STORYMIRROR

radheya kanasugalu

Inspirational Others Children

4  

radheya kanasugalu

Inspirational Others Children

ನಾನು ಗೃಹಿಣಿ

ನಾನು ಗೃಹಿಣಿ

2 mins
248


ಹೌದು ನನಗೆ ಪ್ಯಾಟೆಯವರಂಗೆ ಇಂಗ್ಲಿಸು ಮಾತಾಡಾಕೇ ಬರಾಕಿಲ್ಲಾ, ಅವರಂಗೆಯಾ ಚಂದ ಚಂದದ ಬಟ್ಟೆನೂ ಉಡಾಕೆ ಬರಾಕಿಲ್ಲಾ.. ಅವರು ಶಿಸ್ತಿನ ಸಿಪಾಯಿಯಂಗೆ ಇರಾವರು ನಾನು ಹೊಲಾ, ಗದ್ದೆ, ದನಾ, ಕರು ಅಂತಾ ಸಗಣಿ ಬಾಚೊಳು ನನಗೆ ಅವರಂಗೆಯಾ ಇರಾಕ ಬರಾಕಿಲ್ಲಾ. ನಾನು ಕಲತಿದ್ದೇ ಅತ್ತನೇ ತರಗತಿ ಗಂಟಾ. ಅವರ ಅಂಗೆ ನಯಾ ನಾಜುಕು ಬರಾಕಿಲ್ಲಾ. ಅವರು ಅವರ ಮಕ್ಕಳ್ಗೆ ಅದೇನೊ ಒಮ್ರಕ್ಕು, ಅಭ್ಯಾಸಾ ಏಳಿ ಕೊಡ್ತವರೆ... ನಮಗೆ ಮುದ್ದೆ ಮಾಡಿ ಆಕಾಕೆ ಟೆಮ್ ಇಲ್ಲಾ ಪಾಪಾ ಮಕ್ಕಳಿಗೆ ಇದೆಲ್ಲಾ ಎಂಗ್ ಏಳಿ.


ಒತ್ತಾರೆ ಬೇಗಾ ಏಳೊದು ಹಟ್ಟಿ ಗುಡಸೋದು, ನೆಲಾ ಸಾರಸೋದು, ಹೊಸ್ಲಿಗೆ ರಂಗೋಲಿ ಬಿಡೋದು, ಹಾಲು ಕರೇಯೊದು.. ಗಂಡಾ, ಮಕ್ಳು ಏಳೋದ್ರಾಗೆ ಬಿಸಿ ಬಿಸಿ ಅಡುಗೆ ಬೇಯ್ಸೊದು. ಎಂತದೆ ಕೆಲ್ಸಾ ಇದ್ರುವೆ ಮಕ್ಳ ಎದ್ದಮ್ಯಾಗೆ ಅವರ ಬೇಕು ಬ್ಯಾಡಾ ಎಲ್ಲಾ ನಾನೇಯಾ ನೋಡೊದು... ಅವರಿಗೆ ಸಾನಾ, ಪಾನಾ ಮಾಡ್ಸಿ ಒಗದಿರೋ ಬಟ್ಟೆ ಹಾಕಿ ಬಿಸಿ ಬಿಸಿ ಮುದ್ದೆ ಸಾರು ತಿನ್ಸಿ.. ಸಾಲೆ ಗಂಟಾ ಬಿಟ್ಟ ಬತ್ತಿವ್ನಿ... ಎಟೇ ಕೆಲ್ಸಾ ಇದ್ರೂ ಮಕ್ಳನ್ನ ಸಾಲೆಗೆ ಕಳ್ಸೊದು ತೆಪ್ಸಾಲ್ಲಾ. ಆಮೇಲೆ ಗಂಡಾ.. ಅತ್ತೆ ಮಾವಾ ಅಂತಾ ಎಲ್ಲಾ ಮುಗ್ಸಿ ದನಾ ಹೊಡ್ಕೊಂಡು ಗದ್ದೆ ತಾವಾ ಒಗೋದು. ಇಟೆಲ್ಲಾ ಕೆಲ್ಸಾ ಮಾಡಿದ್ರೂ ಸುಸ್ತೆ ಆಗಾಕಿಲ್ಲಾ... ಎಲ್ಲರೂ ಎಟ ಚಂದಾಗ ಇರತಾರೆ ನನಗೆ ಅಂಗಿರಾಕೆ ಬರಲ್ಲಾ, ಒಂದೊಂದಪ್ಪಾ ನನ್ನ ಹಿರಿಯನ (ಗಂಡ) ಮುಂದೆ ಏಳಿವ್ನಿ "ಎಲ್ಲರೂ ತಮ್ಮ ಮಕ್ಳಿಗೆ ಬೇಕಾದಂಗೆ ಇರತಾರೆ... ಇಂಗ್ಲಿಸ್ ಮಾತಾಡ್ತಾರೆ, ಅತ್ತೆ ಮಾವನ ಜತಿಗೆ ಅದೇನೊ ಪುಸ್ತಕ ಓದಿ ಏಳ್ತಾ ಕುತ್ಕೊತಾರೆ.. ಗಂಡನಿಗೆ ಬೇಕಾದಂಗೆ ಬಟ್ಟೆ ಆಕ್ತವರೆ ಆದ್ರೆ ನನಗೆ ಯಾವುದು ಬರಾಕೆ ಇಲ್ಲಾ ನೀವು ಇನ್ನೂ ಹೆಚ್ಚಗೆ ಕಲ್ತವ್ಳ್ನಾ ಮದ್ವೆ ಆಗ್ಬೇಕಿತ್ತು" ಅಂತಾ.



