Rk Blmn

Drama Romance Thriller

4  

Rk Blmn

Drama Romance Thriller

ನನ್ನ ಪ್ರೀತಿ

ನನ್ನ ಪ್ರೀತಿ

4 mins
317


ಮಂಗಳೂರಿನ "ರುಚಿ ಫುಡ್ ಪ್ರೈವೆಟ್ ಲಿಮಿಟೆಡ್ " ಕಂಪನಿಯು ಉಡುಪಿ ಮತ್ತು ಮಂಗಳೂರ್ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದ ಕಂಪನಿಗಳಲ್ಲಿ ಒಂದಾಗಿತ್ತು.


ರುಚಿ ಮತ್ತು ಗುಣಮಟ್ಟಕ್ಕೆ " ರುಚಿ" ಜನಪ್ರಿಯ.


1963ರಲ್ಲಿ ಮಂಗಳೂರಿನ ತೋಡಾರು ಎಂಬ ಗ್ರಾಮದಲ್ಲಿನ ಗುತ್ತುದ ಮನೆಯ ಯಜಮಾನನಾಗಿದ್ದ ಕೃಷ್ಣ ಶೆಟ್ಟಿಯವರು ಸಣ್ಣ ಫುಡ್ ಅಂಗಡಿಯನ್ನು ನಿರ್ಮಿಸಿ ನಂತರ ಅದನ್ನ ತನ್ನ ಊರಿಗೆ ಪರಿಚಯಿಸಿದರು. ಕಾಲಕಳೆದಂತೆ ಅವರಿಗೆ ವಯಸ್ಸಾಗ ತೊಡಗಿತ್ತು.ನಂತರ ಆ ವ್ಯಾಪಾರದ ಜವಾಬ್ದಾರಿಯನ್ನು ತನ್ನ ಮಗ ರಮೇಶ್ ಶೆಟ್ಟಿಗೆ ಕೊಟ್ಟರು. ರಮೇಶ್ ಶೆಟ್ಟಿ ಅಂಗಡಿಯನ್ನುಅಲ್ಲಿಂದ ತೆಗೆದು ಮಂಗಳೂರಿನ ಸಿಟಿಯಲ್ಲಿ ಒಂದು ದೊಡ್ಡ ಸ್ಟಾಲ್ ಮಾಡಿದರು. ಸ್ವಲ್ಪ ವರ್ಷಗಳ ನಂತರ ಸ್ಟಾಲ್ ನಿಂದ ಅದು ಒಂದು ಫುಡ್ ಕಂಪನಿಯಾಗಿ ಬೆಳೆಯಿತು. ರಮೇಶ್ ಶೆಟ್ಟಿ ಯವರಿಗೆ ದೇಹದಲ್ಲಿ ತುಂಬಾ ಅನಾರೋಗ್ಯದಿಂದಾಗಿ ಅವರಿಗೆ ಆ ಕಂಪನಿಯ ಜವಾಬ್ದಾರಿಯನ್ನು ಹೊತ್ತುಕೊಳ್ಳಲಾಗದೆ ತನ್ನ ಮಗನಿಗೆ ಆ ಜವಾಬ್ದಾರಿಯನ್ನು ಬಿಟ್ಟುಕೊಟ್ಟರು. ಈಗ "ರುಚಿ" ಕಂಪನಿಯನ್ನು ನೋಡಿಕೊಳ್ಳುತ್ತಿರುವವನು ರಮೇಶ್ ಶೆಟ್ಟಿಯ ಮಗ.


' ರುಚಿ ' ಕಂಪನಿಯನ್ನು  ಕರ್ನಾಟಕಕ್ಕೆ ಮಾತ್ರಲ್ಲದೆ ಇಡೀ ದೇಶಕ್ಕೆ ಪರಿಚಯಿಸಲು ರಾತ್ರಿ-ಹಗಲು ಕಷ್ಟ ಪಡುತ್ತಿದ್ದಾನೆ. ದೇಶಕ್ಕೆ ಪರಿಚಯಿಸಲು ಆಗುತ್ತಾ ಇಲ್ವಾ ಗೊತ್ತಿಲ್ಲ ಆದರೆ ಕರ್ನಾಟಕಕ್ಕೆ ಪರಿಚಯಿಸಿದ.


ಕರ್ನಾಟಕ ಫುಡ್ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿವರ್ಷವೂ " ದಿ ಬೆಸ್ಟ್ ಫುಡ್ ಕಂಪನಿ ಓಫ್ ದಿ ಕರ್ನಾಟಕ " ಅನ್ನೋ ಅವಾರ್ಡ್ ಕಾರ್ಯಕ್ರಮ ಆಯೋಜನೆ ಮಾಡಲಾಗುತಿತ್ತು.


ಪ್ರತಿವರ್ಷದಂತೆ ಈ ವರ್ಷ ಕೂಡ ಆ ಅವಾರ್ಡ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆ ಅವಾರ್ಡ್ ವಿಂನ್ನಿಂಗ್ ನಾಮಿನೇಷನ್ ಲಿಸ್ಟ್ ನಲ್ಲಿ "ರುಚಿ" ಕಂಪನಿ ಕೂಡ ಒಂದಾಗಿತ್ತು.


