ಮನದಾಳದ ಮಾತು ಮಧುರ ❤️..
ಮನದಾಳದ ಮಾತು ಮಧುರ ❤️..
ಬಾಲ್ಕನಿಯಲ್ಲಿ ಕುಳಿತು ಆಗಸ ದಿಟ್ಟಿಸುತ್ತ ಇದ್ದ ವಿಜಯ್... ಕೈಯಲ್ಲೊಂದು ಡೈರಿ ಹಿಡಿದು ಗಿಚಲು ಶುರು ಮಾಡಿದ.....
"ಹೇಳಲು ಹೋದರೆ ಅದೆಷ್ಟೋ ಮಾತು ಮನದ ಆಳದಲ್ಲಿ ಬೇರುರಿದೆ ಎಂದರು ತಪ್ಪಾಗಲಾರದು.. ನನ್ನ ಮನಸ್ಸಿನಲ್ಲಿ ಕುಡಾ ಅಂತಹ ಹಲವಾರು ಮಾತುಗಳು...
ಎಲ್ಲ ಮನುಷ್ಯನಿಗೆ ಕುಡಾ ಒಂದು ವೀಕ್ ಪಾಯಿಂಟ್ ಅನ್ನೋದು ಬರುತ್ತೆ ಜೀವನದಲ್ಲಿ. ಅಂತ ಸಮಯದಲ್ಲಿ ನಮ್ಮವರು ಅಂತ ಯಾರಾದರೂ ಜೊತೆಗಿದ್ದರೆ ಸಿಗುವ ಧೈರ್ಯ ಬೇರೆಯದ್ದೆ...
ಹೀಗೆ ಮೂರು ವರ್ಷದ ಹಿಂದೆ ನಾನು ಹಾಸ್ಪಿಟಲ್ ಅಲ್ಲಿದೆ.. ಟ್ಯೂಮರ್ ಅನ್ನು ಕಾಯಿಲೆ.. ಬೆನ್ನಿನ ಶಕ್ತಿಯೇ ಕಸಿದುಕೊಂಡಂತ ಅನುಭವ...
ಸರ್ಜರಿ ಆದ ನಾಲ್ಕು ದಿನ ಬೆಡ್ ಇಂದ ಒಂದಿಂಚು ಕದಲದೇ ಇದ್ದಾಗ ಏನೋ ಒಂದು ರೀತಿ ಭಯ.. ಡಾಕ್ಟರ್ ಬಂದು ನನ್ನ ಕಾಲು ಬೆನ್ನು ಟೆಸ್ಟ್ ಮಾಡಿ. 'ಸಾರಿ ವಿಜಯ್ ನಿಮ್ಮ ಕಾಲಿನ ಶಕ್ತಿ ಹೋಗಿದ್ದೆ' ಎಂದು ಡಾಕ್ಟರ್ ಹೇಳಿದಾಗ ನನಗೆ ಆಕಾಶ ಕಳಚಿ ಬಿದ್ದ ಅನುಭವ...
'ಮುಂದೇನು ಡಾಕ್ಟರ್ ಟ್ರೀಟ್ಮೆಂಟ್ ಏನು' ಎಂದು ಕೇಳಿದ್ದು ಮಾತ್ರ ನನ್ನ ಪ್ರೀತಿ ಮಾಡಿದ ಹುಡುಗಿ ಅವಳೇ ನನ್ನ ಜೀವನದ ದೇವತೆ ದೃಷ್ಟಿ...
' ನೋಡೋಣ ಕಿಮೋಥೆರಪಿ ಮತ್ತೆ ರೇಡಿಯೇಶನ್ ಆಗ್ಲಿ, ಕಾಲು ಬರೋ ಚಾನ್ಸಸ್ ಇದೆ, ಯಾವುದಕ್ಕೂ ಧೈರ್ಯ ಬಿಡಬೇಡಿ ' ಎಂದು ಡಾಕ್ಟರ್ ಹೇಳಿ ಹೋದರೆ ನನಗಂತೂ ಜೀವವೇ ಬೇಡ ಎನ್ನುವಷ್ಟು ಬೇಸರ..
