Hurry up! before its gone. Grab the BESTSELLERS now.
Hurry up! before its gone. Grab the BESTSELLERS now.

Revati Patil

Classics Inspirational Others


4  

Revati Patil

Classics Inspirational Others


ಮಮತಾಮಯಿ 9

ಮಮತಾಮಯಿ 9

2 mins 130 2 mins 130

(8ನೇ ಭಾಗದಲ್ಲಿ ಸೀತಾಳಿಗೆ ಮೂರನೇ ಮಗು ಹೆಣ್ಣಾಗುವ ಸಾಧ್ಯತೆಯಿದ್ದು, ನಾಲ್ಕನೇ ಮಗು ಖಂಡಿತವಾಗಿಯೂ ಗಂಡೇ ಆಗುವುದೆಂದು ಹಾಗಾಗಿ ಈ ಮಗುವನ್ನು ತೆಗೆಸುವಂತೆ ಜೋಯಿಸರೊಬ್ಬರು ಸೋಮಣ್ಣನ ಮನೆಯವರಿಗೆ ಹೇಳಿರುತ್ತಾರೆ, ಅದರ ಮುಂದುವರೆದ ಭಾಗವಿದು )


ಮನೆಯವರ ಮೂರ್ಖತನಕ್ಕೆ ರೋಸಿ ಹೋಗಿದ್ದ ಸೀತಾ ಏನೂ ಹೇಳದೆ ಮೌನಕ್ಕೆ ಶರಣಾಗಿದ್ದಳು. ಆರತಿಗೊಂದು, ಕೀರುತಿಗೊಂದು ಎನ್ನುವಂತೆ ದುರ್ಗಾ, ದೀಪ ಇಬ್ಬರೇ ಮಕ್ಕಳು ಸಾಕೆಂದು ಸೀತಾ ಎಷ್ಟೇ ಹೇಳಿದರೂ ಮನೆಯವರು ಮಾತ್ರ ಗಂಡಿನ ಹುಚ್ಚಾಟ ನಿಲ್ಲಿಸಲಿಲ್ಲ. ಈ ಸಲವಂತೂ ಸೀತಾಳ ಮನಸ್ಸಿಗೆ ವಿರುದ್ಧವಾಗಿ ಅವಳಿಗೆ ಗರ್ಭಪಾತವಾಗುವಂತೆ ಮಾಡಿಯೇ ಬಿಟ್ಟಿದ್ದರು ಮನೆಯವರು. ಅವಳಾಗಲೇ ಅರ್ಧ ಹೆಣವಾಗಿದ್ದಳು. ತಳ ಬುಡವಿಲ್ಲದ ಡೋಂಗಿಯ ಮಾತು ಕೇಳುತ್ತಿರುವ ತನ್ನ ಅತ್ತೆ, ಮಾವ, ಗಂಡನ ಬಗ್ಗೆ ಅಸಹನೆಯೂ ಮೂಡಿತು. ತಾನಾಗಲೇ ಅರ್ಧ ಕೃಷವಾಗಿದ್ದಕ್ಕೆ ಮುಂದೆ ತನ್ನ ದುರ್ಗಾ, ದೀಪಾಳ ಜೀವನ ಹೇಗೆಂದು ಯೋಚಿಸಿ ಇನ್ನಷ್ಟು ಹೈರಾಣಾಗಿದ್ದಳು ಸೀತಾ. ಇತ್ತ

ಸೋಮಣ್ಣ ಮಾತ್ರ ತನ್ನ ಹೆಂಡತಿಯ ಆರೋಗ್ಯದ ಬಗ್ಗೆ ಕಿಂಚಿತ್ತೂ ಗಮನ ನೀಡದೆ ಮತ್ತೊಂದು ಹೆಣ್ಣು ಮಗುವಿನ ಮುಖ ನೋಡುವ ಚಿಂತೆ (?) ತಪ್ಪಿತಲ್ಲ ಎಂದು ಗೆದ್ದವನಂತೆ ಬೀಗುತ್ತಿದ್ದ.


ಹೆಣ್ಣಿನ ಜೀವನವೇ ಇಷ್ಟು. ಅವಳಿಂದಲೇ ಆಗುವ ಕೆಲಸಗಳಿಗೆ ಅವಳ ಅನುಮತಿ ಪಡೆಯದ ಹುಂಬ ಜನರೊಂದಿಗೆ ಏಗುವ ಕರ್ಮ ಅವಳದು.


