ನನ್ನವಳೇ ಇವಳು...
ನನ್ನವಳೇ ಇವಳು...


ಅವತ್ ಫುಲ್ ಮಳೆ ......ದಿನಾ, ಕಾರ್ ಅಲ್ಲೇ ಆಫೀಸ್ಗೇ ಹೋಗೋ ನಾನು ....ಅವತ್ ಬಸ್ಅಲ್ಲಿ ಹೋಗ್ತಿದ್ದೆ ...ರೀಸನ್ ಅಪ್ಪ ಕಾರ್ ತಗೊಂಡ್ ಹೋಗಿದ್ರು ..ಬೈಕ್ ಹಾಳಾಗಿ ಕೈ ಕೊಡ್ತು ....
ಒಳ್ಳೇದೇ ಆಯಿತು ಅನ್ಸುತ್ತೆ ...ಅವತ್ ಹಾಗ್ ಆಗಿದುಕ್ಕೆ ಅಲ್ವಾ ನಾನ್ ಬಸ್ ಹತ್ತಿದ್ದು ಆ ಬ್ಯೂಟಿಫುಲ್ ಹುಡುಗಿ ನೋಡಿದ್ದು ....
ಅವತ್ತೇ ಅನ್ನಿಸ್ಬಿಡ್ತು ನನ್ನವಳೇ ಇವಳು ಅಂತ
ಅಯ್ಯೋ ನನ್ ನೋಡಿ ಸುಮ್ನೆ ಮಾತಾಡ್ಕೊಂಡ್ ಹೋಗ್ತಿದೀನಿ ...ಅಂದ್ಹಾಗೇ ನನ್ ಹೆಸರು ಭುವನ್ ...
ಅಮ್ಮ ಬೆಳಿಗ್ಗೆ ಇಂದ ಮನೆ ಕ್ಲೀನಿಂಗ್ ಆಗ ನನ್ ಡೈರಿ ಸಿಕ್ತು ಸೋ ನಿಮಿಗ್ ಕಥೆ ಹೇಳಕ್ ಸ್ಟಾರ್ಟ್ ಮಾಡ್ಬಿಟ್ಟೆ ...
ಕಥೆ ಕಂಟಿನ್ಯೂ ಮಾಡೋಣ ...
ಒಂದ್ ಸ್ಟಾಪ್ ಬಂತು ಸಾಮಾನ್ಯವಾಗಿ ಅಲ್ಲಿ ಬಸ್ 5ನಿಮಿಷ ಸ್ಟಾಪ್ ಮಾಡತಾರೆ ....
ನಾನ್ ಫೋನ್ಹಿಡ್ಕೊಂಡ್ ಹೆಡ್ ಸೆಟ್ ಹಾಕೊಂಡ್ ಕಿಟಕಿ ಕಡೆ ನೋಡ್ತಾ ಇದ್ದೇ ...
ಇನ್ನೇನ್ ಬಸ್ ಸ್ಟಾರ್ಟ್ ಆಗ್ಬೇಕು ....ಒಂದ್ ಹುಡ್ಗಿ ಬಂದ್ಲು ....
ಪಿಂಕ್ ಕಲರ್ ಸೀರೆ ...ಕಿವಿಗೆ ಒಂದು ಪುಟ್ಟ್ ಜುಮ್ಕಿ ...ಲೈಟ್ ಆಗಿರೋ ಲಿಪ್ಸ್ಟಿಕ್ ...ಒಂದ್ ಪುಟ್ಟ್ ಬೊಟ್ಟು ಹಣೆಗೆ ...ಫ್ರೀ ಹೇರ್ಸ್ ....ರೈಟ್ ಹ್ಯಾಂಡ್ಗೇ ವಾಚ್ ... ಕೈಯಲ್ಲಿ ಎರಡ್ ಬುಕ್ಸ್ ...ಉಫ್ ನನ್ ಕೇಳ್ತಾ ಇದ್ದ ಸಾಂಗಿಗೂ ಅವ್ಳ್ ಎಂಟ್ರಿಗೂ ಒಳ್ಳೆ ಕಾಂಬಿನೇಶನ್ ....
hoo ಯಾವ್ದು ಅಂತಾನ...ಅದೇ ...