ಕಾರ್ಯಕ್ರಮದ ಹಿಂದಿನ ದಿನ 'ರುಚಿ' ಕಂಪನಿಯಲ್ಲಿ,


' ರುಚಿ ' ಕಂಪನಿಯ ಮ್ಯಾನೇಜರ್ ಆಗಿದ್ದ ರಂಗಪ್ಪನವರು ಕೈಯಲ್ಲಿ ಒಂದು ಫೈಲ್ ಹಿಡಿದುಕೊಂಡು ಎಂ.ಡಿ. ಆಫೀಸ್ ರೂಮ್ಗೆ  ಬಳಿ ಬಂದರು.


ಬಾಗಿಲನತ್ತ ಬಂದು ಮೆಲ್ಲನೆ ಸ್ವಲ್ಪ ಬಾಗಿಲು ತೆರೆದು ಆ ಸಂಧಿಯಿಂದ ಒಳಗೆ ಇಣುಕುತ್ತಾ " ಮೇ ಐ ಕಮ್ ಇನ್ ಸರ್ " ಅಂತಾ ಒಳಗೆ ಪ್ರವೇಶಿಸಲು ರಂಗಪ್ಪನವರು ಎಂ.ಡಿ.ಯ ಬಳಿ ಅನುಮತಿ ಕೇಳಿದರು.


ಲ್ಯಾಪ್ಟಾಪ್ ನ ಎದುರು ಕುಳಿತ್ತಿದ ಎಂ.ಡಿ. ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದ.


ರಂಗಪ್ಪ ನವರ ಮಾತು ಕೇಳಿ "ಎಸ್ , ಪ್ಲೀಸ್ ಕಮ್ ಇನ್ " ಅಂತಾ ಎಂ.ಡಿ. ರಂಗಪ್ಪನವರಿಗೆ ಒಳ ಬರಲು ಅನುಮತಿಸಿದ.


ರಂಗಪ್ಪನವರು ಒಳಗೆ ಬಂದರು.ತನ್ನ ಕೈಯಲ್ಲಿದ್ದ ಆ ಫೈಲ್ ನ್ನು ಎಂ.ಡಿ. ಟೇಬಲ್ ಮೇಲೆ ಇಟ್ಟರು.


ಎಂ.ಡಿ. ತನ್ನ ಕೆಲಸದಲ್ಲಿಯೆ ಬ್ಯುಸಿಯಾಗಿದ್ದ. ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.


ರಂಗಪ್ಪ ನವರು ಅಲ್ಲಿಯೇ ನಿಂತ್ತಿದ್ದರು. 


ಆ ಕಡೆ ಈ ಕಡೆ  ದೃಷ್ಟಿ ಹಾಯಿಸುತ್ತ ಏನು ಹೇಳಬೇಕು ಅಂತಾ ನಿಂತ್ತಿದ್ದ ಅವರನ್ನು  ಎಂ.ಡಿ. ಗಮನಿಸಿದ.


"ಏನಾದ್ರೂ ಹೇಳ್ಬೇಕಿತ್ತಾ ನೀವು " ಅಂತಾ ಎಂ.ಡಿ. ಕೇಳಿದಾಗ ರಂಗಪ್ಪನವರು "ಹಾ ಹೌದು ಸರ್ ಅದು ನಾಳೆಯ ಕಾರ್ಯಕ್ರಮದ ಬಗ್ಗೆ ಸ್ವಲ್ಪ ಮಾತನಾಡಬೇಕಾಗಿತ್ತು . ಅವಾರ್ಡ್ ಕಾರ್ಯಕ್ರಮಕ್ಕೆ ನಮಗೆ ಪ್ರವೇಶ ಪತ್ರ ಹಾಗೂ ಐ.ಡಿ. ಕಾರ್ಡ್ ನ್ನು ಕಳುಹಿಸಿದ್ದಾರಂತೆ ಅದನ್ನು ಈಗಾಗಲೇ ನಾವು ಕಲೆಕ್ಟ್ ಕೂಡ ಮಾಡಿದ್ದೇವೆ.ನಾಳೆ ಸರಿಯಾಗಿ 10 ಗಂಟೆ ನಾವು ಅಲ್ಲಿ ಹಾಜರಿರಬೇಕು . ಅಷ್ಟೆ ಅಲ್ಲದೆ ಅಲ್ಲಿ ಒಂದು ಕಂಪನಿಯಿಂದ ಇಬ್ಬರಿಗೆ ಮಾತ್ರ ಪ್ರವೇಶ ನೀಡಿದ್ದಾರೆ. ಯಾಂಕೆಂದರೆ ಪ್ರಧಾನ ಮಂತ್ರಿಗಳು ಬರಲಿದ್ದಾರೆ. ಹಾಗಾಗಿ ಹೆಚ್ಚು ಮಂದಿ ಹೋಗಲು ಪ್ರವೇಶ ನೀಡಿಲ್ಲ."ಹೀಗೆ ಆ ಕಾರ್ಯಕ್ರಮದ  ಬಗ್ಗೆ ತನಗೆ ಸಿಕ್ಕಿರುವ ಮಾಹಿತಿಯನ್ನು ಎಂ.ಡಿ. ಬಳಿ ವಿವರಿಸಿದರು.  


ಹೀಗೆ ಅವರು ಆ ಕಾರ್ಯಕ್ರಮದ ಬಗ್ಗೆ ಪೂರ್ಣ ಮಾಹಿತಿ ನೀಡಿದರು.