' ದೃಷ್ಟಿ ಇಲ್ಲಿಂದ ಹೊರಟು ಹೋಗು. ನನ್ನಂಥವನ ಜೊತೆ ನೀನೇನು ಜೀವನ ಮಾಡ್ತೀಯಾ. ಸುಮ್ಮನೆ ನಿನ್ನ ಲೈಫ್ ಕೂಡ ಹಾಳಾಗುತ್ತೆ. ಇನ್ನು ಮದುವೆ ಆಗಿಲ್ಲ ಜಸ್ಟ್ ಎಂಗೇಜ್ಮೆಂಟ್ ತಾನೇ, ಕ್ಯಾನ್ಸೆಲ್ ಮಾಡಿಕೊಂಡು ಯಾರಾದರೂ ಬೇರೆ ಹುಡುಗನ ನೋಡಿ ಮದುವೆ ಆಗು. ಆಗ ನಿನ್ ಲೈಫ್ ಕೂಡ ಸೆಟಲ್ ಆಗುತ್ತೆ.' ಅಂತ ನಾನು ಕಣ್ಣೀರು ತುಂಬಿಕೊಂಡು ಹೇಳಿದರೆ ದೃಷ್ಟಿ ಕಣ್ಣಲ್ಲಿ ಮುಗ್ದ ನಗು..
' ವಿಜಿ, ನಿನಗೆ ಆಪರೇಷನ್ ಮಾಡಿದ್ದು ಬೆನ್ನಿಗಾ ಇಲ್ಲ ತಲೆಗಾ, ಹುಚ್ಚನ ಹಾಗೆ ಏನೇನೋ ಮಾತಾಡ್ತಾ ಇದ್ದೀಯಾ. ನಿಜಕ್ಕೂ ಎರಡು ಮೂತಿ ಮೇಲೆ ಕೊಟ್ರೆ ಎಲ್ಲ ಸರಿಯಾಗುತ್ತೋ ಏನೋ. ಆದ್ರೆ ಏನು ಮಾಡೋದು ನೀನೇ ಪೇಷಂಟ್ ಆಗಿದ್ಯಾ ಈಗ ಹೊಡುದ್ರೆ ಮತ್ತೆ ನಿನ್ನ ಅಮ್ಮ ನನಗೆ ಬಾಸುಂಡೆ ಬರೋ ರೀತಿ ಹೊಡೀತಾರೆ.. ಸುಮ್ನೆ ಮಲ್ಕೊಂಡು ರೆಸ್ಟ್ ಮಾಡು' ಎಂದು ನನ್ನ ಮೇಲೆ ರೇಗಿ ನನ್ನನ್ನು ಮಲಗಿಸಿದಳು ಅವಳು..
ಅವಳ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯೋದು ನನಗೆ ಅವತ್ತಿನ ಮಟ್ಟಿಗೆ ತುಸು ಕಷ್ಟವೇ.. ಕಾಲಿನಲ್ಲಿ ಶಕ್ತಿ ಇಲ್ಲ ಎಂದು ಕೇಳಿ ಆಗಲೇ ನನ್ನ ಪ್ರಪಂಚವೇ ಮುಳುಗಿ ಹೋದ ಅನುಭವ ನನಗೆ. ನನ್ನಿಂದ ದೃಷ್ಟಿ ಜೀವನ ಹಾಳಾದರೆ ಏನು ಭಯ ಇನ್ನೊಂದು ಕಡೆ. ಅದಕ್ಕೆನೇ ತಡ ಮಾಡದೆ ಅವಳಿಗೆ ನನ್ನಿಂದ ಹೋಗುವಂತೆ ಮನವಿ ಇಟ್ಟಿದ್ದೆ.. ಆದರೆ ಅವಳು ಸುತರಾಮ್ ಒಪ್ಪದೇ ನನ್ನ ಜೊತೆಗೆ ಇದ್ದಳು..
