ಯಜ್ಞಸೇನಿ ಶ್ರೀಹರಿ

Drama Romance

3.5  

ಯಜ್ಞಸೇನಿ ಶ್ರೀಹರಿ

Drama Romance

ನನ್ನ ಹೃದಯದ ಮಿಡಿತ ನೀ......

ನನ್ನ ಹೃದಯದ ಮಿಡಿತ ನೀ......

4 mins
163


ನೀನೊಂದು ಮುಗಿಯದ ಮೌನ

ನಾ ಹೇಗೆ ತಲುಪಲಿ ನಿನ್ನಾ

ನೀನೊಂದು ಕಡಲಿನ ಧ್ಯಾನ

ನಾ ಹೇಗೆ ಬೆರೆಯಲಿ ನಿನ್ನಾ

ಒಲವಿಗೆ, ಚೆಲುವಿಗೆ, ಈ ಹೃದಯವೇ ನಿನಗೆ ಕಾದಿದೇ......


ದೂರದ ಸಮುದ್ರ ನೋಡುತ್ತಿದ್ದ ಅವಳನ್ನು ಮೊಬೈಲ್‌ ಕರೆ ಹಳೆಯ ನೆನಪುಗಳಿಂದ ಹೊರ ಬರಲು ಸಹಾಯ ಮಾಡಿತ್ತು..." ಪುಟ್ಟಾ ಇನ್ನೂ ಎಲ್ಲಿ ಇದ್ದಿಯಾ ,ಬೇಗ ಮನೆಗೆ ಬಾ ಮನೆಯಲ್ಲಿ ಎಲ್ಲಾ ತಯಾರಿ ಆಗಿದೆ ಪುಟ್ಟಾ ."

"ಹಾ ಅಪ್ಪಾ ಬಂದೆ ಇಲ್ಲೇ ಬಿಚ್ ಕಡೆ ಇದ್ದಿನಿ ಪಾ ಬೇಗ ಬಂದೆ " ಅಂತ ಅವಳ ತಂದೆಯ ಕರೆಯನ್ನು ಸ್ಥಗಿತಗೊಳಿಸಿ ತಾನು ತಂದ ಸ್ಕೂಟಿ ಜೊತೆ ಮನೆ ಕಡೆ ಪಯಣ ಬೆಳೆಸಿದಳು...ಅವಳು ಪಾವನಿ , ಸೌಂದರ್ಯದ ಗಣಿ , ಅಪ್ಪ ನಾ ಮುದ್ದಿನ ಮಗಳು ಅವಳ ಅಮ್ಮ ಇವಳು ಚಿಕ್ಕವಳು ಇರುವಾಗಲೇ ದೇವರ ಹತ್ತಿರ ಹೋದರು...

       

         

ಇನ್ನೂ ಹೆಂಡತಿ ಮೇಲೆ ಪರಿಶುದ್ಧ ಪ್ರೇಮವನ್ನು ಇಟ್ಟುಕೊಂಡ ಸೋಮಶೇಖರ್ ಅವರು (ಪಾವನಿಯ ಅಪ್ಪ ) ಮತ್ತೆ ಅವರ ಮರುಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ .... ಮಗಳೇ ಸರ್ವಸ್ವ ಅಂತ ತಿಳಿದು ಅವಳನ್ನು ಕಣ್ಣು ರೆಪ್ಪೆ ಹಾಗೇ ಜೋಪಾನ ಮಾಡಿದರು ...   ಪಾವನಿ ಅತ್ಯುತ್ತಮ ಸಂಗೀತಗಾರ್ತಿ, ಗೀರ್ವಾಣಿಯ (ಶಾರದೆ ದೇವಿಯ) ಆಶೀರ್ವಾದವನ್ನು ಹುಟ್ಟಿನಿಂದನೇ ಪಡೆದುಕೊಂಡು ಬಂದವಳು ... ಸಂಗೀತ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತದಿಂದ ಬೆಂಗಳೂರಿಗೆ ಕಾಲಿಟ್ಟಳು ಅದು ಅಪ್ಪನ ವಿರುದ್ಧವನ್ನು ಕಟ್ಟಿಕೊಂಡು , ಅವಕಾಶಕ್ಕೆ ಎಲ್ಲ ಕಡೆ ಅಲ್ಲೇ ದಾಡಿದಳು ಆದರೆ ಅವಕಾಶ ಅನ್ನುವುದು ಬೆಂಗಳೂರಿನಲ್ಲಿ ಆಕಾಶದ ಹಾಗೆ ,ಅಲ್ಲಿ ಕರೆದುಕೊಂಡು ಹೋಗಿ ಬನ್ನಿ ನಿಮಗೆ ಅವಕಾಶ ಕೊಡುತ್ತಿವಿ ಅಂತ ಹೇಳುವರು ಯಾರು ಇಲ್ಲ. ನಾವೇ ಅವಕಾಶವನ್ನು ಸೃಷ್ಟಿ ಮಾಡಬೇಕು ಅಂತ ಸ್ವಲ್ಪ ಸಮಯದಲ್ಲಿ ಅವಳಿಗೆ ಗೊತ್ತು ಆಯಿತು...

