ನಿನ್ನೆ ಪ್ರೀತಿಸುವೆ ನನ್ನ ಒಲವೆ
ನಿನ್ನೆ ಪ್ರೀತಿಸುವೆ ನನ್ನ ಒಲವೆ
ಪರಿಚಯ ಹೇಗೆ ಯಾವಾಗ ಆಗುತ್ತೆ ಯಾರ ಜೊತೆ ಆಗುತ್ತೆ ಅಂತ ಹೇಳೋದು ತುಂಬಾ ಕಷ್ಟ ಪರಿಚಯವಾದ ಪ್ರತಿ ವ್ಯಕ್ತಿ ನಮ್ಮ ಜೀವನದಲ್ಲಿ ಒಂದು ಅಧ್ಯಾಯ ಅಥವಾ ನೆನಪಿನ ಪುಟಗಳು ಚಿತ್ರಿಸಲು ಸಾಧ್ಯವಿಲ್ಲ. ಕೆಲವೊಂದು ಪರಿಚಯ ಕೆಲ ಕ್ಷಣಕ್ಕೆ ಸೀಮಿತವಾಗಿರುತ್ತದೆ. ಇನ್ನು ಕೆಲ ಪರಿಚಯ ಜೀವನ ಪರ್ಯಂತ ಜೊತೆಯಾಗಿರುತ್ತೆ.
ಪರಿಚಯಗಳಲ್ಲಿ ಕೆಲವರ ಪರಿಚಯ ಜೀವನದ ದಿಕ್ಕನ್ನೇ ಬದಲಿಸಿ ಹೊಸದೇ ಅಧ್ಯಾಯ ಬಾಳಲ್ಲಿ ಬರೆಯುತ್ತೆ. ಪರಿಚಯ ಸ್ನೇಹವಾಗಿ ಚಿಗುರುವಾಗ ಅರಿವಿರದ ಪ್ರೀತಿಯ ಪುಟವನ್ನು ಮನವು ಪ್ರೇಮ ಖಾತೆಯನ್ನು ತೆರೆಯುವ ವರೆಗೂ ಸಾಗುವ ಪರಿಚಯ. ಮನದ ಬಾಗಿಲನ್ನು ತಟ್ಟಿ ಹೃದಯದ ಬಡಿತ ಮುಟ್ಟಿ ಪ್ರೀತಿಯ ಸೌಧವ ಕಟ್ಟಿ ಮೂರು ಗಂಟಿನ ಬಂಧನಕ್ಕೆ ತಲುಪುವ ಪರಿಚಯ.
ಮನಸು ಯಾರನ್ನು ಬಹು ಸುಲಭವಾಗಿ ಮನಸ್ಸಿಗೆ ಆಹ್ವಾನ ನೀಡುವುದಿಲ್ಲ. ಸ್ನೇಹ ಭಾವನೆಯ ಸಾಗರ ಭಾವನೆಯ ತಂತಿಯನ್ನು ಮೀಟಿ ಸ್ನೇಹದ ರಾಗವನ್ನು ಮನದಲ್ಲಿ ಮೂಡಿಸಿ ಬಾಳಲ್ಲಿ ಸಂಗೀತ ಸ್ವರವನ್ನು ಸುರಿಸಿ ಜೀವನಕ್ಕೆ ತಂದೆ ತಾಯಿಯ ಜೊತೆಯಲ್ಲಿ ಸ್ನೇಹ ಎಂಬ ಅಂಶ ಬಹು ಮುಖ್ಯ ಪಾತ್ರ ಎಂಬುದು ತಿಳಿಸಿ ಜೊತೆಯಲ್ಲಿ ಜೊತೆಯಾಗಿ ಕಷ್ಟ ಸಂತೋಷದಲ್ಲಿ ಸಮಪಾಲು ಪಡೆಯಲು ಸಿದ್ಧವಾಗುವ ಮುಗ್ದ ಮನಸಿನ ಸ್ನೇಹಕ್ಕೆ ಸೋಲುವ ಹೃದಯ.
ನನ್ನೆದೆಯ ಭಾವನೆಯ ಕೆರಳಿಸಿ ಸ್ನೇಹದ ಸಿಂಚನ ಬಾಳಲ್ಲಿ ಮೂಡಿಸಿ. ಬದುಕಲು ಪ್ರೇರೇಪಿಸಿ ಜೀವಕ್ಕೆ ಜೀವ ನೀಡುವ ಸ್ನೇಹವನ್ನು ನಿನ್ನಿಂದ ಕಂಡೆ. ಎಂದು ಕಾಣದ ಸ್ನೇಹದ ಸಿಹಿ ಭೋಜನ ಉಂಡೆ ಬಾಳುವ ಆಸೆಯನ್ನು ಮಗದೊಮ್ಮೆ ನಿನ್ನಿಂದ ಇಮ್ಮಡಿಯಾಯಿತು.