 " ಸರಿ ಈ ಮಾಹಿತಿಗಳನ್ನು ಅವಳಿಗೂ ತಿಳಿಸಿ,ಅವಳು ಎಲ್ಲಾ ನೋಡಿಕೊಳ್ಳುವಳು." ಅಂತಾ ಹೇಳಿದ.


"ರಂಗಪ್ಪನವರೇ ಸ್ವಲ್ಪ ನಿಲ್ಲಿ. ಒಂದು ಮುಖ್ಯವಾದ ವಿಷಯ ತಿಳಿಸಬೇಕಿತ್ತು. ಹಾಗೆ ಆ ವಿಷಯದೊಂದಿಗೆ ಅವಳಿಗೆ ಸಂಜೆ 4 ಗಂಟೆಗೆ ಮೀಟಿಂಗ್ ಅರೇಂಜ್ ಮಾಡ್ಲಿಕೆ ಹೇಳಿ,ಹಾಗೆ ಇಡೀ ರುಚಿ ಕಂಪನಿಯ ಸ್ಟಾಫ್ ಹಾಗೂ ನಮ್ಮ ಎಲ್ಲಾ ಬ್ರಾಂಚ್ ನ ಮ್ಯಾನೇಜರಗಳು ಕಡ್ಡಾಯವಾಗಿ ಇರಬೇಕು ಒಂದು ಮುಖ್ಯವಾದ ವಿಷಯದ ಬಗ್ಗೆ ತಿಳಿಸಬೇಕಿತ್ತು." ಎಂ.ಡಿ. ಹೀಗೆ ಹೇಳಿದ್ದನ್ನ ಕೇಳಿ ರಂಗಪ್ಪನವರಿಗೆ ತುಂಬಾ ಆಶ್ಚರ್ಯವಾಯಿತು.


ಏನಿರಬಹುದು ಅಂತಾ ಮುಖ್ಯವಾದ ವಿಷಯ? ತುಂಬಾ ಆಶ್ಚರ್ಯದೊಂದಿಗೆ ಕುತೂಹಲ ರಂಗಪ್ಪನವರನ್ನು ಕಾಡಿತ್ತು.


ಯಾಕೆ ಇಷ್ಟೊಂದು ಪ್ರಶ್ನೆಗಳು ಅವರಲ್ಲಿಯೇ ಡೈರೆಕ್ಟ್ ಆಗಿ ಕೇಳುವ ಎಂದು ರಂಗಪ್ಪನವರು ಯೋಚಿಸಿ , ಎಂ.ಡಿ. ಯ ಬಳಿ "ಸರ್ ಆ ವಿಷಯ ಏನು ಅಂತಾ ಹೇಳಿದರೆ ತುಂಬಾ ಚೆನ್ನಾಗಿತ್ತು."ಅಂತಾ ಕೇಳಿದರು.


" ರ್ರಿ,ಸಂಜೆ ತನಕ ಕಾಯಿರಿ ನಿಮಗೆ ಎಲ್ಲಾ ಗೊತ್ತಾಗುತ್ತೆ.ಹ ಅಂದಹಾಗೆ ಅಪ್ಪ ಕೂಡ ಈ ಮೀಟಿಂಗ್ ಗೆ ಬರ್ತಾರೆ ,ನೆನಪಿನಲ್ಲಿ ಅವಳಿಗೆ ಮೀಟಿಂಗ್ ಅರೇಂಜ್ ಮಾಡ್ಲಿಕೆ ಹೇಳಿ ಹಾಗೂ ಮಧ್ಯಾಹ್ನ ನನ್ನ ಬಂದು ಮೀಟ್ ಆಗ್ಬೇಕಂತೆ ಕೂಡ ಹೇಳಿ ನೀವು ಇನ್ನು ಹೊರಡಿ." ಹೀಗೆ ಎಂ.ಡಿ. ರಂಗಪ್ಪನವರಿಗೆ ಮೀಟಿಂಗ್ ಅರೇಂಜ್ ಮಾಡುದ್ದಕೆ ಹೇಳಿ ಕಳುಹಿಸಿದ.


ಎಂ.ಡಿ. ಅಯ್ಯೋ ಓದುಗರೇ ನನ್ನ ಕ್ಷಮಿಸಿ. ನಾನು ನಿಮಗೆ ಆವಾಗದಿಂದಲು ಕೇವಲ ಎಂ.ಡಿ. ಎಂ.ಡಿ. ಅಂತಾ ಹೇಳ್ತಾ ಇದ್ದೇನೆ ಹೊರತು ಅವನ ಹೆಸರು ಹೇಳಲಿಲ್ಲಾ ದಯವಿಟ್ಟು ಕ್ಷಮೆ ಇರಲಿ. ಸ್ವಲ್ಪ ಮರುವಿನ ಕಾಯಿಲೆ ಹಾಗಾಗಿ ಮರೆತು ಬಿಟ್ಟೆ. 