       

ಅದರಿಂದ ಅವಳು ಒಂದು ವಿದ್ಯಾಸಂಸ್ಥೆಯಲ್ಲಿ ಸಂಗೀತದ ಶಿಕ್ಷಕಿಯಾಗಿ ಕೆಲಸ ಮಾಡಲು ಶುರು ಮಾಡಿದಳು .....

ಅಲ್ಲಿ ಪರಿಚಯವಾದವನೇ ರೋಹಿತ್ ಸೌಮ್ಯ ಸ್ವಭಾವದ, ಹಾಗೂ ಸ್ವಲ್ಪ ಹಠಮಾರಿ ತನ್ನದ ಹುಡುಗ , ವಿದ್ಯಾಸಂಸ್ಥೆಯ ಸಂಸ್ಥಾಪಕನ ಮಗ , ಆದರೆ ವಿದ್ಯಾಸಂಸ್ಥೆಯಲ್ಲಿ ಸಾಮಾನ್ಯ ನಿರ್ವಾಹಕ ಘಟಕದಲ್ಲಿ ಕೆಲಸ ಮಾಡುತ್ತಿದ್ದ, ವಿದ್ಯಾಸಂಸ್ಥೆಯ ಮುಂದೆ ರಾಜನಾಗುವೇ ಎಂದು ತಿಳಿದ್ದಿದ್ದರು ಕೂಡ ಸೇವಕನಂತೆ ಇದ್ದ...

        

ರೋಹಿತ್ ಹಾಗೂ ಪಾವನಿಯ ಸ್ನೇಹ ಆಕಸ್ಮಿಕವಾಗಿ ಶುರುವಾಯಿತು ,ಅದೇ ಆಕಸ್ಮಿಕವಾಗಿ ಶುರುವಾದ ಸ್ನೇಹ ಸ್ವಲ್ಪ ದಿನದಲ್ಲಿ ಪ್ರೀತಿಯಾಗಿ ಪರಿಪೂರ್ಣವಾಗಿ ಪರಿವರ್ತನೆ ಆಯಿತು... ಅವರೇನು ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡಲಿಲ್ಲ ,ಕೈ ಕೈ ಹಿಡಿದು ಪಾರ್ಕ್ ಸಿನಿಮಾ ಅಂತ ತಿರುಗಲಿಲ್ಲ , ಕಣ್ಣುಗಳು ಮೂಲಕವೇ ತಮ್ಮ ಪರಿಶುದ್ಧ ಪ್ರೇಮವನ್ನು ಒಬ್ಬರಿಗೊಬ್ಬರಿಗೆ ಹಂಚಿಕೊಂಡಿದ್ದರು . ಆದರೆ ಒಂದು ದಿನ ಪಾವನಿಗೆ ಅವನ ವಾಸ್ತವದ ಅರಿವಾಯಿತು , ಅವನು ಸಾಮಾನ್ಯ ಕೆಲಸಗಾರನಲ್ಲ ವಿದ್ಯಾಸಂಸ್ಥೆಯ ಸಾಮ್ರಾಜ್ಯದ ಮುಂದಿನ ದೊರೆ ಎಂದು ...