ಪಾದ ಸೋಕಿ ಪಾಪ ಹೋಯಿತು ಧರಣಿಗೇ ....
ಆ ನೋಟ ತಾಕಿ ಜೀವ ಬಂತು ಧಮನಿಗೆ ...
ಕುಚೇಲ ಈ ಹೈದ ...ಕುಬೇರ ಆಗೋದ ...
ಕಣ್ಣಿಂದ ಇವಳ ಅಂದ ಚಂದ ಕಂಡಾಗ ...ಏನು ಹೇಳ್ಲಿ ಅಂದನಾ ಸಾಲುತ್ತಿಲ್ಲವೇ ವ್ಯಾಕರಣ ...ಜೀವಮಾನ ಸಾಲಗಾರರು ಅಂದ ಹೋಗೊಳೋಕೆ ....
ಒಳ್ಳೆ ಕಾಂಬಿನೇಶನ್ ಅಲ್ವಾ ?
ಮುಂದೆ ....
ಅವ್ಳ್ನ ನೋಡುದ್ರೆ ಯಾವ್ದೋ ಕಾಲೇಜ್ ಲೆಕ್ಚರರ್ ತರ ಇದ್ಲು ....ಬಂದ್ಲು ಬಸ್ ಹತ್ತಿದ್ಲು ....ನನ್ ಎದ್ರುಗಡೆ ಇರೋ ಸೀಟ್ ಅಲ್ಲಿ ಕುತ್ಕೊಂಡ್ಲು ....ಅವಳು ನನ್ ತರಾನೇ ಫೋನ್ ಹಿಡ್ಕೊಂಡ್ ಹಾಡ್ ಕೇಳ್ತಾ ಕಿಟಕಿ ಕಡೆ ನೋಡ್ಕೊಂಡ್ ಕೂತ್ಳು ...
ಅವ್ಳ್ ಬಸ್ ಇಳಿಯೋವರ್ಗು ಅವ್ಳನೇ ನೋಡಿದೀನಿ ....ಒಂದ್ ಸಲಾನು ಅವ್ಳ್ ನನ್ ಕಡೆ ತಿರುಗಲಿಲ್ಲ ....
ಹೀಗೇ ದಿನ ಕಳಿತಇತ್ತು ಅವಳಿಗೋಸ್ಕರ ಕಾರ್ ಬಿಟ್ಟು ಡೈಲಿ ಬಸ್ ಹತ್ತಿದೆ ....ಯಾವಾಗ್ಲೋ ಒಂದ್ ಒಂದ್ ಸಲ ನೋಡೋಳು ನನ್ನ ಅಷ್ಟೇ ...ಅದ್ ಬಿಟ್ರೆ ಏನು ಇಂಪ್ರೂವ್ಮೆಂಟ್ ಇಲ್ಲ ....ಕಂಡಕ್ಟರ್ ಹತ್ರ ಟಿಕೆಟ್ ತಗೋಬೇಕಾದ್ರೆ ಮಾತ್ ಬಿಟ್ರೆ ಬೇರೇ ಯಾವ್ ಮಾತು ನನ್ ಅವ್ಳ್ ಬಾಯಿಂದ ಕೇಳೇ ಇಲ್ಲ ...
ಅವ್ಳ್ ಯಾರು ಅಂತ ಗೊತಿಲ್ಲಾ ....ಅವ್ಳ್ ಹೆಸರೇನು ಅಂತ ಗೊತಿಲ್ಲಾ ...ಬಟ್ ಅವ್ಳ್ ನಂಗ್ ತುಂಬಾ ಇಷ್ಟ ಆಗ್ತಿದ್ಲು .
