ಶುಭ ಮುಹೂರ್ತ
ಶುಭ ಮುಹೂರ್ತ
ಶುಭ ಮೂಹೂರ್ತದಲ್ಲಿ ಮದುವೆಯಾಗಿ ಸುಹಾಸನ ಮಡದಿಯಾಗಿ ಅತ್ತೆ ಮಾವನ ಮುದ್ದಿನ ಸೊಸೆಯಾಗಿ ಸ್ವಾತಿ ಅತ್ತೆಯ ಮನೆ ಪ್ರವೇಶಸ ಬೇಕಾಗಿದ್ದವಳು ತಂದೆಯ ಮನೆಯಲ್ಲಿ ಉಳಿಯುವಂತೆ
ಆಯಿತು, ತಂದೆ ತಾಯಿಯರ ಒಬ್ಬಳೇ ಮುದ್ದಿನ ಮಗಳಾಗಿ ಬೆಳೆದ ಸ್ವಾತಿ ಮದುವೆಯ ವಯಸ್ಸಿಗೆ ಬಂದಾಗ ಎಲ್ಲರ ಹಾಗೆ ಅವಳ ಮನದಲ್ಲೂ ಮದುವೆಯ ಬಗ್ಗೆ ಭಾವಿ ಪತಿಯ, ಬಗ್ಗೆ ಸಾವಿರ ಕನಸುಗಳು ಕಂಡಿದ್ದಳು, ಬ್ರೋಕರ್ ಒಬ್ಬರು ಸುಹಾಸನ ಸಂಬಂಧ ತೆಗೆದುಕೊಂಡು ಬಂದಾಗ ಸ್ವಾತಿಯ ತಂದೆ ತಾಯಿಗೆ ಬೇಡವೆನ್ನಲು ಯಾವ ಕಾರಣವೂ ಇರಲಿಲ್ಲ ಒಬ್ಬನೇ ಮಗ ಒಳ್ಳೆ ಕೆಲಸದಲ್ಲಿದ್ದ ನೋಡಲು ಸುರದ್ರೂಪಿ ಒಳ್ಳೆಯ ಗುಣವಂತ ಸ್ವಾತಿಯು ಅವನನ್ನು ಮನಸಾರೆ ಇಷ್ಟಪಟ್ಟಿದ್ದಳು ಎರಡು ಮನೆಯವರ ಒಪ್ಪಿಗೆಯ ಮೇರೆಗೆ ಮದುವೆಯ ದಿನಾಂಕ ನಿಶ್ಚಯವಾಗಿತ್ತು ಸ್ವಾತಿಯ ತಂದೆ ತಾಯಿಗೂ ಒಬ್ಬಳೇ ಮಗಳು ಆಗಿರುವುದರಿಂದ ಅದ್ದೂರಿಯಾಗಿ ಮದುವೆ ಮಾಡಿಕೊಡಲು ಎಲ್ಲ ವ್ಯವಸ್ಥೆಯು ತಯಾರಾಗಿತ್ತು ಮದುವೆಯಾಗಬೇಕಾದ ಹುಡುಗ ಹುಡುಗಿ ಇಬ್ಬರು ತಮ್ಮ ಭವಿಷ್ಯದ ಜೀವನದ ಬಗ್ಗೆ ಕನಸು ಕಾಣುತ್ತಾ, ಸುತ್ತಾಡುತ್ತಾ ಫೋನಿನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾ ತುಂಬಾ ಹತ್ತಿರವಾಗಿದ್ದರು........