   

 ಮರುದಿನ ಮುಂಜಾನೆಯೇ ಅವಳ ನಿರ್ಧಾರವನ್ನು ಅವನಿಗೆ ತಿಳಿಸಲು ಗಣೇಶನ ದೇವಸ್ಥಾನಕ್ಕೆ ಬರ ಹೇಳಿದ್ದಳು...

" ಪಾವನಿ ಈ ಚಳಿಗಾಲದ ಚಳಿಯಲ್ಲಿ ನನ್ನ ಯಾಕೆ ದೇವಸ್ಥಾನಕ್ಕೆ ಬರಕ್ಕೆ ಹೇಳಿದೆ , ಇವತ್ತೇ ನನ್ನ ನೀನು ಮದುವೆ ಮಾಡಿಕೊಳ್ಳಬೇಕು ಅಂತ ಡಿಸೈಡ್ ಮಾಡಿದ್ದಿಯಾ ಮತ್ತೆ ಏನ್ ಸಮಾಚಾರ "ಎಂದು ಕಣ್ಣು ಹೊಡೆದು ತುಂಟತನದಿಂದ ಕೇಳಿದ.

" ರೋಹಿತ್ ,ನನ್ನ ನಿಮ್ಮ ಈ ಸಂಬಂಧವನ್ನು ಇಲ್ಲಿಗೆ ಬಿಟ್ಟು ಬಿಡುವ ....ನಾನು ನಿಮ್ಮ ಯೋಗ್ಯತೆಗೆ ತಕ್ಕ ಹುಡುಗಿ ಅಲ್ಲ ...ನೀವು ನಿಮ್ಮ ಅಂತಸ್ತಿಗೆ ತಕ್ಕನಾದ ಹುಡುಗಿಯನ್ನು ನೋಡಿ ಮದುವೆ ಆಗಿ , ನನ್ನ ಮರೆತು ಸುಖವಾಗಿ ಇರಿ ನಾನು ನಿಮ್ಮ ಜೀವನದಿಂದ ದೂರ ಹೋಗತ್ತಿದ್ದಿನಿ ..."ಅಂತ ತನ್ನಲ್ಲಿ ಅಡಗಿರುವ ಎಲ್ಲಾ ಧೈರ್ಯವನ್ನು ಒಗ್ಗೂಡಿಸಿ ಹೇಳಿದಳು