ಈ ರುಚಿ ಕಂಪನಿಯ ಎಂ.ಡಿ ರಮೇಶ್ ಶೆಟ್ಟಿಯವರ ಮಗ ಅಂತಾ ನಿಮಗೆ ಕೂಡ ಗೊತ್ತು.ನಿಮಗೆ ಮೊದಲೇ ಹೇಳಿದ್ದೆ.ಆದರೆ ಅವನ ಹೆಸರು ಹೇಳದೆ ಇಷ್ಟೇಲ್ಲಾ ಇಷ್ಟೆಲ್ಲ  ಬಿಲ್ಡಪ್ ಯಾಕೆ ಕೊಡ್ತಾ ಇದ್ದೇನೆ ಅಂತಾ ಯೋಚನೆ ಮಾಡ್ತಾ ಇದ್ದೀರಾ. ನಾನು ಸಿನಿಮಾದಲ್ಲಿ ನೋಡಿದ್ದಾನೆ ಹೀರೋಗಳಿಗೆ ಎಷ್ಟು ಬಿಲ್ಡಪ್ ಕೊಡ್ತಾರೆ.ಅದಕ್ಕೆ ನಾನು ನನ್ನ ಕಥೆಯಲ್ಲಿ ಮುಖ್ಯ ಪಾತ್ರಕ್ಕೆ ಬಿಲ್ಡಪ್ ಕೊಟ್ಟೆ ಅಷ್ಟೆ.ಅದು ಬಿಡಿ ಈ ರಮೇಶ್ ಶೆಟ್ಟಿ ಮಗನ ಬಗ್ಗೆ ತಿಳಿದುಕೊಳ್ಳುವ.


ರುಚಿ ಫುಡ್ ಸ್ಟಾಲ್ ಸ್ಥಾಪನೆ ಮಾಡಿದ್ದು ಕೃಷ್ಣ ಶೆಟ್ಟಿ ಆದರೆ ಅದನ್ನ ಒಂದು ಫುಡ್ ಕಂಪನಿಯನ್ನಾಗಿಸಿ ಇಡೀ ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಪರಿಚಿಯಿಸಿದವರು ರಮೇಶ್ ಶೆಟ್ಟಿ ಆದರೆ ಅದನ್ನ ಇಡೀ ಕರ್ನಾಟಕ್ಕೆ ಪರಿಚಯಿಸಲು ಹೊರಟಿರುವವನು ರಮೇಶ್ ಶೆಟ್ಟಿಯ ಪುತ್ರ ಇದು ನಿಮಗೆ ಕೂಡ ಗೊತ್ತಿದೆ.ಆದರೆ ನಿಮಗೆ ರಮೇಶ್ ಶೆಟ್ಟಿ ಮಗನ ಬಗ್ಗೆ ಗೊತ್ತಿಲ್ಲ .


ಹತ್ತನೇ ತರಗತಿಯಲ್ಲಿ ಡಿಸ್ಟಿಂಕ್ಷನ್, PUC ಯಲ್ಲಿವು ಡಿಸ್ಟಿಂಕ್ಷನ್, ಡಿಗ್ರಿಯಲ್ಲಿ ಅತ್ಯುತ್ತಮ ದರ್ಜೆಯ ಅಂಕ ಪಡೆದು 'ಬಿ.ಬಿ.ಎ.' , 'ಎಂ.ಬಿ.ಎ ' ಹೀಗೆ ನಾಲ್ಕೈದು ಬ್ಯುಸಿನೆಸ್ ಕೋರ್ಸ್ ಮಾಡಿ ಈಗ ರುಚಿ ಕಂಪನಿಯ ಎಂ.ಡಿ.


ನೋಡೋಕೆ 6 ಅಡಿ ಎತ್ತರ ,ದಷ್ಠ - ಪುಷ್ಠವಾದ ಮೈಕಟ್ಟು , ಸೂಟ್-ಬೂಟ್ ಹಾಕಿ  ಹೀರೋತರ ಕಾಣಿಸ್ತಾಣೆ.ನೋಡೋಕೆ ಅಷ್ಟೆ ಅಲ್ಲ ಗುಣದಲ್ಲೂ ಇವನು ಹೀರೋನೇ.ಅಸಹಾಯಕರಿಗೆ ಸಹಾಯ ಮಾಡುವ ಒಳ್ಳೆ ಗುಣ ,ಹಿರಿಯರನ್ನು ಕಂಡರೆ ಗೌರವ.ಅಷ್ಟೆ ಅಲ್ಲ ಅನಾಥ ಆಶ್ರಮ , ವಿಶೇಷ ಚೇತನ ಮಕ್ಕಳಗಾಗಿ ,ವೃದ್ಧರಿಗಾಗಿ ,ಮಕ್ಕಳಿಗಾಗಿ ಹೀಗೆ ಹತ್ತು ಹಲವು ಒಳ್ಳೆ ಕೆಲಸಗಳು ಮಾಡುವ ಮನಸ್ಸುವುಳ್ಳವ.ಇವನ ಬಗ್ಗೆ ಹೇಳೋಕೆ ತುಂಬಾ ಇದೆ.ಮುಂದೆ ಇವನ ಬಗ್ಗೆ ನಿಮಗೆ ಗೊತ್ತಾಗುತ್ತೆ.


ರಮೇಶ್ ಶೆಟ್ಟಿಗೆ ಎರಡು ಮಕ್ಕಳು ಅದರಲ್ಲಿ ಮೊದಲನೆವನೆ ಇವನು ,ಹೆಸರು ರೋಹಿತ್ ಯಾವಾಗಲು ನಗುತ್ತಾ ಇರುವ ಇವನು 'ರುಚಿ ' ಕಂಪನಿಗೆ ಎಂ.ಡಿ..


