Joshi Studio Channel

Drama Inspirational Others

4  

Joshi Studio Channel

Drama Inspirational Others

ಸದಾ ಕಾಡುವ ನೆನಪು

ಸದಾ ಕಾಡುವ ನೆನಪು

2 mins
397


ನೆನಪುಗಳ ಮಾತು ಮಧುರ ನಟ ರಮೇಶ್ ಅರವಿಂದ್ ಮತ್ತು ನಟಿ ಪ್ರೇಮಾ ಅಭಿನಯದ ಸೂಪರ್ ಹಿಟ್ ಕನ್ನಡ ಚಲನಚಿತ್ರ ಚಂದ್ರ ಮುಖಿ ಪ್ರಾಣಸಖಿ ಚಿತ್ರದ ಜನಪ್ರಿಯ ಗೀತೆಯಾಗಿದ್ದು ಮನುಷ್ಯನ ಜೀವನ ಇಂದಿಗೂ ಸಾಗುತ್ತಿದೆಯೆಂದರೆ ಒಂದು ರೀತಿಯಲ್ಲಿ ಹೇಳುವುದಾದರೆ ನೆನಪು ಕೂಡ ಕಾರಣವಾಗಿದೆ. ದೇವರು ಮನುಷ್ಯನಿಗೆ ಕೊಟ್ಟಿರುವ ನೆನಪು ಒಂದು ರೀತಿಯಲ್ಲಿ ವರ, ಶಾಪವಾದರೆ ನನ್ನ ಜೀವನದಲ್ಲಿ ನನಗೆ ನೀಡಿದ ವರ ಎಂದು ಭಾವಿಸಿದ್ದೇನೆ. ಮನುಷ್ಯನಿಗೆ ನೆನಪುಗಳು ಬರುವುದು ಸಹಜವಾಗಿದ್ದು ಕೆಲವು ನೆನಪುಗಳನ್ನು ಎಷ್ಟು ಪ್ರಯತ್ನಿಸಿದರೂ ಮರೆಯಲು ಸಾಧ್ಯವಾಗುವುದಿಲ್ಲ. ಜೀವನ ಪರ್ಯಂತ ಆ ನೆನಪುಗಳು ಕಾಡುತ್ತಲೇ ಇರುತ್ತವೆ. ಇದನ್ನು ಸದಾ ಕಾಡುವ ನೆನಪು ಎಂದು ಕರೆಯುತ್ತಾರೆ. ಇದೇ ರೀತಿಯಲ್ಲಿ ಒಂದು ನೆನಪು ನನ್ನನ್ನು ಸುಮಾರು ೧೬ ವರ್ಷಗಳಿಂದ ಕಾಡುತ್ತಿದ್ದು ಎಷ್ಟು ಪ್ರಯತ್ನಿಸಿದರೂ ಆ ನೆನಪಿನಿಂದ ಹೊರ ಬರಲು ಇಂದಿಗೂ ಸಾಧ್ಯವಾಗಿಲ್ಲ. ಅಲ್ಲದೆ ಇದು ನನ್ನನ್ನು ಸದಾ ಕಾಡುವ ನೆನಪು ಕೂಡ ಆಗಿದೆ. ಒಂದು ಸತ್ಯದ ವಿಷಯವೇನೆಂದರೆ ನನ್ನ ಬದುಕು ತಿರುವು ಪಡೆದುಕೊಳ್ಳಲು ಕಾರಣವಾಗಿರುವ ಆ ನೆನಪು ಯಾವುದು?

