ಮಳೆಯಲಿ ಜೊತೆಯಲಿ.
ಮಳೆಯಲಿ ಜೊತೆಯಲಿ.
ಇದು ನನ್ನ ಮೊದಲನೇ ಕತೆ. ನಿಮ್ಮದೇ ಪ್ರೋತ್ಸಾಹ ಹಾಗೂ ಪ್ರೀತಿ ಈ ಕತೆಗೆ ಸಿಗುವಂತಾಗಲಿ..ಇದು ನನ್ನ ಎರಡನೇ ಪ್ರಯತ್ನ...
ನನಗೆ ಗೊತ್ತಿಲ್ಲ ಎಷ್ಟು ಜನಕ್ಕೆ ಈ ಕಥೆ ಇಷ್ಟವಾಗುತ್ತೋ ಇಲ್ಲವೋ ಅಂತ... ಆದ್ರೂ ನಿಮಗೆ ಈ ಕಥೆ ಇಷ್ಟ ಆಗುತ್ತೆ ಅಂಥ ಭಾವಿಸುತ್ತಾ ಹೊಸ ಕತೆಯನ್ನು ಪ್ರಾರಂಭ ಮಾಡ್ತಾ ಇದೀನಿ...
ನಮ್ಮ ಕಥೆಯ ನಾಯಕನ ಕಡೆಗೆ ಬರುವುದಾದರೆ, ಇವನ ಹೆಸರು ವಿರಾಜ್.
ಇವನು ಭಾರತದಲ್ಲಿ ಹುಟ್ಟಿದ್ದೆ ಆದರೂ ಉನ್ನತ ಶಿಕ್ಷಣಕ್ಕಾಗಿ ಲಂಡನ್ ಗೆ ತೆರಳಿದ್ದನು.
ಇವನ ತಂದೆ ಪ್ರಕಾಶ್ ಸಂಜೀವ್ ಇನ್ಸ್ಟಿಟ್ಯೂಟ್ ಅನ್ನೋ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ರಿಟೈರ್ಮೆಂಟ್ ಆದ್ದರಿಂದ ಮನೆಯಲ್ಲಿ ಇದ್ದಾರೆ... ತಾಯಿ ಮಂಜುಷಾ. ಇವರಿಗಂತು ವಿರಾಜ್ ಲಂಡನ್ ಗೆ ಹೋಗುವುದು ಒಂಚೂರು ಇಷ್ಟನೇ ಇರ್ಲಿಲ್ಲ...
ಆದ್ರೆ ತಮ್ಮ ಮಗ ದೊಡ್ಡ ಬಿಸಿನೆಸ್ ಮ್ಯಾನ್ ಆಗಬೇಕು ಅನ್ನೋದು ಇವರ ಕನಸು. ಆದ್ದರಿಂದ ವಿರಾಜನನ್ನ ಲಂಡನ್ನಿಗೆ ಕಳಿಸಿಕೊಡಲು ಮನಸ್ಸು ಮಾಡಿದ್ದರು.
ಇನ್ನು ವಿರಾಜನ ತಂಗಿ ತೇಜಸ್ವಿನಿ. ಜಗನ್ನಾಥ ಕಾಲೇಜ್ ನಲ್ಲಿ BCOM ಫರ್ಸ್ಟ್ ಇಯರ್ ಓದುತ್ತಿದ್ದಾಳೆ.. ಹಾಗಂತ ಇವಳ ಗುರಿ ಬ್ಯಾಂಕ್ ಮ್ಯಾನೇಜರ್ ಆಗಬೇಕು ಅಂತ ಏನು ಅಲ್ಲ.. ಇವಳು ಗುರಿ ಟೀಚರ್ ಆಗಬೇಕು ಅನ್ನೋದು..
ಸೋ.. ಇವಿಷ್ಟು ನಮ್ಮ ಕಥಾನಾಯಕನ ಫ್ಯಾಮಿಲಿ ಪರಿಚಯ.
ಇನ್ನು ಕಥಾನಾಯಕಿ ಕಡೆ ಬರುವುದಾದರೆ, ಇವಳ ಹೆಸರು ಪೂರ್ವಿತಾ. ಎಲ್ಲರೂ ಇವಳನ್ನು ಪ್ರೀತಿಯಿಂದ ಪೂರ್ವಿ ಪೂರ್ವಿ ಅಂತ ಕರೀತಾರೆ.
ತಂದೆ ವಿಶ್ವನಾಥ್ ಹಾಗೂ ತಾಯಿ ಜ್ಯೋತಿ ಹಾಗೂ ಇವಳ ತಮ್ಮ ವಿಘ್ನೇಶ್ ಎಲ್ಲರೂ ಒಟ್ಟಾಗಿ ಖುಷಿ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ.
ಈ ಪೂರ್ವಿತಾ ವಿಜಯೇಂದ್ರ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ BSC ಫೈನಲ್ ಇಯರ್ ಓದುತ್ತಿದ್ದಾಳೆ.
ಆದರೆ ಪೂರ್ವಿಯ ತಾಯಿ ಜ್ಯೋತಿಗೆ ಇರುವುದು ಒಂದೇ ಆಸೆ.
ಆದಷ್ಟು ಬೇಗ ಪೂರ್ವಿಗೆ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುವುದು.
ಇವಿಷ್ಟು ನಮ್ಮ ಕಥಾನಾಯಕಿಯ ಫ್ಯಾಮಿಲಿ ಪರಿಚಯ...
*************************
ಕಳೆದ ಒಂದು ವರ್ಷದಿಂದ ವಿರಾಜ್ ನ ಅಮ್ಮ ಮಂಜುಷಾ ಅವನನ್ನು ಇಂಡಿಯಾಗೆ ಬರಲು ಹೇಳುತ್ತಲೇ ಇದ್ದಾರೆ... ಆದರೆ ನೋಡೋಣ ಅದು ಯಾವಾಗ ಅವನಿಗೆ ಇಂಡಿಯಾಗೆ ಬರಲು ಮನಸ್ಸಾಗುತ್ತೋ ಅಂತ... ಹಾಗೆ ಪೂರ್ವಿತಾಗೆ ಯಾವ ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುತ್ತೋ ಅಂತ....
ಮುಂದುವರೆಯುವುದು...
ಎಂದಿಗೂ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ...