ದೃಷ್ಟಿ ನಾನು ಚಿಕ್ಕವಯಸ್ಸಿನಿಂದ ಪ್ರೀತಿ ಮಾಡಿದ ಮುಗ್ಧ ಮನಸ್ಸಿನ ಹೆಣ್ಣು. ನನಗೆ ಬೆನ್ನು ನೋವು ಶುರುವಾದಾಗ ಮೊದಲು ಹೇಳಿದ್ದು ಅವಳಿಗೆ. ಅವಳೇ ನನ್ನನ್ನು ದೊಡ್ಡ ಹಾಸ್ಪಿಟಲ್ಗೆ ಕರ್ಕೊಂಡು ಬಂದು ಚೆಕಪ್ ಕುಡಾ ಮಾಡಿಸಿದ್ದು.. ಆಗಲೇ ಡಾಕ್ಟರ್ ನನಗೆ ಬೆನ್ನಿನಲ್ಲಿ ಟ್ಯೂಮರ್ ಅನ್ನೋ ಕಾಯಿಲೆ ಅಂತ ಹೇಳಿದ್ದು. ಅವರ ಮಾತು ಕೇಳಿ ಕುಸಿದು ಹೋಗಿದ್ದೆ ನಾನು..
ಆದರೂ ಆ ಕ್ಷಣ ನನ್ನ ಕೈ ಹಿಡಿದು ನಿಂತಿದ್ದು ನನ್ನ ದೃಷ್ಟಿ. 'ಏನು ಆಗಲ್ಲ ವಿಜಿ, ನಾನಿದ್ದೀನಿ ತಾನೇ ಸರ್ಜರಿ ಮಾಡಿಸಿಕೊ ಎಲ್ಲಾ ಕಮ್ಮಿಯಾಗುತ್ತೆ' ಎಂದು ಧೈರ್ಯ ಹೇಳಿ ನನ್ನನ್ನ ಹಾಸ್ಪಿಟಲ್ ಗೆ ಕರೆದುಕೊಂಡು ಬಂದದ್ದು ಅವಳೇ..
ಸರ್ಜರಿಯಾದ ಮೇಲೆ ಪೂರ್ತಿಯಾಗಿ ಹುಷಾರಾಗ್ತೀನಿ ನನ್ನವಳು ಜೊತೆ ಮದುವೆ ಆಗಿ ಆರಾಮಾಗಿ ಇರಬಹುದು ಅನ್ನೋ ಆಸೆ ಇತ್ತು. ಆದರೆ ಈ ಟ್ಯೂಮರ್ ಅನ್ನೋ ಕಾಯಿಲೆ ಹೋಗುವಾಗ ನನ್ನ ಕಾಲು ಕೆಳಗಿನ ಶಕ್ತಿಯನ್ನು ತಕ್ಕೊಂಡು ಹೋಗಿತ್ತು..
ಅದಾದ ನಂತರ ಒಂದುವರೆ ಎರಡು ವರ್ಷ ಬರಿ ಟ್ರೀಟ್ಮೆಂಟ್ ಅಲ್ಲಿ ಜೀವನ ಮಾಡಿದ್ದು ನಾನು.. ವೀಲ್ ಚೇರ್ ಮೇಲೆ ಓಡಾಟ ಬಾಕಿ ಸಮಯ ಬೆಡ್ ಮೇಲೆ ಮಲಗಿರೋದು.. ಅದೆಷ್ಟು ದಿನ ಹೀಗೆ ಇದ್ದವನನ್ನ ಒಂದಿಂಚು ಬೇಸರಿಸದೆ ನೋಡಿಕೊಂಡಿದ್ದು ದೃಷ್ಟಿ.. ನನ್ನ ಜೀವನದಲ್ಲಿ ಏನೇ ಆದರೂ ನನ್ನ ಮೇಲಿನ ಪ್ರೀತಿ ಕಡಿಮೆ ಮಾಡಿಕೊಳ್ಳದೆ ಕಾಳಜಿ ಮಾಡಿದೆ ಕೈಗಳು ಅವಳದು..