ಈಗ ತಿಳಿಯಿತಲ್ಲ ಎಂ.ಡಿ. ಯ ಹೆಸರು ಮತ್ತು ಅವನ ಬಗ್ಗೆ.



ಸಂಜೆ ಸಮಯ 3.50 ಆಗಿತ್ತು ಮೀಟಿಂಗ್ ಗೆ ಎಲ್ಲರೂ ಕಾಯುತ್ತ ಇದ್ದರು.


ರಂಗಪ್ಪನವರು ಒಂದು ಹುಡುಗಿಯ ಬಳಿ "ಸರ್ ಎಲ್ಲಿ?, ಎಲ್ಲರೂ ಬಂದಿದ್ದಾರೆ ಅವರು ಕಾಣಿಸ್ತಾ ಇಲ್ಲಾ"ಹೀಗೆ ಕೇಳುತ್ತಿರುವಾಗ ಕಂಪನಿಯ ಮುಖ್ಯ ದ್ವಾರದ ಬಳಿ ಒಂದು ಸ್ಕೋರ್ಫಿಯೋ ಕಾರ್ ಬಂದು ನಿಂತಿತ್ತು.ಅದರಿಂದ ಒಬ್ಬಾ ವ್ಯಕ್ತಿ ಇಳಿದ.



ಹಣೆಯಲ್ಲಿ ಕೆಂಪು ತಿಲಕ, ಬಿಳಿಯಾದ ಕೂದಲನ್ನು ಅಂದವಾಗಿ ಬಾಚಿದ್ದರು ,ಬಿಳಿ ಅಂಗಿಗೆ ಸರಿಸಮವಾದ ಬಿಳಿ ಪಂಚೆ ,ಎಪ್ಪತ್ತೆರಡು ವರ್ಷ ಆದ ಮುದುಕ. ಅಷ್ಟು ವಯಸ್ಸಾದರೂ ಇನ್ನು ತರುಣನಂತೆ ಹುಮ್ಮಸ್ಸು,ತನ್ನ ಮುದ್ದಾದ ಮೀಸೆಯನ್ನು ಗರ್ವದಿಂದ ತಿರುಗಿಸುತ್ತಾ ಇಳಿದವರು ಬೇರೆ ಯಾರು ಅಲ್ಲ ಅವರೇ ರಮೇಶ್ ಶೆಟ್ಟಿ. 


ಅಲ್ಲಿ ಮೀಟಿಂಗ್ ಬಂದಿದ್ದ ಎಲ್ಲರೂ ಒಮ್ಮೆ ರಮೇಶ್ ಶೆಟ್ಟಿಯವರನ್ನ ನೋಡಿ ಖುಷಿಯಾಗಿ ಅವರ ಬಳಿ ಓಡಿ ಹೋಗಿ ಅವರಿಗೆ ಹೂಗುಚ್ಚ ನೀಡಿ ಸ್ವಾಗತ ಮಾಡಿದರು.


ಅಲ್ಲಿಗೆ ಯಾರೋ ದೊಡ್ಡ ಸೆಲೆಬ್ರಿಟಿ ಬಂದ್ದಿದ್ದಾರೇನೋ..! ಅನ್ನುವ ಹಾಗಿತ್ತು.



ಇದೆಲ್ಲಾ ಆಗುವ ಸಮಯ 4 ಗಂಟೆ ಮೀಟಿಂಗ್ ಶುರುವಾಗಿತ್ತು.


ಅಲ್ಲಿ ಎಲ್ಲಾ ಬ್ರಾಂಚ್ ನ ಮ್ಯಾನೇಜರ್ಗಳು ಹಾಗೂ ರುಚಿ ಕಂಪನಿಯ ಹೆಡ್ ಆಫೀಸ್ನಾ ಎಲ್ಲಾ ಸ್ಟಾಫ್ ಗಳು ಆ ಮೀಟಿಂಗ್ ಗೆ ಹಾಜರಾಗಿದ್ದರು.



ರೋಹಿತ್ ತಾನು ಏನೂ ಮುಖ್ಯವಾದ ವಿಷಯ ತಿಳಿಸಬೇಕೆಂದು ಈ ಮೀಟಿಂಗ್ ಅರೇಂಜ್ ಮಾಡಿದ್ದ.



ಬ್ಲ್ಯಾಕ್ ಕಲರನ ಟಾಪ್ಗೆ ಪಿಂಕ್ ಕಲರ್ನ ಪೆನ್ಸಿಲ್ ಸ್ಕರ್ಟ್ ಅದಕ್ಕೆ ಬ್ಲ್ಯಾಕ್ ಕಲರ್ ಹೀಲ್ಸ್! ದೇವತೆಯಾಂತೆ ಕಾಣುತಿದ್ದಳು ಪ್ರೀತಿ.


ಪ್ರೀತಿ ರೋಹಿತ್ ಪರ್ಸನಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತಿದ್ದಳು. 


ಈ ಮೀಟಿಂಗ್ ಅರೇಂಜ್ಮೆಂಟ್ ಎಲ್ಲಾ ಅವಳದ್ದೆ.


