kaveri p u

Drama Thriller Others

4  

kaveri p u

Drama Thriller Others

ಮುಂಗಾರು ಮಳೆ

ಮುಂಗಾರು ಮಳೆ

1 min
568


ನಾನ್ ಸ್ಟಾಪ್ ನವೆಂಬರ್ ಮಧ್ಯಂತರ ಹಂತ


ಈ ಸಿನಿಮಾದಲ್ಲಿ ನಾಯಕ ಒಂದು ಮೊಲವನ್ನು ಸಾಕಿರುತ್ತಾನೆ. ಅದೇ "ದೇವದಾಸ".

ಪ್ರೀತಮ್ ಪ್ರೀತಿಸಿದ ಹುಡುಗಿಯು ಸಿಗುವುದಿಲ್ಲ, ಪ್ರೀತಮ್ ಪ್ರೀತಿಯು ಸಾಯತ್ತೆ , ದೇವದಾಸ ಕೂಡ ಸಾಯುತ್ತಾನೆ.

ಈ ದೃಶ್ಯವನ್ನು ಬದಲಿಸುವುದಾದರೆ,


ನಂದಿನಿ : ಪ್ರೀತಮ್, ನಿನ್ನ ದೇವದಾಸ್ ಯಾಕೋ ಈಗೀಗ ತುಂಬಾ ಮoಕಾಗಿ ಇರತ್ತೆ ಅಲ್ವಾ?


ಪ್ರೀತಮ್ : ನನ್ನ ಹುಡುಗಿ ನನ್ನ ಬಿಟ್ಟು ಹೋಗ್ತಿರೋದಕ್ಕೆ ನನಗಿಂತ ಹೆಚ್ಚು ದುಃಖ ನನ್ನ ದೇವದಾಸನಿಗೆ ಆಗಿದೆ ನಂದಿನಿ.


ನಂದಿನಿ : ಮತ್ತೇ ಮತ್ತೇ ಅದೇ ವಿಷಯಾನೇ ಮಾತಾಡ್ತಿಯಲ್ಲೋ ಪ್ರೀತಮ್.


ಪ್ರೀತಮ್ : ಹೌದು ನಂದಿನಿ. ನನ್ನ ಹುಡುಗಿಗೆ ಕಟ್ಟೋ ತಾಳಿನ ದೇವದಾಸೇ ಸೆಲೆಕ್ಟ್ ಮಾಡಿರೋದು. ನಾನು ಕೂಸು ಹುಟ್ಟೋ ಮೊದಲೇ ಕುಲಾವಿ ಹೊಲಿಸೋ ತರ ನನ್ನ ಹುಡುಗಿಗೆ ತಾಳಿನೂ ತಗೊಂಡೆ, ಅದನ್ನೇ ಈ ದೇವದಾಸ್ ಸೆಲೆಕ್ಟ್ ಮಾಡಿದ್ದು.

ನೋಡು ಬೇಕಾದ್ರೆ.


ನಂದಿನಿ : (ತಾಳಿ ನೋಡುತ್ತಾ, ಅದರಲ್ಲಿ P ಮತ್ತೇ N ಅಕ್ಷರಗಳನ್ನು ನೋಡಿ ) ಪ್ರೀತಮ್ ನೀನು ನನ್ನನ್ನ ಇಷ್ಟೊಂದು ಪ್ರೀತಿ ಮಾಡ್ತಿಯಾ ಅಂತ ಅನ್ಕೊಂಡಿರ್ಲಿಲ್ಲ ಕಣೋ. ಅದೇನೇ ಆಗಲಿ ನಮ್ಮ ಅಪ್ಪಾ ಅಮ್ಮನ ಮುಂದೆ ನಮ್ಮ ಪ್ರೀತಿ ಬಗ್ಗೆ ಹೇಳಿ ನಾನ್ ಅವ್ರನ್ನ ಒಪ್ಪಿಸ್ತಿನಿ. ನಿನಗಿಂತ ಒಳ್ಳೆ ಹುಡುಗ ನಂಗೇಲ್ಲೋ ಸಿಗ್ತಾನೆ? ಐ ಲವ್ ಯು ಪ್ರೀತು. ಐ ಲವ್ ಯು ದೇವದಾಸ್

 ಪ್ರೀತಮ್, ದೇವದಾಸ್ ಇಬ್ಬರೂ ಸುರಿವ ಮಳೆಯಲ್ಲಿ, ಪ್ರೀತಿ ಸಿಕ್ಕಿದ ಖುಷಿಯಲ್ಲಿ ನೆನೆಯುತ್ತಾರೆ, ಅವರೊಂದಿಗೆ ನಂದಿನಿಯು ಸೇರಿಕೊಳ್ಳುತ್ತಾಳೆ.


Rate this content
Log in

Similar kannada story from Drama