ಅವಳು ಹರಕೆ ಹೊತ್ತ ದೇವರುಗಳು ಎಷ್ಟು. ಆದರೆ ದೇವರು ಅವಳ ಕೈಬಿಡಲಿಲ್ಲ. ಎರಡು ವರ್ಷ ಸತತವಾಗಿ ರೇಡಿಯೇಷನ್ ಕಿಮೊಥೆರಫಿ ತೆಗೆದುಕೊಂಡ ನಂತರ ನಾನು ಚೇತರಿಸಿಕೊಂಡಿದ್ದೆ.. ಒಂದು ವರ್ಷದಲ್ಲಿ ಪೂರ್ತಿಯಾಗಿ ನಡೆಯಲು ಅಭ್ಯಾಸ ಮಾಡಿಕೊಂಡಿದ್ದೆ.. ಬೆನ್ನಿಗೆ ಬೆಲ್ಟ್ ಕೈಗೆ ವಾಕಿಂಗ್ ಸ್ಟಿಕ್ ಹಿಡಿದು ನಡೆಯುತ್ತಿದ್ದರು, ನಡೆಯುತ್ತಿದ್ದೇನೆ ಎನ್ನುವ ಖುಷಿಯಂತೂ ಇದೆ..
ನನ್ನ ಜೀವನದ ದೇವತೆಗೆ ಎಷ್ಟೇ ಥ್ಯಾಂಕ್ಸ್ ಹೇಳಿದರು ಕಡಿಮೆ. ದೃಷ್ಟಿ ನನ್ನ ಜೀವನಕ್ಕೆ ಬೆಳಕಾಗಿ ನಿಂತಳು.." ಎಂದಿಷ್ಟು ಬರೆದವ ನಗುತ್ತಾ ಡೈರಿ ಮುಚ್ಚಿದ..
" ವಿಜಿ ರೆಡಿ ಅದ್ಯ ನೀನು. ಹೇಳಿದ್ದೆ ಅಲ್ವಾ ಇವತ್ತು ಪಾರ್ಕ್ ಗೆ ವಾಕಿಂಗ್ ಗೆ ಕರ್ಕೊಂಡು ಹೋಗ್ತೀನಿ ಅಂತ. ಇನ್ನು ಇಲ್ಲಿ ಕೂತು ಕವಿ ರೀತಿ ಅದೇನು ಬರಿತಾ ಇದ್ಯಾ. " ಎಂದು ಅವನ ಕಿವಿ ಹಿಂಡಿದಳು ದೃಷ್ಟಿ..
" ಏನೋ ನನ್ನ ಮನದಾಳದ ಮಾತು ಬರೀತಾ ಇದ್ದೆ ನಿನಗೆ ಏನು.. ಈಗ ಏನು ಹೊರಡಬೇಕು ತಾನೆ ಬಾ ಹೋಗೋಣ." ಒಂದು ತನ್ನ ವಾಕಿಂಗ್ ಸ್ಟಿಕ್ ಹಿಡಿದು ಎದ್ದು ನಿಂತ ವಿಜಿ. ಅವನ ಕೈಯಿಂದ ಪಟ್ಟನೆ ವಾಕಿಂಗ್ ಸ್ಟಿಕ್ ಕಸಿದುಕೊಂಡಳು..
" ನಾನಿರುವಾಗ ನನ್ ವಿಜಿಗೆ ವಾಕಿಂಗ್ ಸ್ಟಿಕ್ ಅಗತ್ಯ ಏನಿದೆ ಬಾ.ವಿಜಿ ನಾನ್ ಕರ್ಕೊಂಡು ಹೋಗ್ತೀನಿ. " ಎಂದು ಅವನ ಕೈ ತೆಗೆದು ತನ್ನ ಹೆಗಲಿಗೆ ಹಾಕಿ ಕರೆದುಕೊಂಡು ಹೊರಟಳು ಅವಳು.....
ಹೇಗಿತ್ತು ಕಥೆ.. ಚೆನ್ನಗಿತ್ತಾ... ಹೀಗೆ ಬರೆಯಬೇಕು ಅನಿಸಿತು ಬರೆದೆ. ಇಷ್ಟ ಆಯ್ತಾ?
ಇಂತಿ ನಿಮ್ಮ
ಕೃಷ್ಣ. 💙