ಹಾಗೆ ತನ್ನ ಸ್ವೀಟಾದ ವಾಯ್ಸ್ ಲ್ಲಿ , " ಎಲ್ಲರಿಗೂ ಈ ಮೀಟಿಂಗ್ ಸ್ವಾಗತ. ನನ್ನ ಹೆಸರು ಪ್ರೀತಿ ರೋಹಿತ್ ಸರ್ ಅವರ ಪಿ.ಎ. " ಅಂತಾ ತನ್ನ ಬಗ್ಗೆ ಪರಿಚಯ ಮಾಡುತ್ತಾ ಹಾಗೂ ಅಲ್ಲಿ ಬಂದಿದ್ದ ಮುಖ್ಯ ವ್ಯಕ್ತಿಯನ್ನು ಪರಿಚಯಿಸಿ ಅವರನ್ನು ಸ್ವಾಗತಿಸಿದಳು. ಹಾಗೂ  ತನ್ನ ಮಾತುಗಳನ್ನು ನಿಲ್ಲಿಸಿ ರೋಹಿತ್ಗೆ ಮಾತನಾಡಲು ಅವಕಾಶ ಮಾಡಿ ಕೊಟ್ಟಳು.


" ನಿಮಗೆಲ್ಲರಿಗೂ ತಿಳಿದಿರುವಂತೆ  ನಮ್ಮ ಕಂಪನಿಗೆ  "ದಿ ಬೆಸ್ಟ್ ಫುಡ್ ಕಂಪನಿ " ಅವಾರ್ಡ್ ನಾಳೆ  ಸಿಗಲಿದೆ. ಈ ಯಶಸ್ಸಿಗೆ ನಿಮ್ಮೆಲ್ಲರ ಪ್ರಯತ್ನ ಹಾಗೂ ಶ್ರಮ ತುಂಬಾ ಇದೆ. ನಾನು ಈ ಖುಷಿಯ ಜೊತೆಗೆ ಇನ್ನೊಂದು ಖುಷಿ ವಿಚಾರ ಹೇಳಬೇಕು ಅಂತಾ ಈ ಮೀಟಿಂಗ್ ಅರೇಂಜ್ ಮಾಡಿದೆ.ಆ ವಿಷಯ ಹೇಳೋಕೆ ಮುಂಚೆ  ನಮ್ಮ ಕಂಪನಿಯಲ್ಲಿ ದುಡಿಯುತ್ತಿರುವ ಎಲ್ಲರಿಗೂ ಅಭಿನಂದನೆಗಳು.ಇದು ನಿಮ್ಮ ಶ್ರಮಕ್ಕೆ ಸಿಕ್ಕಿರುವ ಫಲ. ರುಚಿಯೊಂದು ಸಣ್ಣ ಅಂಗಡಿಯಿಂದ ಈಗ ಇಷ್ಟೊಂದು ದೊಡ್ಡ ಕಂಪನಿಯಾಗಿ ಬೆಳೆದಿದೆ. ಹಾಗೆಯೆ ಈ ಕಂಪನಿಯು ದೇಶ ವಿದೇಶದಲ್ಲಿ ಬೆಳೆಯಬೇಕು ಅದಕ್ಕಾಗಿ ನಾವು ಇನ್ನು ಹೆಚ್ಚಿನ ಶ್ರಮ ಪಡಬೇಕು. ನಮ್ಮ ಕಂಪನಿಯು ಇನ್ನು ಹೆಚ್ಚಿನ ಕಡೆ ಹೆಸರು ಪಡೆಯಬೇಕು.ಅದಕ್ಕಾಗಿ ನಾನು ಇವತ್ತು ಸಣ್ಣ ಯೋಜನೆಯನ್ನು ಮಾಡಿದ್ದೇನೆ.. ಇದರ ನಾನು ಯಾವುದೇ ಮಾಹಿತಿಯನ್ನು ಸಂಗ್ರಹಿಸಿಲ್ಲ. ಕೇವಲ ಯೋಚನೆ ಮಾಡಿದ್ದೇನೆ ಅಷ್ಟೆ. ಈ ವಿಷಯವನ್ನು ಅಪ್ಪಾಜಿ ಮತ್ತು ನಿಮ್ಮ ಅಭಿಪ್ರಾಯ ತೆಗೆದುಕೊಂಡು ನಂತರ ಮುಂದುವರಿದು ಒಳ್ಳೇದು ಅನ್ನಿಸಿತ್ತು.ಅದಕ್ಕಾಗಿ ಇವತ್ತೂ ಈ ಮೀಟಿಂಗ್ ಅರೇಂಜ್ ಮಾಡಿದೆ. ನನ್ನ ಯೋಜನೆಗಳು ಮೊದಲು ನಾವು ಒಂದು ಪ್ರಾಜೆಕ್ಟ್ ಪ್ಲಾನ್ ಮಾಡಿ ಅನಂತರ ಅದನ್ನ ಕಾರ್ಯ ರೂಪಕ್ಕೆ ತರುವ ಹಾಗೂ ನಾವು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡು ಇನೊಮ್ಮೆ ಮೀಟಿಂಗ್ ಕೂಡ ಮಾಡುವ. ನನ್ನ ಯೋಜನೆ ಹೀಗಿದೆ ಮೊದಲನೆಯದು ನಮ್ಮ ಈ ಕಂಪನಿಯನ್ನು ಬೆಂಗಳೂರಿನಲ್ಲಿ ಹಾಗೂ ಮೈಸೂರ್ ನಲ್ಲಿ ಪರಿಚಯ ಮಾಡ್ಬೇಕು ಅಂದರೆ ಮೊದಲು ಬೆಂಗಳೂರಿನಲ್ಲಿ ಒಂದು ಬ್ರಾಂಚ್ ಮಾಡಿ ನಂತರ ಮೈಸೂರಿಲ್ಲಿ. ಎರಡನೇ ಯೋಜನೆ ಡಿಜಿಟಲ್ ನಲ್ಲಿ ನಮ್ಮ ರುಚಿ ಕಂಪನಿಯನ್ನ ಪರಿಚಯಿಸುವುದು ಅಂದರೆ ನಮ್ಮ ಕಂಪನಿಯ ಎಲ್ಲಾ ಸೌಲಭ್ಯಗಳು ಗ್ರಾಹಕರಿಗೆ ಮೊಬೈಲ್ ನಾ ಮೂಲಕವೆ ಸಿಗುವಂತೆ." ಅಂತಾ ರೋಹಿತ್ ತನ್ನ ಯೋಜನೆಗಳನ್ನು ವಿವರಿಸುತ್ತಿದ್ದ.