ಮಗಾ ಅತ್ತನೇ ತರಗತಿಲಿ ನಮ್ಮಳ್ಳಿಗೆ ಮೊದಲನೆ ನಂಬರ್ ಬಂದಾಗ ಸಾಲೆ ಒಳಗೆ ಮಗನ ಜೊತೆ ನಮಗೂ ಸಮ್ಮಾನ ಇಟ್ಕೊಂಡಿದ್ರೂ ಅವತ್ತುವೇ ಎಂಗ ಒಗ್ಬೇಕು ಅನ್ನೊದೆ ಗೊತ್ತಾಗಿಲ್ಲಾ. ನಾನು ಇನ್ನೂ ಸ್ವಲ್ಪಾ ಕಲ್ತೂ ಎಲ್ಲಾದ್ರಾಗುವೆ ಪರಿಪೂರ್ಣ ಆಗ್ಬೇಕಿತ್ತು ಅಂತಾ ಬೋ ಬೆಸರಾ ಆಗತೈತೆ. ಇಂಗೆ ಅಂತಾ ಮನೆಲಿ ಏಳ್ಕೊತಾನೆ ಇರತಿನಿ.


ಅದೇನೊ ಮೊನ್ನೇ  ಒತ್ತಾರೆ ಉಂಡು ಗಂಡ ಮಕ್ಳು ಪ್ಯಾಟೆತಾವಾ ಅವರೇ ಹೋದ್ರು ಸಂಜಿಗೆ ಬತ್ತಿವಿ ಅಡುಗೆ ಮಾಡಬ್ಯಾಡಾ ಅಂದ್ರೂ. ನನಗೂ ಬ್ಯಾಸರಾ ಆತು.. ನಂಗುವೆ ಪ್ಯಾಟೆಗೆ ಒಗೊ ಆಸೆ ಆದ್ರೆ ಯಾರು ಕೇಳೆ ಇಲ್ಲಾ... ನಾನು ಬೇಯ್ಸಿ ಹಾಕೊ ಮುದ್ದೆ ಸಾರು ತಿಂದು ಬ್ಯಾಸರ್ ಆಗೈತೆ ಅನ್ಸತ್ತೆ ಅದಕ್ಕೆ ಒರಗಡೆ ತಿನ್ಕೊಂಡು ಬರತಾರೆ ಅನ್ಸತ್ತೆ.. ಅತ್ತೆ ಮಾವಾನು ಒತ್ತಾರೆನೆ ಪಕ್ಕದಳ್ಳಿಗೆ ಮಗಳ ತಾವಾ ಓದ್ರೂ ಏನೋ ತರೋದೈತೆ ಅಂತಾ ನನಗೆ ಕರಿಲೆ ಇಲ್ಲಾ. ನಾನು ಹಟ್ಟಿ ಕೆಲ್ಸಾ ಮಾಡಿ ಗದ್ದೆ ತಾವಾ ಒಗಿ ಮನೆಗೆ ಬಂದ್ರೆ.. ಇದು ನಮ್ಮನೆನಾ ಅಂತಾ ಗಾಬ್ರಿ ಆತು, ಬಣ್ಣ ಬಣ್ಣದ ದೀಪಾ ಆಕವ್ರೆ ಒಳಗಡೆ ಗಂಡಾ ಮಕ್ಳು ಅತ್ತೆ ಮಾವಾ ಎಲ್ಲಾ ಅವ್ರೆ... ಗಂಡಾ ಬಂದವ್ನೆ ಮಹಿಳಾ ದಿನಾಚರಣೆ ಶುಭಾಶಯ ತಿಳಿಸಿದ್ರು ಜೊತೆಗೆ ಒಂದು ರೆಷ್ಮೇ ಸೀರೆ ಕೊಟ್ಟು ಉಟ್ಕೊಂಡ ಬಾ ಅಂದ್ರೂ. ನನಗೊ ಒಂದು ಅರ್ಥಾ ಆಗಿಲ್ಲಾ.. ಅಂಗೆ ಓಗಿ ಉಟ್ಕೊಂಡ ಬಂದೆ. ಅತ್ತೆ ಮಾವಾ ಒಂದು ಚಿನ್ನದ ಸರಾ ಕೊಟ್ರೂ ಮಕ್ಕಳೂ ಅದೇಂತದೊ ಕೇಕು ತಂದಿದ್ರೂ ಎಲ್ಲಾ ಸೇರಿ ಕತ್ತರಿಸಿ ತಿಂದ್ವಿ. ಮನೆಗೆ ಒರಗಿಂದಲೆ ಎಲ್ಲರಿಗೂ ಊಟಾ ತಂದಿದ್ರೂ ಊಟಾ ಆದಮ್ಯಾಗೆ ಎಲ್ಲರೂ ಒಂದು ಮಾತು ಹೇಳಿದ್ರೂ. 


