STORYMIRROR

kaveri p u

Drama Inspirational Others

4  

kaveri p u

Drama Inspirational Others

ರಾಬರ್ಟ್

ರಾಬರ್ಟ್

1 min
447

ನಾನ್ ಸ್ಟಾಪ್ ನವೆಂಬರ್ ಎಡಿಷನ್ - ಮಧ್ಯಂತರ ಹಂತ

ರಾಬರ್ಟ್ ಚಿತ್ರದ ದೃಶ್ಯ ಬದಲಾವಣೆ


ಈ ಸಿನಿಮಾದಲ್ಲಿ ನಟನ ಆಪ್ತ ಗೆಳೆಯ ಮತ್ತು ಆತನ ಹೆಂಡತಿ ಸಾಯುತ್ತಾರೆ. ಅವರಿಗೆ ಒಬ್ಬ ಮುದ್ದಾದ, ಒಂದು ವರ್ಷದ ಗಂಡು ಮಗನಿದ್ದನು. ಅವರಿಬ್ಬರು ಸತ್ತ ಮೇಲೆ ಆ ಮಗುವನ್ನು ನಾಯಕ ನೋಡಿಕೊಂಡನು.  ಆ ಸಿನಿಮಾದಲ್ಲಿ ನಾಯಕ ನಟ ಹಾಗೂ ಅವನ ಸ್ನೇಹಿತ ಇಬ್ಬರೂ ದೊಡ್ಡ ರೌಡಿಗಳು ಆ ಮಗುವಿನ ಭವಿಷ್ಯದ ಸಲುವಾಗಿ, ಗೆಳೆಯನ ಮರಣದ ತರುವಾಯ ನಾಯಕ ನಟ ಆ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ತಲೆ ಮರೆಸಿಕೊಂಡು ಬಂದಿರುತ್ತಾನೆ.


ಈ ದೃಶವನ್ನು ನನ್ನ ದೃಷ್ಟಿಕೋನದಂತೆ ಬದಲಿಸುವುದಾದರೆ

ನಾಯಕನ ಗೆಳೆಯ ಒಂದು ಹುಡುಗಿಯನ್ನು ಪ್ರೀತಿಸದಂತೆ ಕಥೆ ಮಾಡುತ್ತಿದ್ದೆ. ರೌಡಿಗಳಾದ ಮೇಲೆ ಸಾಮಾನ್ಯವಾಗಿ ಅವರ ಜೀವನ ನಮ್ಮಷ್ಟು ಸರಳ, ಸುಂದರವಾಗಿ ಇರುವುದಿಲ್ಲ. ಒಬ್ಬಳನ್ನು ಪ್ರೀತಿಸಿ, ಮದುವೆಯಾಗಿ ಮಗು ಮಾಡಿಕೊಂಡ ನಂತರ ಮತ್ತದೇ ಭೂಗತ ಲೋಕದಿಂದ ತನ್ನದೇ ಕೊಲೆಯಾಗಿ ಹೋದರೆ ತನ್ನನ್ನೇ ನಂಬಿ ಬಂದ ಹೆಂಡತಿ ಮಗುವಿನ ಗತಿಯೇನು ಅಲ್ಲವೇ?


ಇವರು ಮೊದಲೇ ರೌಡಿಗಳು. ಹಾಗಾಗಿ ತನ್ನ ಗೆಳೆಯ ರಾಬರ್ಟನಂತೆ ರಾಘವ ಕೂಡ ಪಕ್ಕಾ ರೌಡಿಗಳೇ. ಕ್ರೈಮ್ ಮಾಡುತ್ತಿದ್ದರೂ ಅದರಿಂದ ಇನ್ನೊಬ್ಬರಿಗೆ, ಅಮಾಯಕರಿಗೆ ನೋವಾಗದಂತೆ ಸತ್ಯದ ಪರವಾಗಿಯೂ ನಿಲ್ಲುತ್ತಾರೆ. ನಾಯಕ ಹೊರ ರಾಜ್ಯದಲ್ಲಿ ಒಂದು ಹುಡುಗಿಯನ್ನು ಇಷ್ಟ ಪಟ್ಟರೆ, ರಾಘವ ಮಾತ್ರ ಒಂಟಿಯಾಗಿಯೇ ಕಳೆಯುತ್ತಾನೆ.


Rate this content
Log in

Similar kannada story from Drama