ಇನ್ನೇನು ಮದುವೆ ಒಂದು ತಿಂಗಳು ಇದೆ ಎನ್ನುವಾಗ ಜಗತ್ತಿನ ತುಂಬೆಲ್ಲ ಕರೋನಾ ಎಂಬ ಮಹಾಮಾರಿ ಹಬ್ಬಿ ಮೆರೆಯುತ್ತಾ ಇತ್ತು ಇಂಥ ಸಮಯದಲ್ಲಿ ದೊಡ್ಡದಾಗಿ ಅದ್ದೂರಿ ಮದುವೆ ಮಾಡಲು ಸಾಧ್ಯವಿಲ್ಲ ಎಂದು ನಿಶ್ಚಯಿಸಿ ಸ್ವಾತಿ ಮತ್ತು ಸುಹಾಸನ ಮನೆಯವರಷ್ಟೇ ಸೇರಿ ಸಿಂಪಲ್ಲಾಗಿ ಮದುವೆ ಮಾಡಿ ಮುಗಿಸಲು ನಿಶ್ಚಯಿಸಿದರು,
ಮದುವೆಯ ದಿನ ಬಂದೇ ಬಿಟ್ಟಿತು ಮನೆಯವರಷ್ಟೇ ಸೇರಿ ಮದುವೆಯನ್ನು ಸಾಂಗವಾಗಿ ನೆರವೇರಿಸಿದರು ಮದುವೆಯಾಗಿ ಇನ್ನೇನು ಹೆಣ್ಣನ್ನು ಗಂಡಿನ ಮನೆಗೆ ಬಿಳ್ಕೊಡುವ ಸಮಯದಲ್ಲಿ ಸುಹಾಸ್ ವಿಪರೀತ ಜ್ವರದಿಂದ ಬಳಲುತಿದ್ದ ಹಿಂದಿನ ದಿನವೇ ಸುಹಾಸನಿಗೆ ಸ್ವಲ್ಪ ನೆಗಡಿ ಕೆಮ್ಮು ಆಗಿತ್ತು ಮದುವೆಯ ಸಮಯದಲ್ಲಿ ಹೋಮದ ಮುಂದೆ ಕುಳಿತಾಗ ಆ ಹೋಗೆಯಿಂದ ಅವನಿಗೆ ಇನ್ನಷ್ಟು ಉಸಿರಾಡಲು ತೊಂದರೆಯಾಗಿತ್ತು ಆಗ ಅವನು ಸಾಧಾರಣ ನೆಗಡಿ ಕೆಮ್ಮು ಎಂದು ನಿರ್ಲಕ್ಷಿಸಿದ್ದ ಮದುವೆ ಆಗುತ್ತಿದ್ದಂತೆ ಉಸಿರಾಟದ ತೊಂದರೆ ಜೊತೆಗೆ ಜ್ವರವು ಸೇರಿತ್ತು ಮದುವೆಯಾದ ಜೋಡಿಯನ್ನು ಮನೆ ತುಂಬಿಸಿಕೊಳ್ಳಬೇಕಾದ ಹೊತ್ತಲ್ಲಿ ಸುಹಾಸ್ ಆಸ್ಪತ್ರೆ ಸೇರುವಂತೆ
ಆಯ್ತು ಕರೋನಾದ ಕಾಲವಾಗಿದ್ದರಿಂದ ಎಲ್ಲರಿಗೂ ಭಯ ಶುರುವಾಯಿತು ತುರ್ತಾಗಿ ಸುಹಾಸನನ್ನು ಆಸ್ಪತ್ರೆಗೆ ಸೇರಿಸಲಾಯಿತು ಸ್ವಾತಿ ಮತ್ತು ಸುಹಾಸನ ಹೆತ್ತವರಿಗೆ ತುಂಬಾ ಭಯ ಆತಂಕ ಸುರವಾಗಿತ್ತು ಯಾಕೆಂದರೆ ಆಸ್ಪತ್ರೆಗೆ ಹೋದವರು ಯಾರು ವಾಪಸ್ ಬರುತ್ತಿರಲಿಲ್ಲ ಸ್ವಾತಿಗೆ ಮದುವೆಯದ ಜೋಡಿ ಒಂದಾಗಿರಬೇಕಾದೋರು ಸುಹಾಸ್ ಆಸ್ಪತ್ರೆಯಲ್ಲಿ ಸ್ವಾತಿ ತವರು ಮನೆಯಲ್ಲಿ ಇರುವಂತಾಗಿತ್ತು ಸ್ವಾತಿಗೆ ಸುಹಾಸನ ಪರಿಸ್ಥಿತಿ ಕಂಡು ಜೀವವೇ ಬಾಯಿಗೆ ಬಂದಂತಾಗಿತ್ತು
ಒಂದು ವಾರದ ಚಿಕಿತ್ಸೆ ನಂತರ ಸುಹಾಸ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡ ಸ್ವಾತಿಯ ಮೇಲಿರುವ ಪ್ರೀತಿ ಜೀವನದ ಮೇಲಿರುವ ಆಸೆ ಸುಹಾಸನನ್ನು ಬದುಕಿಸುವಂತಾಗಿತ್ತು, ಎಂಟು ಹತ್ತು ದಿನದಗಳು ನಂತರ ಸುಹಾಸ್ ಆಸ್ಪತ್ರೆಯಿಂದ ಮನೆಗೆ ಮರಳಿದ ಜೊತೆಗೆ ಸ್ವಾತಿಯನ್ನು ಅವತ್ತೇ ಮನೆ ತುಂಬಿಸಿಕೊಂಡರು ಮದುವೆಯಾದ ನಂತರ ಶುಭ ಮುಹೂರ್ತದಲ್ಲಿ ಮನೆ ತುಂಬಿಸಿಕೊಳ್ಳಬೇಕಾಗಿದ್ದ ಸೊಸೆಯನ್ನು ಮಗನ ಅನಾರೋಗ್ಯದ ಕಾರಣ ಹತ್ತು ದಿನದ ನಂತರ ಮಗನ ಜೊತೆಗೆ ಸೊಸೆಯನ್ನು ಮನೆ ತುಂಬಿಸಿಕೊಂಡಾಗ ಅವತ್ತೇ ಅವರಿಗೆ ಶುಭ ಮೂಹೂರ್ತವಾಗಿತ್ತು.....