ಅವ್ಳ್ ನಗು ...ಅವ್ಳ್ ಅವಾಗ್ ಅವಾಗ ಆ ಕೂದ್ಲು ಸರಿ ಮಾಡ್ಕೊಳೋದು ಒಂತರ ಚನಗಿದಾಳೆ ಅನ್ಸೋದು ಆದ್ರೆ ಅವ್ಳ್ನ ಮಾತಾಡ್ಸಕ್ ಮಾತ್ರ ದೈರ್ಯ ಸಾಲ್ತಇರ್ಲಿಲ್ಲ ...
ಅವ್ಳ್ ನೆನಪಲ್ಲೇ ಒಂದ್ ವೀಕ್ ರಜಾ ಹಾಕಿ ನನ್ ಫ್ರೆಂಡ್ ಮದ್ವೆಗೆ ಹೋಗೋ ತಯಾರಿ ಮಾಡ್ದೆ ...
ಮಂಗಳೂರ ಮದ್ವೆ ....ಸೂಪರ್ ಕಣ್ರೀ ... ಬೆಸ್ಟ್ ಫ್ರೆಂಡ್ ಅಲ್ವಾ ಸೋ ಮದುವೆಗೆ 2ದಿನಾ ಮುಂಚೆನೇ ಹೋಗಿದ್ದೆ ....
ಎಷ್ಟು ಚಂದ ಅಂತೀರಾ ....ನಮ್ಮ ಮಂಗಳೂರು ....
ಅಂತು ಇಂತೂ ಮದ್ವೆ ದಿನಾ ಬಂತು ....
ನಮ್ ಹುಡ್ಗ ಚಂದ ರೆಡಿಆಗಿ ತಾಳಿ ಕಟ್ಟೋಕ್ಕೆ ರೆಡಿ ಆಗ್ತಿದ್ದ ...ನಾನ್ ಕೂಡ ಮಿಂಚ್ಬೇಕಲ್ವಾ ಗೆಳೆಯನ ಮದ್ವೆ ಅಂದ್ರೇ ....ಸೋ ಸ್ವಲ್ಪ ಟ್ರಡಿಷನಲ್ಆಗಿ ರೆಡಿ ಆಗಿದ್ದೆ ....
ವೈಟ್ ಶರ್ಟ್ ....ವೈಟ್ ಪಂಚೆ ಗೋಲ್ಡನ್ ಜರಿ ಬಾರ್ಡರ್ ಇರೋದು ...ಒಂದ್ raybon ಕೂಲಿಂಗ್ ಗ್ಲಾಸ್ ಹಾಕೊಂಡ್ ಮದ್ವೆ ಮನೆ ಫುಲ್ ಓಡಾಡ್ತಿದ್ದೆ ....ಸ್ವಲ್ಪ ನೋಡಕ್ ಹ್ಯಾಂಡ್ಸಂ ಇದೀನಿ ..(ಅಯ್ಯೋ ಹೊಗಳಿಕೋತಿಲ್ಲ ನನ್ನ ನಾನೇ ಹಾಗೇ ಹೇಳ್ದೆ ಅಷ್ಟೇ )ಎಷ್ಟೋ ಹುಡ್ಗಿರೂ ನನ್ ನೋಡ್ತಿದ್ರು ನಾನ್ ಮಾತ್ರ ಯಾರನ್ನು ತಿರುಗಿನೋಡ್ಲಿಲ್ಲ ....ನನ್ ಮನಸಲ್ಲಿ ಆಗ್ಲೇ ನಮ್ ಬಸ್ ಹುಡ್ಗಿನೇ ನಮ್ಗೆಲ್ಲಾ ಅಂತಾ ಫಿಕ್ಸ್ ಆಗ್ಬಿಟ್ಟಿದ್ದೆ ಸೋ ಯಾರನ್ನು ನೋಡ್ಬೇಕ್ ಅನ್ನಿಸ್ಲಿಲ್ಲ ....