ಸೀತಾ ಮೂರನೇ ಮಗುವಿನ ಗರ್ಭಪಾತ ಆದಾಗಿನಿಂದ ತುಂಬಾ ಮಂಕಾಗಿದ್ದಳು. ರಾತ್ರಿ ಮಲಗಿದಾಗೆಲ್ಲ ರುಂಡ, ಮುಂಡ ಬೆಳೆಯದ ಅರ್ಧ0ಭರ್ದ ದೇಹವೊಂದು "ಅಮ್ಮ ನನ್ನನ್ನೇಕೆ ಕೊಂದೆ?" ಎಂದು ಒಂದೇ ಸಮನೆ ಸೀತಾಳನ್ನು ಪ್ರಶ್ನಿಸುವಂತೆ ಭಾಸವಾಗುತ್ತಿತ್ತು. ಪ್ರತೀ ರಾತ್ರಿಯು ಕೊರಗುತ್ತಿದ್ದಳು ಆ ತಾಯಿ. ಕೊಂದವರೆಲ್ಲರೂ ಸುಖವಾದ ನಿದ್ದೆಯಲ್ಲಿ ಮುಳುಗಿದ್ದರೆ, ಎಷ್ಟೇ ಪ್ರಯತ್ನಿಸಿದರೂ ಉಳಿಸಿಕೊಳ್ಳಲಾಗದೆ ಸೋತ, ಸೀತಾ ಮಾತ್ರ ದಿನವೂ ಆ ಪಶ್ಚಾತಾಪದಿಂದ ಸಾಯುತ್ತಿದ್ದಳು. ಹೀಗೆ ಮೂರು ನಾಲ್ಕು ತಿಂಗಳು ಕಳೆದರೂ ಸೀತಾ ಮಾತ್ರ ಮೊದಲಿನ ನಗುವೆಂಬ ಆಭರಣವನ್ನು ಮುಖದ ಮೇಲೆ ಧರಿಸಲೇ ಇಲ್ಲ. ಅವಳಿಗೆ ಜೀವನ ಶೂನ್ಯವೆನಿಸಿತ್ತು.ಆದರೆ ಮನೆಯವರ ಗಂಡು ಮಗುವಿನ ವ್ಯಾಮೋಹ ಮಾತ್ರ ನಿಲ್ಲಲಿಲ್ಲ. ಈ ಬಾರಿ ಸೀತಾಳ ಅತ್ತೆಯೊಂದು ಉಪಾಯ ಮಾಡಿದ್ದರು. ತನಗೆ ಸಾವು ಹತ್ತಿರವಾಗುತ್ತಿದೆ ಸಾಯುವುದರೊಳಗೆ ಗಂಡು ಮೊಮ್ಮಗುವನ್ನು ನೋಡಿ ಸತ್ತರೆ ತನ್ನ ಜನ್ಮಕ್ಕೆ ಮುಕ್ತಿ ಸಿಗುತ್ತದೆ ಎಂದೆಲ್ಲ ನಾಟಕ ಶುರು ಮಾಡಿದ್ದರು. ಸೀತಾಳಿಗೆ ಇವೆಲ್ಲ ಅರ್ಥವಾದರೂ ಗಂಡು ಮಗುವನ್ನೊಮ್ಮೆ ಹೆತ್ತರೆ ತನ್ನನ್ನು ತನ್ನ ಪಾಡಿಗೆ ಬಿಡುತ್ತಾರೆ ಎನ್ನುವ ನೆಮ್ಮದಿಗಾಗಿ ಒಪ್ಪಿಗೆ ನೀಡಿದ್ದಳು.


ಆದರೂ ಕೊನೆಯ ಪ್ರಯತ್ನ ಎನ್ನುವಂತೆ ಸೀತಾ ತನ್ನ ಗಂಡನಿಗೆ ಮನವೊಲಿಸಲು ಪ್ರಯತ್ನಿಸಿದಳು.