"ಎಲ್ಲರಿಗೂ ನನ್ನ ಯೋಜನೆಗಳು ತಿಳಿಯೇತೆ..? ಇದರ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಏನಾದರೂ ಸಂದೇಹ ಇದೆಯೇ..?" ಅಂತಾ ರೋಹಿತ್ ಕೇಳಿದ.



ಎಲ್ಲರೂ ಬೆಂಗಳೂರು ಮತ್ತೆ ಮೈಸೂರ್ ನ ಪ್ರಾಜೆಕ್ಟ್ ಒಪ್ಪಿಗೆ ನೀಡಿದರು. ಆದರೆ ಡಿಜಿಟಲ್ ಯೋಜನೆಗೆ ಯಾರು ಒಪ್ಪಲಿಲ್ಲ. ಯಾರೋ ಯಾಕೆ ಸ್ವಂತ ಅಪ್ಪ ರಮೇಶ್ ಅವರು ಕೂಡ ಒಪ್ಪಲಿಲ್ಲ.


"ನೋಡು ಮಗಾ ಈ ಡಿಜಿಟಲ್ ತುಂಬಾ ರಿಸ್ಕ್ ಮತ್ತೆ ಅಷ್ಟೆ ಖರ್ಚು ಇದ್ದೆ,ಮೊದಲು ನೀನು ನಿನ್ನಾ ಮೊದಲ ಯೋಜನೆ ಪೂರ್ಣ ಮಾಡು ಮುಂದೆ ಎರಡನೇ ಯೋಜನೆ ಶುರು ಮಾಡು,ನಿನಗೆ ಆ ಟೈಮ್ ಲ್ಲಿ ಬೇಕಾದ ಎಲ್ಲಾ ಮಾಹಿತಿ ಮತ್ತು ಒಂದು ಒಳ್ಳೆ ಪ್ಲಾನಿಂಗ್ ಕೂಡ ಸಿಗಿತ್ತೇ" ಅಂತಾ ರಮೇಶ್ ಶೆಟ್ಟಿ ಹೇಳಿದರು. ಇಷ್ಟು ಹೇಳಿ ಅಲ್ಲಿಂದ ರಮೇಶ್ ಶೆಟ್ಟಿ ಹೊರಟರು.


ರೋಹಿತ್ ತುಂಬಾ ಬೇಜಾರ್ ಆದ .ಅದನ್ನ ಪ್ರೀತಿ ಗಮನಿಸದಳು.

ಆ ಮೀಟಿಂಗನ್ನ ಅಲ್ಲಿಯೇ ಮುಕ್ತಾಯಗೊಳಿಸಿ ಎಲ್ಲರನ್ನು ಕಳುಹಿಸಿದಳು..


ಎಲ್ಲರೂ ಹೊರಟರು. ಹಾಗೆ ರೋಹಿತ್ ಕೂಡ ತನ್ನ ಕ್ಯಾಬಿನ್ಗೆ ಹೋದ.



ರೋಹಿತ್ ನ  ಕ್ಯಾಬಿನ್ ನಲ್ಲಿ ,


"ಪ್ರೀತಿ ನನಗೆ ಒಂದು ಕಾಫಿ ಹೇಳು. ನನಗೆ ತುಂಬಾ ತಲೆನೋವು ಆಗ್ತಾ ಉಂಟು"  ತುಂಬಾ ಬೇಸರದಲ್ಲಿದ ರೋಹಿತ್ ಪ್ರೀತಿಯ ಬಳಿ ಹೇಳಿದ.


"ಸರಿ,ಸರ್. ಆದರೆ ನಾನು ನಿಮ್ಮ ಬಳಿ ಒಂದು ಪ್ರಶ್ನೆ ಕೇಳ್ಬೇಕು.ಬೇಜಾರು ಆಗ್ಬೇಡಿ, ಅವರು ಹೇಳಿದ್ದು ಈ ಯೋಜನೆ ಮಾಡಬೇಡಿ ಅಂತಾ ಅಲ್ಲ ಸ್ವಲ್ಪ ಸಮಯದ ನಂತರ ಮಾಡಿ ಅಂತಾ ಹೇಳಿದ್ದಾರೆ ಅಷ್ಟೆ."ಅಂತಾ ಪ್ರೀತಿ ಹೇಳಿದಳು.