"ನೀನು ಹೇಗಿದ್ರೂ ನಮಗೆ ಅದೇ ಸಾಕು ನಿನಗೆ ನೀನೆ ಸಾಟಿ... ಅದೇಂಗೆ ಒಬ್ಬಳೆ ಎಲ್ಲಾ ಹಟ್ಟಿ ಕೆಲ್ಸಾ, ಗದ್ದೆ ಕೆಲ್ಸಾ, ಅಡುಗೆ, ದನಕರುಗಳ ಕೆಲ್ಸಾ, ಮಕ್ಳ ಕೆಲ್ಸಾ ಅಂತಾ ಮಾಡ್ತಿಯಾ..?ನಿನಗೆ ಅಷ್ಟ ಶಕ್ತಿ ಇರೋಕ ಎಂಗ ಸಾಧ್ಯ...? ನೀನು ಸೀರೆಲೆ ತುಂಬಾ ಚೆನ್ನಾಗಿ ಕಾಣ್ತಿಯಾ, ಅಡುಗೆ ಅಂತು ಅಷ್ಟು ರುಚಿಯಾಗಿ ಮಾಡ್ತಿಯಾ. ಬೇರೆ ಯಾರು ಮಾಡೊಕ ಸಾಧ್ಯಾನೆ ಇಲ್ಲಾ.., ಅವ್ವಾ ನಮಗೆ ಅಭ್ಯಾಸ ನೀ ಏಳದಿದ್ರೂ ದಿನಾ ತೆಪ್ಪದೆ ಶಾಲೆಗೆ ಕಳಸ್ತಿದ್ದೆ, ಕರಕೊಂಡ ಹೋಗೊಕೆ ಬರತಿದ್ದೆ. ಅದರಿಂದಾನೇಯಾ ನಾನು ನಮ್ಮಳ್ಳಿಗೆ ಪಸ್ಟ ಬಂದಿದ್ದೂ. ಅವ್ವಾ ನೀನು ಹೇಗಿದ್ದಿಯೋ ಅದೇ ಸಾಕವ್ವೊ! ನೀನು ಪರಿಪೂರ್ಣಳಿದ್ದಿಯೊ ಇಲ್ವೊ ಅದು ಬ್ಯಾಡಾ.. ಆದ್ರೆ ನೀ ಇಂಗೆ ಇರು ನಮಗೆ ಅದೇ ಸಾಕು". ಅಂತ ಮಗಳು, ಮಗ, ಗಂಡ ಎಲ್ಲಾರುವೆ ಅಂದ್ರು.

ಇವರ ಮಾತಗಳೇ ನನಗೆ ನೂರಾನೆ ಬಲಾಬಂದಂಗಾಯ್ತು..

ನಾನೂ ಪರಿಪೂರ್ಣಳಲ್ಲದಿರಬಹುದು....

ಆದರೆ ನಾನು ಹೇಗಿದ್ದೇನೊ ಅದೇ ಸಾಕು.





ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Inspirational