" ಏನು ಪ್ರೀತಿ ಅಂದರೆ ಆಟ ಅನ್ಕೊಂಡಿದ್ದೀಯಾ ... ಎಷ್ಟು ಸುಲಭವಾಗಿ ಹೇಳಿದ್ದೆ ...ನಿನ್ನ ನಾನು ಮರಿಬೇಕು ಅಂತ ನೋಡು ಪಾವನಿ ಈ ಜನ್ಮದಲ್ಲಿ ನೀನೇ ನನ್ನ ಹೆಂಡತಿ ಅಂತ ತೀರ್ಮಾನ ಮಾಡಿದ್ದಿನಿ .. ಇಲ್ಲಿ ಆಸ್ತಿ ಅಂತಸ್ತಿನ ವಿಷಯ ಬರುವುದೇ ಇಲ್ಲ ಸುಮ್ಮನೆ ತಮಾಷೆ ಮಾಡಬೇಡ ... ಪಾವನಿ " ಅಂತ ಅವಳ ಮಾತುಗಳಿಂದ ಸ್ವಲ್ಪ ಕ್ರೋಧಗೊಂಡು ಹೇಳಿದ . " ನೋಡಿ ರೋಹಿತ್ ನಾನು ಯಾವ ತಮಾಷೆಯನ್ನು ಮಾಡತ್ತಿಲ್ಲ...ಹಾಗೇ ನಾನು ಇನ್ನೂ ಮುಂದೆ ನಿಮ್ಮ ಜೀವನದಲ್ಲಿ ಇರಕ್ಕೆ ಇಷ್ಟ ಪಡುವುದ್ದಿಲ್ಲ..." ಅಂತ ಹೇಳಿ ಅವನ್ನು ಮತ್ತೆ ನೋಡದೆ ದೇವಸ್ಥಾನದ ಮೆಟ್ಟಿಲುಗಳನ್ನು ಇಳಿಯ ತೊಡಗಿದ್ದಳು ..." ಪಾವನಿ , ನೀವು ಯಾಕೆ ಹೀಗೆ ಹೇಳತ್ತಿದ್ದಿರಿ ಅಂತ ತಿಳಿದುಕೊಳ್ಳಬಹುದಾ " ಎಂದು ಅವಳ ಕೈ ಹಿಡಿದು ಹಿಂದಿನಿಂದ ಎಳೆದಾ."ರೋಹಿತ್ ನಿಮಗೆ ಆಗಲೇ ನನ್ನ ಉತ್ತರ ಹೇಳಿದ್ದಿನಿ ..  ನಾನು ನಿನ್ನ ಅಂತಸ್ತಿಗೆ ತಕ್ಕನಾದ ಹುಡುಗಿ ಅಲ್ಲ ...ಹಾಗೆ ನಾನು ಬೆಂಗಳೂರಿಗೆ ಬಂದಿದ್ದು ನನ್ನ ಹಾಡು ಹಾಗೆ ನನ್ನ ಕೇರಿಯರ್ ಗೋಸ್ಕರ ಹೊರತು ಪ್ರೀತಿ-ಗೀತಿ ಅಂತ ಅಲ್ಲ  ...ಅಕಸ್ಮಾತ್ ನಾನು ನಿಮ್ಮನಾ ಮದುವೆ ಆದರೆ ಈ ಸಮಾಜ ಏನು ಅನ್ನಲ್ಲ ಆಸ್ತಿಗೊಸ್ಕರ ಮದುವೆ ಆದಳು ಅನ್ನಲ್ಲವಾ , ಇದರಿಂದ ನನ್ನ ಅಪ್ಪನಾ ಮರ್ಯಾದೆಗೆ ಮಸಿಬಳೆದ ಹಾಗೆ ಆಗುತ್ತೆ ....ಅದಕ್ಕೆ ನೀವು ನಾನು ದೂರ ಆಗುವುದೇ ಒಳ್ಳೆಯದು ರೋಹಿತ್ ಅವರೇ.... " "ವಾವ್ ಪಾವನಿ ಅವರೇ ಸಮಂಜಸವಾದ ಉತ್ತರ    ಆದರೇ ಇದು ನನಗೆ ಇಷ್ಟ ಇಲ್ಲ ಹಾಗೇ ನೀವೇ ನನ್ನ ಮನೆಯ ಹಾಗೂ ನನ್ನ ಮನದ ಒಡತಿ ... ಮತ್ತೆ ಒಂದು ತಿಳಿದುಕೊಳ್ಳಲಿ ಬಾವಿ ಒಳಗಿನ ಕಪ್ಪೆ ಆಗಲು ಹೋಗಬೇಡಿ ... ಸಮಾಜ ಹಾಗೇ ಅನುತ್ತೆ ಹೀಗೆ ಅನುತ್ತೆ ಅಂತ ... ನಿಮ್ಮ ಕಷ್ಟಕಾಲಕ್ಕೆ ನಮ್ಮವರು ಅದವರೇ ಬರುತ್ತಾರೆ ,ಹೊರೆತು ಈ ಸಮಾಜವೇನ್ ಅಲ್ಲ ..." "ಅದು ಏನೇ ಆಗಿರಲಿಲ್ಲ ಅದರೇ ನಾವು ಇರುವುದು ಸಮಾಜದಲ್ಲಿ ಇದು ನೆನಪು ಇರಲಿ , ಹೇಗೆ ಮಣ್ಣಿನ ಎರೆಹುಳು ಮಣ್ಣಿನಲ್ಲಿ ಇರುತ್ತೆ ಅದರೇ ಮಣ್ಣು ಎರೆಹುಳುವಿನ ಮೈಗೆ ಅಂಟಿಕೊಳ್ಳುವುದಿಲ್ಲ ಹಾಗೆ ನಾವು ಸಮಾಜದಲ್ಲಿ ಇರುವುದು ... ಸಮಾಜದ ಕಟ್ಟು ಪಾಡುಗಳು ನಮ್ಮನಾ ಸುತ್ತಲೂವರೆದಿರುತ್ತದೆ ಮಣ್ಣಿನ ಹಾಗೇ,ಅದರಿಂದ ಹೊರಗೆ ಬರಲು ಸಾಧ್ಯವಿಲ್ಲ ..." ಅಂತ ಹೇಳಿ ತನ್ನ ಮ‍ಾತು ಮುಗಿಸಿ ಮುಂದೆ ನಡೆದು ಬಿಟ್ಟಳು...ಅವನ ಮತ್ತು ಇವಳ ಪರಿಶುದ್ಧ ಪ್ರೀತಿಗೆ ಇವಳೇ ಕೊಳ್ಳಿ ಇಟ್ಟಳು...