ಛತ್ರ ಫುಲ್ ಫಿಲ್ ಆಯಿತು ....ನಾನು ಮೊಬೈಲ್ ಹಿಡ್ಕೊಂಡ್ ನನ್ ಗೆಳೆಯ ತಾಳಿ ಕಟ್ಟಿ ಹಳ್ಳಕ್ಕೆ ಬಿಳೋದ್ ನೋಡತಾ ನನ್ ಮಿಕ್ಕಿದ್ ಫ್ರೆಂಡ್ಸ್ ಜೊತೆಗೆ ಹರಟೆ ಹೊಡಿತಿದ್ದೆ .....ಅಷ್ಟು ಕ್ರೌಡ್ ಅಲ್ಲೂ ನನ್ನ ಡಿಸ್ಟರ್ಬ್ ಮಾಡಿದ್ದು ನನ್ ಮುಂದೆ ಕೂತಿದ್ದ ಹುಡ್ಗಿರ್ ಗುಂಪಿನ ನಗು ....
>ನನ್ ಎದ್ರುಗಡೆ ಒಂದ್ ಹುಡ್ಗಿ ಕೂತಿದ್ಲು ಆ ಕಡೆ ತಿರ್ಕೊಂಡು ....
ಕೆಂಪು ಕಲರ್ ರೇಷ್ಮೆ ಸೀರೆ ... ...ಈಗಿನ ಜನರೇಶನ್ ಹಾಕ್ತಿರಲ್ಲ ದೊಡ್ಡ್ ದೊಡ್ಡ್ ಜುಮ್ಕಿ ...
ಫ್ರೀ ಹೇರ್ಸ್ ಪದೇ ಪದೇ ಆ ಮುಂಗುರುಳನ್ನ ಹಿಂದೆ ಕಿವಿಗ್ ಸಿಗುಸ್ತಿದ್ಲು ....ಎಂಥವರಿಗಾದ್ರು ಅವ್ಳ್ ಫೇಸ್ ಒಂದ್ಸಲ ನೋಡ್ಬೇಕ್ ಅನ್ನಿಸದೆ ಇರ್ತ ಇರ್ಲಿಲ್ಲ ...
ಅವ್ಳ್ ನಂಗೆ ನನ್ ಬಸ್ ಹುಡ್ಗಿನೇ ನೆನಪಿಸುತ್ತಿದ್ಲು ...
ಒಂದ್ಸಲ ದೈರ್ಯ ಮಾಡಿ ಅವ್ಳ್ ಮುಖ ನೋಡೋಣ ಅಂತ ಎದ್ದ್ಹೋದೆ .....
ನನ್ ಹಾರ್ಟ್ಬೀಟ್ ಜಾಸ್ತಿ ಆಯಿತು ...ಅವ್ಳ್ ಮುಖ ನಂಗ್ ಇಡೀ ಪ್ರಪಂಚಾನೇ ಮರೆಸಿಬಿಡ್ತು .....
ಅರೆ ಅದೇ ಹುಡ್ಗಿ ....ನನ್ ಬಸ್ ಹುಡ್ಗಿ ....ಅವಳೇ ನನ್ ಮುಂದೆ ಕೂತಿದ್ ಹುಡ್ಗಿ ಅವಳೇ ....ಉಫ್ಫ್ಫ್ ...ಹೇಗ್ರಿ ತಡ್ಕೋಳುತ್ತೆ ಜೀವ ಅದು ಅವ್ಳ್ ಹಾಗೇ ರೆಡಿಆಗಿ ದೇವತೆ ತರ ಕಾಣ್ತಿದ್ರೆ ....

ಎನ್ನ ಸೋನಾ ಕ್ಯೂ ರಬ್ಬನೇ ಬನಾಯ ....
ಎನ್ನ ಸೋನಾ ಕ್ಯೂ ರಬ್ಬನೇ ಬನಾಯ ...