  ಮನುಷ್ಯನ ಜೀವನದಲ್ಲಿ ಪ್ರಮುಖ ಘಟ್ಟ ವೆಂದರೆ ಅದು ಶಿಕ್ಷಣ ಮಾತ್ರ ಆಗಿದೆ. ಅದೇ ಶಿಕ್ಷಣವನ್ನು ಸರಿಯಾಗಿ ಪಡೆದುಕೊಳ್ಳಲಾಗದಿದ್ದರೆ ಬದುಕು ಸಾಗಿಸುವುದು ಕಷ್ಟವಾಗುತ್ತದೆ. ನನ್ನ ದುರಾದೃಷ್ಟವೋ ತಿಳಿಯದು ಶೈಕ್ಷಣಿಕ ಜೀವನ ಸರಿಯಾಗಿ ಸಾಗದ ಕಾರಣ ನನ್ನ ದಿನಗಳು ಕೂಡ ಸಂತೋಷಕರವಾಗಿರಲಿಲ್ಲ. ಸಂಬಂಧದಲ್ಲಿ, ಗೆಳೆಯರಲ್ಲಿ, ಆಪ್ತರಲ್ಲಿ ಕೂಡ ಲೆಕ್ಕಕ್ಕೆ ಇರದ ಬದುಕಿನಲ್ಲಿ ಸೋಲು, ಅವಮಾನ ಆಪ್ತ ಸ್ನೇಹಿತರಾಗಿದ್ದವು. ಬದುಕಿನ ಒಂದು ಒಂದು ದಿನವು ಒಂದೊಂದು ಯುಗ ಕಳೆಯುತ್ತಿರುವಂತೆ ಭಾಸವಾಗುತ್ತಿತ್ತು. ಆದರೆ ಕಾಲ ಒಂದೇ ರೀತಿ ಇರುವುದಿಲ್ಲ ಬದಲಾಗುತ್ತಲೇ ಇರುತ್ತದೆ. ಬದಲಾವಣೆಯ ಆರಂಭದ ಮುನ್ಸೂಚನೆಯೆಂಬಂತೆ ಎಪ್ರಿಲ್ ೧೬,೨೦೦೪ ಮಧ್ಯಾಹ್ನ ೧೨.೩೫ ನಿಮಿಷ ಸಮಯದಲ್ಲಿ ನಡೆದ ಘಟನೆ ಜೀವನದಲ್ಲಿ ಮೊದಲಬಾರಿಗೆ ನನ್ನ ಬಗ್ಗೆ ನಾನೇ ಆಲೋಚಿಸುವ ರೀತಿ ಮಾಡಿತು.ಆಗಲೇ ನಾನು ನನ್ನವರು ಅಂದುಕೊಂಡವರ ದೃಷ್ಟಿಯಲ್ಲಿ ದಡ್ಡನಾಗಿದ್ದ ಸಂಧರ್ಭದಲ್ಲಿ ಮಾತನಾಡುತ್ತಿದ್ದಾಗ ನನ್ನ ಪರಿಸ್ಥಿತಿಯನ್ನು ನೋಡಿ ನೀನು ಬದುಕುವುದೇ ಕಷ್ಟ ಹೇಗೆ ಬದುಕುತ್ತಾನೆ ಸಾಧ್ಯವಿಲ್ಲ. ಈ ಮಾತನ್ನು ಕೇಳಿದಾಗ ಉತ್ತರಿಸಲಾಗದೆ ಮೌನವಾಗಿದ್ದೆ. ಕಾರಣ ನಾನು ಯಾರಿಗೂ ಉತ್ತರಿಸುವ ಪರಿಸ್ಥಿತಿಯಲ್ಲಿರಲಿಲ್ಲ. ಆದರೆ ನಾನು ಮೌನವಾಗಿದ್ದರೂ ನನ್ನ ಮನಸ್ಸು ಮೌನವಾಗಿರಲಿಲ್ಲ. ಕೇಳಿದ ಆ ಒಂದು ಮಾತು ಆಲೋಚಿಸಲು ಪ್ರೇರೇಪಿಸಿತು. ಪರಿಣಾಮ ನನ್ನ ಬಗ್ಗೆ ಇರುವ ಅಲಕ್ಷತೆ, ಟೀಕೆಗೆ ಕಾರಣ ತಿಳಿಯಲು ವರ್ಷಗಳೇ ಹಿಡಿದಲ್ಲದೆ ನನ್ನ ಬದುಕಿಗೆ ಅರ್ಥವಿಲ್ಲ ಎನ್ನುವ ಸತ್ಯ ತಿಳಿಯಿತು. ಅಂದೇ ನಿರ್ಧರಿಸಿದ ನಾನು ಇದುವರೆಗೂ ನಮ್ಮ ಸಂಬಂಧಿಕರ, ಸ್ನೇಹಿತರ ಯಾವುದೇ ಶುಭ ಕಾರ್ಯಗಳಲ್ಲಿ ಭಾಗಿಯಾಗಿಲ್ಲ. ಇದೇ ರೀತಿ ಅಗಸ್ಟ್ ೨೬,೨೦೧೩ ರಾತ್ರಿ ೧೦.