        

ಅಂದೇ ತನ್ನ ಸ್ವಂತ ಊರಿಗೆ ಬಂದಿಳಿದಿದ್ದಳು ... ಅಪ್ಪನಾ ಮುಂದೆ ತನ್ನ ನಗು ಮುಖದ ಮುಖವಾಡ ಹಾಕಿ ತಾನು ನಕ್ಕು ಬೇರೆಯವರನ್ನು ಕೂಡ ನಗಿಸುತ್ತಿದ್ದಳು ...


 ಒಂದು ದಿನ ಅವಳ ಅಪ್ಪ ತನ್ನ ಕೊನೆ ಆಸೆಯಂತೆ ಮದುವೆಯಾಗಲು ಸಿದ್ಧಳಾಗಿದ್ದಳು ...ಗಂಡು ಯಾರು ಎಂದು ಕೇಳದೆ ,ನೋಡದೇ   ಮದುವೆಗೆ ಒಪ್ಪಿಗೆ ನೀಡಿದ್ದಳು....

ಇವತ್ತೇ ಅವಳ  ನಿಶ್ಚಿತಾರ್ಥ ಅದು ಅವಳ ಮನೆಯಲ್ಲಿ ಅವಳಿಗೆ ದುಃಖ ಸಂತೋಷವಾದರೆ ಮಾತ್ರ ಸಮುದ್ರದ ತೀರವನ್ನು ನೋಡಲು ಬರುತ್ತಿದ್ದಳು ....ಇಂದು ಹಾಗೆ ಬಂದಿದ್ದಳು ...

"ಏನಮ್ಮ ಪುಟ್ಟಿ ಇಷ್ಟೊತ್ತು ಮಾಡೋದು, ಬರುವುದಕ್ಕೆ ?"

ಅಂತ ಸೋಮಶೇಖರ್ ಅವರು ಕೇಳಿದರು

"ಹಾಗೇನು ಇಲ್ಲ ಅಪ್ಪ , ಸ್ವಲ್ಪ ತಡ ಆಯಿತು ಅಷ್ಟೇ ,ಸಾರಿ" ಎಂದು ತನ್ನ ಎರಡೂ ಕೈಗಳನ್ನು ಕಿವಿಗೆ ಹಿಡಿದು ಕೇಳಿದಳು ಪಾವನಿ...

"ಆಯಿತು ಪುಟ್ಟ ನೀನು ಬೇಗ ಹೋಗಿ ರೆಡಿಯಾಗುವ ಅವರು ಬೇಗ ಬಂದು ಬಿಡುತ್ತಾರೆ ...." ಅಂತ ಹೇಳಿ ಅವಳನ್ನು ರೂಮ್ಗೆ ಕಳುಹಿಸಿದರು ....