ಧೈರ್ಯಮಾಡಿ ಅವ್ಳ್ ಹತ್ರ ಹೋದೆ ..ಮಾತ್ ನೀಳ್ಸ್ಬಿಟ್ಲು ನನ್ನೇ ನೋಡ್ತಿದ್ಳು ....
ಹಾಯ್ ಅಂದೇ ..ಅವ್ಳ್ ಒಂದ್ ಸ್ಟೈಲ್ ಕೊಟ್ಲು ಅಷ್ಟೇ ...
ಉಫ್ಫ್ಫ್ ....ಆಗಲ್ಲಾ ಕಣ್ರೀಇನ್ನು ನನ್ ಕೈಲಿ ನನ್ ಪ್ರೀತಿ ಬಚ್ಚಿಡಕ್ ಆಗಲ್ಲಾ ...
ನಿಮ್ನ ಒಂದ್ ಮಂತ್ ಇಂದ ಫಾಲೋ ಮಾಡ್ತಿದೀನಿ ....ಆ ನಗು ...ಆ ಮುಂಗುರುಳಿಗೆ ಬಿದ್ದೋಗಿದೀನಿ ಕಣ್ರೀ ...
ಇಷ್ಟು ದಿನಾ ಆದ್ರು ನಿಮ್ನ ಮಾತಾಡ್ಸೋ ದೈರ್ಯ ಬರ್ಲಿಲ್ಲ ಅಷ್ಟೇ ...ಇವತ್ ನೀವ್ ಇಷ್ಟು ಮುದ್ದಾಗಿ ಕಾಣ್ತಿದ್ರೆ ...ನನ್ ಬಿಟ್ಟು ಬೇರೇ ಯಾರಾದ್ರೂ ನಿಮ್ನ ಪಟಾಯಿಸ್ಕೊಬಿಡ್ತನೇನೋ ಅಂತ ಭಯ ಆಗ್ತಿದೆ ....
ಸೋ ....I love you ಕಣ್ರೀ ....ನಿಮ್ ಹೆಸರು ಗೊತಿಲ್ಲಾ ನೀವ್ ಯಾರು ಅಂತಾನೂ ಗೊತಿಲ್ಲಾ ...ಆದ್ರು ಈ ಪೆದ್ದು ಹೃದಯಕ್ಕೆ ನೀವೇ ಬೇಕಂತೆ ...
ದೈವಿಟ್ಟು ದೊಡ್ಡ್ ಮನಸ್ ನೋಡಿ ನನ್ ಪ್ರೀತಿನ ಒಪ್ಕೋಳ್ರಿ ....
ಸ್ಟಿಲ್ ಆ ಹುಡ್ಗಿದು ಸೇಮ್ ರಿಯಾಕ್ಷನ್ ಸ್ಮೈಲ್ ಅಷ್ಟೇ ...
ಅಂದ್ ಹಾಗೇ ನನ್ ಹೆಸರು ಭುವನ್ ಸಾಫ್ಟ್ವೆರ್ ಇಂಜಿನಿಯರ್ ....ನಿಮ್ನ ಕಣ್ಣಲ್ಲಿ ಕಣ್ಣ್ ಇಟ್ಟು ನೋಡ್ಕೋತೀನಿ ರೀ ....
will you marry me .....
ಫ್ರೆಂಡ್ಸ್ ಎಲ್ಲ hooo ಅಂತಿದ್ರೆ ...
ಅವ್ಳ್ ಅವನ್ನ ತಬ್ಬಿ ಅವ್ನ್ ಪ್ರೀತಿ ಒಪಿಕೊಂಡ್ಬಿಟ್ಟಿದ್ಲು ....
I Love You too ಭುವನ್ ....
ರಿಯಲಿ ನಿಜ ಹೇಳ್ತಿದೀರಾ ಮತ್ತೇ ಹೇಳಿ ...ಪ್ಲೀಸ್ ...
