗೂಡುಗಳನ್ನು ಬಿಟ್ಟು ಹೊರಗೆ ಬರಲು ಹೆದರುತ್ತಿದ್ದವು. ಹೀಗಾಗಿ ಅವುಗಳಿಗೆ ತಮ್ಮ ಹೊಟ್ಟೆ ಹೊರೆದುಕೊಳ್ಳುವುದು ಕಷ್ಟವಾಯಿತು.
ಒಂದು ದಿನ ಎಲ್ಲಾ ಪ್ರಾಣಿಗಳು ಸೇರಿ, ವನರಾಜನ ಹೆಂಡತಿ ವಿಶ್ರಾಂತಿ ಸಿಂಹಿಣಿಯ ಬಳಿಗೆ ಹೋಗಿ, ಅದನ್ನು ಹಾಡಿ ಹೊಗಳಿ , ಮುಖಸ್ತುತಿ ಮಾಡಿದವು. ತನ್ನ ಕಾಡಿನ ಎಲ್ಲಾ ಪ್ರಾಣಿಗಳ ಮಾತುಗಳನ್ನು ಕೇಳಿದ ಸಿಂಹಿಣಿ ಖುಷಿಯಿಂದ ಉಬ್ಬಿ ಹೋಗಿ, ಎಲ್ಲರ ಕಷ್ಟ ಗಳನ್ನು ಕೇಳಿತು. ಇದೇತಕ್ಕ ಸಮಯವೆಂದು ತಿಳಿದು, ಮಿಕ್ಕ ಎಲ್ಲಾ ಪ್ರಾಣಿಗಳು, ನರಿಯನ್ನು ಮುಂದಿಟ್ಟುಕೊಂಡು,ವನರಾಣಿಗೆ ತಮ್ಮ ಅವಹಾಲನ್ನು ಹೇಳಿ ಕೊಂಡವು. ಸಿಂಹಿಣಿಗೆ ತನ್ನ ಪ್ರಜೆಗಳ ಅಹವಾಲುಗಳನ್ನು ಕೇಳಿ,
ಸ್ವಲ್ಪ ಮನೆ ಕರಗಿತು. ಇನ್ನು ಮುಂದೆ ವನರಾಜ ನಿಂದ
ನಿಮಗೆ ಯಾವ ತೊಂದರೆಯೂ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಅವುಗಳಿಗೆ ಆಶ್ವಾಸನೆ ನೀಡಿತು. ವನರಾಣಿಯ ಆಶ್ವಾಸನೆ ಕೇಳಿ ಪ್ರಾಣಿಗಳಿಗೆಲ್ಲಾ ತುಂಬಾ ಸಮಾಧಾನವಾಯಿತು. ತಾನು ತನ್ನ ಕಾಡಿನ ಪ್ರಾಣಿಗಳಿಗೆ ಕೊಟ್ಟ ಮಾತಿನಂತೆ, ವನರಾಣಿ ಸಿಂಹಿಣಿ, ಉಪಾಯದಿಂದ ಮೃಗರಾಜನ ಮನವೊಲಿಸಿ, ಅದರ ಬೇಟೆಯ ದಾರಿಯನ್ನು ಬದಲಾಯಿಸುವಂತೆ ಮಾಡಿತು. ಇದರಿಂದ ಮಿಕ್ಕ ಪ್ರಾಣಿಗಳಿಗೆ ತಮ್ಮ ಬೇಟೆ ಗೆ ಅನುಕೂಲವಾಗಿ, ತಮ್ಮ ತಮ್ಮ ಆಹಾರವನ್ನು ಹುಡುಕಿ
ತಿಂದು ಹೊಟ್ಟೆ ಹೊರೆದು ಕೊಳ್ಳುತ್ತಿದ್ದವು. ವನ ರಾಣಿ ಸಿಂಹಿಣಿ, ಅತ್ಯಂತ ಕ್ರೂರ ಪ್ರಾಣಿಯೇ ಆಗಿದ್ದರೂ ತನ್ನ ಮಕ್ಕಳಂತೆ ಇರುವ ಇತರ ಪ್ರಾಣಿಗಳ ರಕ್ಷಣೆ ಯ ಭಾರವನ್ನು ಹೊತ್ತಿತು. ಇಂತಹ ಮಾತೃ ಹೃದಯದ ತಮ್ಮ ರಾಣಿಗೆ, ಇತರ ಪ್ರಾಣಿಗಳು ಗೌರವ ತೋರಿಸಲು ಪ್ರಾರಂಭಿಸಿದವು.