ಸ್ನೇಹ ಪ್ರೀತಿಯಾಗಿ ಮತ್ತಷ್ಟು ಆಸೆಯನ್ನು ನನ್ನ ಹೃದಯ ಜೋಳಿಗೆಯಲ್ಲಿ ಹಾಕಿ ನೀನೇ ನನ್ನ ಜೀವ ಎನ್ನುವ ಪದವನ್ನು ನಾಲಿಗೆಯ ಮೇಲ
ೆ ತಂದೆ. ಬಣ್ಣ ಬಣ್ಣದ ಚಿಟ್ಟೆಗಳು ಆಸೆಯ ರೆಕ್ಕೆಗಳಾಗಿ ನಿನ್ನಲ್ಲಿ ಆಸೆಯನ್ನು ಬಿಟ್ಟು ಹಾರಲು ಕೊಟ್ಟೆ.
ಪರಿಚಿತ ನೀನು ಅಂದು
ನನ್ನೊಲವಿನ ಇನಿಯನು ಇಂದು
ಪ್ರೀತಿಯ ದೇವರು ಎಂದೆಂದೂ
ನೀನೇ ನನ್ನ ಬಾಳ ಚರಣ ಇನ್ನು ಮುಂದು ಎಂದು
ನಿನ್ನ ಜೊತೆಯಲ್ಲಿ ಕಳೆದ ಪ್ರತಿ ಕ್ಷಣ ಹರುಷದ ಹೊನಲೇ ನನ್ನಲ್ಲಿ. ನಿನ್ನ ಮಾತೆ ನಾದ ಸ್ವರ ಕಿವಿಗೆ ತಂಪಿನ ಝೆಂಕರಿಸುವ ನದಿಯ ಸಪ್ಪಳ.
ನೀನಿರದೆ ನಾನಿಲ್ಲ ನನ್ನೊಲವೇ ಮಾತಿನಲ್ಲಿ ಹೇಳುವ ಸಾಲಲ್ಲ. ಮನದಲ್ಲಿ ಮೂಡಿದ ಅಕ್ಷರದ ರೂಪ ಪ್ರೀತಿಯ ಸ್ವರೂಪ.
ಎಷ್ಟೇ ಮಾತನ್ನು ಆಡಿದರು ಮನಕೆ ತಿರದ ಬಾಯಾರಿಕೆ, ಇನ್ನಷ್ಟು ನಿನ್ನ ನುಡಿಯನ್ನು ಆಲಿಸುವ ಹೆಬ್ಬಯಕೆ ನನ್ನ ಈ ಶ್ರವಣಗಳಿಗೆ, ಮಾತಿಗಿಂತ ವಾದವೇ ಹೆಚ್ಚು ನನ್ನಲ್ಲಿ ಅದರಲ್ಲಿ ನಿನ್ನ ಪ್ರೀತಿಯ ಹುಚ್ಚು ಹೆಚ್ಚು. ನಿನ್ನ ಮನಸಿಗೆ ಅದೆಷ್ಟೇ ಬಾರಿ ನೋವನ್ನು ನೀಡಿದರು ನಿನಗಿಂತ ಹೆಚ್ಚು ನೋವನ್ನು ನಾನೇ ಅನುಭವಿಸುವೆ.
ನಿನಗೆ ಕಿಂಚಿತ್ತು ನೋವನ್ನು ನೀಡಿದರು ಸಹಿಸದು ನನ್ನಿ ಮನ, ಒಮ್ಮೆ ಕ್ಷಮಿಸಿ ಮನ್ನಿಸು ನನ್ನೊಮ್ಮೆ ಓ ಒಲವೆ.
ಪ್ರೀತಿಸುವೆ ಪ್ರತಿ ನಿಮಿಷ ನಿನ್ನಲ್ಲಿ ನನ್ನನ್ನು ಕಂಡು ನನ್ನಲ್ಲಿ ನಿನ್ನನ್ನು ಕಂಡು. ಆರಾಧಿಸುವೆ ನಿನ್ನೆ ಒಲವಿನ ದೇವನೆಂದು.
ಪ್ರೀತಿಯ ಪರ್ವ ದಿನಕ್ಕೆ ಕಾಯುತಾ ಕುಳಿತಿರುವೆ.
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಗಾಗಿ ಅಲ್ಲದೆ ನನಗಾಗಿ ನನ್ನನ್ನೇ ಪ್ರೀತಿಸು ಇನ್ನೊಮ್ಮೆ ಆಗೊಮ್ಮೆ ಹೀಗೊಮ್ಮೆ ಮಗದೊಮ್ಮೆ ಮತ್ತೊಮ್ಮೆ.
ನಿನ್ನೆ ಪ್ರೀತಿಸುವೆ ನನ್ನ ಒಲವೆ...