ಎಸ್ ಭುವನ್ i love you ...
ನೀವ್ ನನ್ನ ಫಾಲೋ ಮಾಡ್ತಿದ್ರಿ ಅಂತ ನನಿಗ್ ಗೊತ್ತು ...
ಆದ್ರೆ ಅದು ಪ್ರೀತಿ ಅಂತ ಗೊತ್ತಾಗಿದ್ದು ನೀವ್ ಬರ್ದೆ ಇರೋ 3 ದಿನಗಳಲ್ಲಿ .....
ನೀವ್ ನನ್ನ ಡೈಲಿ ನೋಡ್ತಿದ್ರಿ ಅಂತ ನನಿಗೆ ಗೊತ್ತಿತ್ತು ಆದ್ರೆ ನೀವೇ ಮಾತಾಡ್ಸಲಿ ಅಂತ ವೇಟ್ ಮಾಡ್ತಿದ್ದೆ ...ಕೊನೆಗೂ ನಿಮ್ ಮನಸಲ್ಲಿ ಇರೋ ಪ್ರೀತಿ ಹೇಳುದ್ರಲ್ಲ ....
ನೀವ್ ನೆನ್ನೆ ,ಮೊನ್ನೆ , ಬಸ್ಗೇ ಬರ್ದೆ ಇದ್ದಾಗ ಭಯ ಆಗಿತ್ತು ನನ್ ಹೃದಯ ನಿಮ್ನ ತುಂಬಾ ಮಿಸ್ಸ್ ಮಾಡ್ಕೋತಇತ್ತು
ನೀವ್ ಸಿಕ್ಕಿದ್ ತಕ್ಷಣ ನಾನೇ ಮಾತಾಡ್ಸಬೇಕು ಅನ್ಸ್ತಿತ್ತು ....
love you too ....
ಖುಷಿ ತಡ್ಕೊಳೋಕ್ಕೆ ಆಗ್ಲಿಲ್ಲ ....ಅವ್ಳ್ ಕಿವೀಲಿ 1st ಪಿಸುಗುಟ್ಟಿದ್ದ ಮಾತು ನಿನ್ ಹೆಸರೇನು ಹುಡ್ಗಿ ಅಂತ ....
ಅವ್ಳ್ ಉತ್ತರ ...
ಸ್ವಪ್ನ ...
ಅವತ್ತೇ ಡಿಸೈಡ್ ಮಾಡ್ದೆ ಅವ್ಳಿಗೂ ಹೇಳ್ದೆ ...ಇನ್ನು ಈ ಕನಸು ನಂದು ಅಂತ

ಉಫ್ಫ್ಫ್ ...ಇದು ನನ್ ಲವ್ ಸ್ಟೋರಿ ....ಮುಂದೆ ಏನಾಯಿತು ಅಂತ ಕೇಳ್ತಿದೀರಾ ....
ಇನ್ನೇನು ...
ಹೃದಯ ದೀಪ ನಿನದೇ ....
ಬೆಳಗೋ ಪ್ರೀತಿಯು ನಿನದೇ ...
ನೆಪ ನಾನು ....ಸ್ಫೂರ್ತಿ ನೀನು ....
ಸವಿಬಾವ ಪೂರ್ತಿ ನೀನು ....ಎದೆಗಿಳಿವ ಶ್ವಾಸವೇ ...
ಬೆರಳ ಹಿಡಿದು ನಡೆವೇ ...ಜೊತೆಯಲಿ ....ಜೊತೆ ಜೊತೆಯಲಿ .....
ಅಂತ ಹೇಳ್ತ ನನ್ ಜೀವನಕ್ಕೆ ಬಂದ್ಬಿಟ್ಟಳು .....
ಪ್ರೀತ್ಸಿದ್ ಹುಡ್ಗಿನ ಮದ್ವೆ ಆಗೋ ಖುಷಿನೇ ಬೇರೇ ....
ಅಲ್ವಾ ?