ನನ್ನಿದು ಒಂದು ಜನ್ಮನಾ ನೀನು ಇಷ್ಟ ಪಟ್ಟ ಹಾಗೆ ನೀನ್ನು ಇಷ್ಟ ಪಟ್ಟ ಹುಡುಗನಿಗೆ ಮೋಸ ಮಾಡಿ ಇನ್ನೊಬ್ಬನ ಹುಡುಗನ ಜೀವನವನ್ನು ಹಾಳು ಮಾಡುತ್ತಿದ್ದೇಯಾ ...

ಛೇ.... ದಿಕ್ಕಾರವಿದೆ ಈ ನಿನ್ನ ಜನ್ಮಕ್ಕೆ ಎಂದು ಅವಳ ಅಂತರಾತ್ಮ ಛೀಮಾರಿ ಹಾಕುತ್ತಿತ್ತು ........


ನಗು ಮುಖದ ಮುಖವಾಡ ಹಾಕಿ ಕೂಳಿತ್ತಿದ್ದಳು ...ಕನ್ನಡಿ ಮುಂದೆ ಆದರೆ ಆ ಕನ್ನಡಿಯ ಬಿಂಬವು ಅವಳನ್ನು ಅಣಕಿಸುತ್ತಿತ್ತು ...

ಅಪ್ಪ ಅವಳನ್ನು ಬಂದು ಕರೆದುಕೊಂಡು ಹೊರನಡೆಯುವ ಮುನ್ನ ಕನ್ನಡಿ ಪಕ್ಕ ಇದ್ದ ಕಾಡಿಗೆಯನ್ನು ಗಲ್ಲದ ಮೇಲಿಟ್ಟು "ಮಹಾಲಕ್ಷ್ಮಿ ಹಾಗೆ ಕಾಣ್ತಿದ್ದೀಯಾ" ಅಂತ ದೃಷ್ಟಿ ತೆಗೆದರು .

ಅದರೇ ಅವಳ ಮನ ಅದಕ್ಕೂ ಛೀಮಾರಿ ಹಾಕುತ್ತಿತ್ತು ...