" ನಿನಗೆ ಏನೂ ಗೊತ್ತು ಇಡೀ ದೇಶಕ್ಕೆ ಅಷ್ಟೆ ಅಲ್ಲ ಇಡೀ ಪ್ರಪಂಚ ರುಚಿ ಕಂಪನಿ ಪರಿಚಯಿಸುದು ನನ್ನ ಡ್ರೀಮ್,ಅದಕ್ಕೆ ಎಷ್ಟು ಕಷ್ಟ ಪಟ್ಟಿದ್ದೇನೆ ಅಂತಾ ನಂಗೆ ಗೊತ್ತು. ನನಗೆ ಮೈಸೂರು ಮತ್ತೆ ಬೆಂಗಳೂರಿನ ಪ್ರಾಜೆಕ್ಟ್ ನಡೆಯದಿದ್ದರೂ ಬೇಜಾರ್ ಆಗ್ತಾ ಇರಲಿಲ್ಲ.ಡಿಜಿಟಲು ಪ್ರಾಜೆಕ್ಟ್ ನಿಜ ಆಗ್ತಾ ಇದ್ದಿದ್ದಾರೆ ಬಹಳ ಖುಷಿ ಆಗ್ತಾ ಇತ್ತು ಇಡೀ ಲೋಕಕ್ಕೆ ನಮ ರುಚಿ ಕಂಪನಿ ಕೂಡ ಪರಿಚಯವಾಗ್ತಾ ಇತ್ತು."ಅಂತಾ ರೋಹಿತ್ ತನ್ನ ಬೇಸರದ ಕಾರಣ ತಿಳಿಸಿದ.


" ಸಾರಿ, ಸರ್... ನೀವು ಯಾಕೋ ತುಂಬಾ ಬೇಸರದಲ್ಲಿದ್ದೀರಿ. ನೀವು ಯಾಕೆ ಲೀವ್ ತೆಗೆದುಕೊಳ್ಳಬಾರದು.ಸ್ವಲ್ಪ ರೆಸ್ಟ್ ಮಾಡಿದ್ರೆ ಬೇಸರಾ ಕಮ್ಮಿ ಆಗ್ಬಹುದು.ನೀವು ಮನೆಗೆ ಹೋಗಿ ಇಲ್ಲಿಯ ಬಗ್ಗೆ ಚಿಂತೆ ಮಾಡ್ಬೇಡಿ." ಅಂತಾ ಸಮಾಧಾನ ಹೇಳಿದಳು ಪ್ರೀತಿ.


"ಹೌದು , ನೀನು ಹೇಳುದು ಸರಿಯಾಗಿದೆ.ಐ ಕ್ಯಾನ್ ಲೀವ್ ನೌ" ಅಂತಾ ಹೇಳಿ ಹೋಗೇಕೆ ರೆಡಿಯಾದ ರೋಹಿತ್.


" ಸರ್ ಒನ್ ಮಿನಿಟ್, ನಾಳೆ  ನಿಮಗೆ ಗೊತ್ತಿದೆ ಆವಾರ್ಡ್ ಕಾರ್ಯಕ್ರಮ ಇದೆ.ನಾವು ನಾಳೆ 10 ಗಂಟೆಗೆ ಅಲ್ಲಿ ಇರ್ಬೇಕು.ಲೇಟ್ ಆದರೆ ಒಳಗೆ ಬಿಡಲ್ಲ ಅಂತಾ ನಿಮಗೆ ಗೊತ್ತಿದೆಲ್ಲ.?" ಅಂತಾ ಕೇಳಿದಳು ಪ್ರೀತಿ.


"ಹೌದಲ್ಲ ,ಸರಿ ನಾಳೆ ನಾವು ಹೋಗುವ ನೀನು ಬೆಳ್ಳಿಗೆ 8.30 ಮನೆಗೆ ಬಾ. ಅಲ್ಲಿಂದ ನಾವು ಹೋಗುವ. ಎಲ್ಲಾ ಬೇಕಾದ ಫೈಲ್ ನಾನು ಈಗ ಮನೆಗೆ ತೆಗೆದುಕೊಂಡು ಹೋಗ್ತಾ ಇದ್ದೇನೆ ಹಾಗೆ ನೀನು ಅದು ಪ್ರವೇಶ ಪತ್ರ ಮತ್ತೆ ಐ.ಡಿ. ಕಾರ್ಡ್ ತಗೊಂಡು ಬಾ. ಮತ್ತೆ ಏನಾದರೂ ಇದ್ರೆ ನನಗೆ ಕಾಲ್ ಮಾಡು. ಸರಿ ನಾನು ಈಗ ಹೊರಡ್ತೇನೆ.ತಲೆ ತುಂಬಾ ನೋವು ಆಗ್ತಾ ಉಂಟು " ಅಂತಾ ಹೇಳಿ ಹೊರಟ.


"ಸರಿ ಸರ್, ಟೇಕ್ ಕೇರ್ ಸರ್." ಅಂತಾ ಹೇಳುತ್ತಾ ಟಾಟಾ ಮಾಡಿದಳು ಪ್ರೀತಿ.


ರೋಹಿತ್ ತಾನು ಪ್ರೀತಿಗೆ ಟಾಟಾ ಮಾಡಿ ಅಲ್ಲಿಂದ ಮನೆಗೆ ಹೊರಟ


Rate this content
Log in

Similar kannada story from Drama