ಕಣ್ಣೀರಿಗೊಂದು ಪತ್ರ
ಕಣ್ಣೀರಿಗೊಂದು ಪತ್ರ
ಪ್ರೀತಿಯ ಕಣ್ಣೀರು,
ನೀನು ಎಲ್ಲಿದ್ದೀಯಾ? ಹೇಗಿದ್ದೀಯಾ ಎಂದು ನಾನು ಕೇಳುವುದಿಲ್ಲ, ಯಾಕೆಂದರೆ ಯಾರ ಕಣ್ಣಲ್ಲು ನೀನು ಬರದೆಯಿರು ಒಂದು ವೇಳೆ ನೀನು ಬಂದರು ಮನಸ್ಸಿಗೆ ಸಂತೋಷ ಹೆಚ್ಚಾದಾಗ ಕಣ್ಣಿಂದ ಇಳಿದು ಬಾ ಭಾವನೆಗಳ ತುಮುಲ ಹೆಚ್ಚಾದಾಗ ನಮ್ಮನ್ನು ನೋಯಿಸಿ ತೋಯಿಸಬೇಡ, ಮೊದಲೇ ಹೆಣ್ಣು ಮಕ್ಕಳೆಂದರೆ ನಿನಗೆ ತುಂಬಾ ಪ್ರೀತಿ ಸಂತೋಷಕ್ಕೂ ಬರುತ್ತೀಯಾ ದುಃಖಕ್ಕೂ ಬರುತ್ತೀಯಾ!...
ಕಣ್ಣೀರು!! ನೀನು ಕಣ್ಣೊಳಗೆ ಅಡಿಗೆ ಕುಳಿತು ಹೆಣ್ಣು ಮಕ್ಕಳ ಶಕ್ತಿಯಾಗು ಹೆಣ್ಣು ಮಕ್ಕಳ ದೌರ್ಬಲ್ಯವಾಗಬೇಡ ಹೌದು! ನನಗೂ ಗೊತ್ತು ಹೆಣ್ಣು ಮಕ್ಕಳಿಗೂ ಅದೇನೋ ನೀನೆಂದರೆ ತುಂಬಾ ಪ್ರೀತಿ ಮಾತಿಗೆ ಮುಂಚೆ ಎಲ್ಲ ಹೆಂಗಸರ ಕಣ್ಣಲ್ಲಿ ಬಂದು ತೊಂದರೆ ಕೊಡಬೇಡ ಕಣ್ಣೀರನ್ನೆ ಹರಿಸದಿರುವ ಕಲ್ಲು ಹೃದಯದ ಗಂಡಸರು ಇರಬಹುದೇನೋ ಆದರೆ ಕಣ್ಣೀರು ಹರಿಸದ ಹೆಣ್ಣು ಮಕ್ಕಳು ಇರಲು ಸಾಧ್ಯವೇ??
ನಿನ್ನಿಂದಲೇ ನಮಗೆ ಅಳುಮುಂಜಿ, ಬಕೇಟು, ಕರ್ಚೀಪು ಅನ್ನೋ ಬಿರುದುಗಳು ಬಂದಿವೆ ಎರಡು ಹನಿ ಕಣ್ಣೀರು ಹಾಕಿ ಎಲ್ಲರನ್ನು ಒಪ್ಪಿಸಿಬಿಡುತ್ತಾರೆ ಎನ್ನುವ ಕೆಟ್ಟ ಹೆಸರು ನಿನ್ನಿಂದಲೇ
ಹೌದು! ಒಪ್ಪಿಕೊಳ್ಳುತ್ತೇನೆ ಎಷ್ಟೋ ಸಲ ನಿನ್ನ ಎರಡು ಹನಿ ಕಣ್ಣೀರಿನಿಂದ ಅಸಾಧ್ಯವಾದದ್ದು ಕೂಡ ಸಾಧ್ಯವಾಗುತ್ತದೆ ಅದರಲ್ಲೂ ಗಂಡಸರನ್ನು ಒಪ್ಪಿಸಲು ನಿನ್ನ ಸಹಾಯ ಅನನ್ಯ ಹಾಗೆಂದ ಮಾತ್ರಕ್ಕೆ ನೀನು ಬೇಕೆಂದಾಗ ನಮ್ಮ ಕಣ್ಣಲ್ಲಿ ಬಂದು ನಮ್ಮನ್ನು ಬಲಹೀನರನ್ನಾಗಿ ಮಾಡಬೇಡ ಬೇಕಾದರೆ ಧಾರವಾಹಿ ಸಿನಿಮಾ ಗಾಗಿ ಆಕ್ಟಿಂಗ್ ಮಾಡಿ ಅಳಲು ಪ್ರಯತ್ನಿಸುವವರ ಕಣ್ಣಲ್ಲಿ ಬಂದು ಅವರಿಗೆ ಸಹಾಯ ಮಾಡು ಗ್ಲಿಸರಿನ್ ಬಳಕೆಯಾದರು ಕಡಿಮೆಯಾಗುತ್ತದೆ......
ಇಂತಿ ನಿನ್ನ ಪ್ರೀತಿಯ