೫೦ ನಿಮಿಷಕ್ಕೆ ನನ್ನ ಬಗ್ಗೆ ಬಂದ ಪ್ರತಿಕ್ರಿಯೆ ಮಾತನಾಡಲು ಬರುವುದಿಲ್ಲ, ಇರಲು ಬರುವುದಿಲ್ಲ. ಹೀಗೆ ಕೇಳಿದ ಟೀಕೆಗಳಿಗೆ ಉತ್ತರಿಸಲು ನಿರ್ಧರಿಸಿದ ನಾನು ಸಮಯದ ನಿರೀಕ್ಷೆಯಲ್ಲಿದ್ದೆ. ಮೊದಲಿನಿಂದಲೂ ಬರೆಯುವ ಹವ್ಯಾಸ ಹೊಂದಿದ್ದ ನಾನು ಬರೆದ ಮೊದಲ ಲೇಖನ ೨೦೧೬ ನೇ ಇಸ್ವಿಯ ಕನಸಿನ ಭಾರತ ಪತ್ರಿಕೆಯಲ್ಲಿ ಪ್ರಕಟವಾಗುವುದರ ಮೂಲಕ ನಾನು ನಿರೀಕ್ಷಿಸಿದ ಸಮಯ ಬಂದಿತು. ಅಲ್ಲಿಂದ ಆರಂಭವಾದ ಪ್ರಯಾಣದಲ್ಲಿ ನನ್ನನ್ನು ಟೀಕಿಸಿದವರಿಗೆ ನನ್ನ ಕೆಲಸದ ಮೂಲಕ ಸರಿಯಾದ ಸಮಯದಲ್ಲಿ ಉತ್ತರಿಸುತ್ತ ಚಿತ್ರರಂಗಕ್ಕೆ ಪ್ರವೇಶಿಸಿದೆ. ಇನ್ನೂ ಕೆಲವು ವ್ಯಕ್ತಿಗಳಿಗೆ ಉತ್ತರಿಸುವುದು ಬಾಕಿ ಉಳಿದಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ೧೬ ವರ್ಷಗಳ ಹಿಂದಿನ ಒಂದು ನೆನಪು ನನ್ನನ್ನು ಇಂದು ಚಿತ್ರರಂಗದವರೆಗೂ ಕರೆದುಕೊಂಡು ಬಂದಿದೆ. ಆದರೂ ಈ ನನ್ನ ಕಷ್ಟದ ಜೀವನವನ್ನು ಇಂದಿಗೂ ಪ್ರೀತಿಸುತ್ತಿದ್ದೇನೆ.

ಈ ವಾಕ್ಯವನ್ನು ಹನಿಗವನ ರೂಪದಲ್ಲಿ ರಚಿಸಿದಾಗ ಪ್ರಸ್ತುತ ನನ್ನ ಬದುಕು ತುಂಬ ಕಷ್ಟ,

ಆದರೆ ನನಗೆ ಜೀವನದಲ್ಲಿ ಹಲವು

ಪಾಠಗಳನ್ನು ಹೇಳಿಕೊಟ್ಟ ಈ ಬದುಕು ಇನ್ನು ಇಷ್ಟ ಎಂದು ಹೇಳುತ್ತ ನನ್ನ ಈ ಲೇಖನವನ್ನು ಮುಗಿಸುತ್ತೇನೆ.


Rate this content
Log in

Similar kannada story from Drama