ಪುರೋಹಿತರು ಗಂಡು ಹೆಣ್ಣನ್ನು ಅಕ್ಕ ಪಕ್ಕ ಕೂರಿಸಿ ಕೆಲವು ಶಾಸ್ತ್ರಗಳನ್ನು ಮಾಡಿದರು ...ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಲು ಹೇಳಿದರೂ ಪುರೋಹಿತರು ಅವನು ಬದಲಾಯಿಸಿದ ಉಂಗುರವನ್ನು , ಅವನ ಕೈ ಸ್ಪರ್ಶದಿಂದ ಮುಖ ನೋಡಿದಳು ಒಂದೇ ಕ್ಷಣದಲ್ಲಿ ದಂಗಾಗಿ ಹೋದಳು, ನಿಂತ ನೆಲವೇ ಕುಸಿಯಲು ಶುರುವಾಯಿತು ಅವಳಿಗೆ ..ಜೀವನದಲ್ಲಿ ಮತ್ತೆ ಎಂದು ನೋಡಬಾರದೆಂದು ಬಯಸಿದ ವ್ಯಕ್ತಿ ಅವಳ ಮುಂದೆ ಇದ್ದ ಈಗ ... ಸೀದಾ ಏನನ್ನೂ ಪ್ರತಿಕ್ರಿಯಿಸದೇ ತನ್ನ ರೂಮ್ಗೆ ಓಡಿ ಹೋದಳು , ಎಲ್ಲರಿಗೂ ಕಣ್ಣಿನಲ್ಲಿ ಸಮಾಧಾನ ಹೇಳಿ ....ಅವನು ಅವಳನ್ನು ಹಿಂಬಾಲಿಸಿದ ... ಕಣ್ಣೀರು ತಾ ಮುಂದು ನಾ ಮುಂದು ಎಂದು ಭೂಮಿಯ ಒಡಲು ಸೇರಲು ಸಿದ್ಧವಾಗಿದ್ದವು.... ಅವನು ಅವಳ ಕಣ್ಣೀರನ್ನು ಅವನ ಕೈಗಳಿಂದ ಒರೆಸಿ ... "ಯಾಕೆ ಈಗ ಮತ್ತೆ ಅಳತ್ತಿದ್ದಿಯಾ ....ನಾನು ನಿನ್ನ ಮದುವೆಯಾಗೋದು ಇಷ್ಟ ಇಲ್ವಾ ...ಹೇಳು ಪಾವನಿ" ಎಂದು ಕೇಳಿದ ..ಅವನಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ನಿಂತಿದ್ದಳು..."ಸರಿ ಪಾವನಿ ,ನಿನ್ನ ಇಷ್ಟ ಪಾವನಿ ,ನಾನು ಎಲ್ಲರಿಗೂ ಹೇಳ್ತೀನಿ ನಿನಗೆ ಈ ಮದುವೆ ಇಷ್ಟ ಇಲ್ಲ...." ಅಂತ ಎಂದು ಹೇಳಿ ಹೊರನಡೆಯಲು ಮುಂದಾದ ಅವನ್ನು ಹಿಂದಿನಿಂದ ತಬ್ಬಿ "ಸಾರಿ ರೋಹಿತ್ ನಿನ್ನ ಬಿಟ್ಟು ಇದಕ್ಕೆ ನನ್ನ ಜೀವನದಲ್ಲಿ ಕಲ್ಪನೆ ಮಾಡೋಕ್ಕೂ ಸಾಧ್ಯವಿಲ್ಲ ಕಣೋ..." ಎಂದು ಬಿಕ್ಕಳಿಸಿ ಅತ್ತಳು ....ಮತ್ತೆ ಅವಳ ಕಣ್ಣಿರು ತಡೆದು ಹಾಕಿ "ನನಗೆ ಗೊತ್ತು ನನ್ನ ಹೃದಯದರಸಿ ಬಗ್ಗೆ ..ನಾನು ಹೃದಯ ಆದರೆ ನೀನು ಅದರ ಮಿಡಿತ ಕಣೇ ... ಅದರೂ ನಿನಗೆ ಪನಿಷ್ಮೆಂಟ್ ಇದೇ ಕಣೇ ನನ್ನ ಒಂಟಿ ಮಾಡಿ ಬಂದೆ ಅಲ್ಲವಾ ಅದಕ್ಕೆ  ....""ಎನ್ ಪನಿಶ್ಮೆಂಟ್ ಇದ್ರೂ ಓಕೆ ನನಗೆ" ಎಂದಳು ಪಾವನಿ "ಓ ಹೌದಾ ಬೇಗ ನನ್ನ ಮದುವೆ ಆಗಿ , ಮಕ್ಕಳಿಗೆ ತಾಯಿ ಆಗು " ಅಷ್ಟೇ ನನ್ನ ಪನಿಶ್ಮೆಂಟ್ ಎಂದು ತುಂಟತನದಿಂದ ಕಣ್ಣು ಹೊಡೆದ ಅವಳು ಹುಸಿಕೋಪದಿಂದ ಅವನಿಗೆ ಬೆನ್ನಿಗೆ ಹೊಡೆಯುತ್ತಿದ್ದಳು ಅಷ್ಟರಲ್ಲಿ ಹೊರಗಿನಿಂದ ಅವಳ ಅಪ್ಪನ ಧ್ವನಿ ಎಚ್ಚರವಾಗಿ ಹೊರ ನಡೆದು ಅವನ ಕೈಗೆ ಇವಳು ಉಂಗುರ ತೊಡಿಸಿದಳು ...

ಎಲ್ಲರಲ್ಲೂ ಸಂತಸದ ನಗು ತುಂಬಿತ್ತು ...


Rate this content
Log in

More kannada story from ಯಜ್ಞಸೇನಿ ಶ್ರೀಹರಿ

Similar kannada story from Drama