"ರೀ ಮನೆಯಲ್ಲಿ ಈಗಲೇ ಕೂತು ತಿನ್ನುವ ಕೈಗಳು ಹನ್ನೆರಡಿವೆ ಆದರೆ ದುಡಿಯುವ ಕೈಗಳು ನಿಮ್ಮವೆರಡೇ! ಮುಂದೆ ಹುಟ್ಟುವ ಮಗು ಗಂಡಾಗಲಿ, ಹೆಣ್ಣಾಗಲಿ ಆಗಲೂ ನೀವೇ ದುಡಿಯಬೇಕು ಅಲ್ವಾ? ಅದಕ್ಕೆ ಇರುವುದರಲ್ಲಿ ಹೇಗೋ ನೆಮ್ಮದಿಯಾಗಿದ್ದೇವೆ. ದುರ್ಗಾ, ದೀಪಾಳನ್ನೇ ಚೆನ್ನಾಗಿ ಓದಿಸಿದರೆ, ಅವರೇ ನಾಳೆ ದೊಡ್ಡ ಅಧಿಕಾರಿಗಳಾದರೂ ಆಗುತ್ತಾರೆ. ಕಡೇಪಕ್ಷ ತಮ್ಮ ಕಾಲಮೇಲೆ ತಾವು ನಿಲ್ಲುತ್ತಾರೆ. ಮತ್ತ್ಯಾಕೆ ಇನ್ನೊಂದು ಮಗುವಿನ ಆಸೆ? ನನ್ನ ದೇಹಾರೋಗ್ಯದ ಬಗ್ಗೆಯೂ ಸ್ವಲ್ಪ ಗಮನ ಕೊಡಿ, ನಮಗಿನ್ನೊಂದು ಮಗು ಬೇಡಾ ರೀ, ಅಲ್ದೇ ಹುಟ್ಟೋ ಮಗು ಗಂಡೇ ಆಗತ್ತೆ ಅಂತ ಹೇಳೋಕೆ ಸಾಧ್ಯ ಇಲ್ಲ "


"ಏನೇ ಆಗಿರೋದು ನಿನ್ನ ಆರೋಗ್ಯಕ್ಕೆ? ನಮ್ಮ ಅಜ್ಜಿ ಹತ್ತು-ಹದಿನಾರು ಮಕ್ಕಳನ್ನು ಹೆತ್ತವರೇ ಈ ತರ ಮಾತಾಡಿಲ್ಲ ನಿನಗೇಷ್ಟೇ ಸೊಕ್ಕು ಅಂತೀನಿ. ಕೂತು ತಿಂತಾರೆ ಅಂತ ನಮ್ಮ ಅಪ್ಪ ಅಮ್ಮನಿಗೆ ತಾನೇ ನೀನು ಹೇಳಿದ್ದು? ಏನು, ದೀಪಾ ದುರ್ಗಾಳನ್ನ ಚೆನ್ನಾಗಿ ಓದಿಸ್ಬೇಕಾ? ದುಡ್ ಯಾರು ನಿಮ್ಮಪ್ಪಾ ಕೊಡ್ತಾನಾ? ನನಗೆ ಗಂಡು ಮಗು ಬೇಕಷ್ಟೆ, ಅವನನ್ನ ನೋಡ್ಕೊಳೋದು ಹೇಗೆ ಅಂತ ನೀನು ಹೇಳ್ಕೊಡ್ಬೇಕಿಲ್ಲ, ಅಪ್ಪ ಆಗಿ ನನಗೆಲ್ಲ ಗೊತ್ತು. ಸಮಯ ತುಂಬಾ ಆಯ್ತು ಮಲಗು ಈಗ "


ಎತ್ತು ಏರಿಗೆಳೆದ್ರೆ, ಕೋಣ ನೀರಿಗೆಳೆಯಿತು ಎನ್ನುವಂತಾಗಿತ್ತು ಸೀತಾ, ಸೋಮಣ್ಣನ ಸಂಸಾರ.


ಸೀತಾ ಮತ್ತೊಂದು ಮಗುವಿಗಾಗಿ ಸಿದ್ಧವಾದ್ಲಾ? ನಿರೀಕ್ಷಿಸಿ ಮುಂದಿನ ಭಾಗದಲ್ಲಿ


Rate this content
Log in

More kannada story from Revati Patil

Similar kannada story from Classics