STORYMIRROR

Harsha Shetty

Abstract Drama Classics

4  

Harsha Shetty

Abstract Drama Classics

ಕೃಷ್ಣ ಕುಟೀರ ಭಾಗ 13 ಖಾನ್ ಒಪ್ಪಂದ ಸಹಿ ಮಾಡೋದು

ಕೃಷ್ಣ ಕುಟೀರ ಭಾಗ 13 ಖಾನ್ ಒಪ್ಪಂದ ಸಹಿ ಮಾಡೋದು

4 mins
247

ಜಯಂದ್ರ ಖಾನ್ ಮನೆಗೆ ಹೋದನು

 ಜಯೇಂದ್ರ ಹೊರಗಡೆಯಿಂದ ಖಾನ್ ಬಾಯ್ ಖಾನ್ ಬಾಯ್ ಎಂದು ಕೂಗಲು ಪ್ರಾರಂಭಿಸಿದನು

 ಖಾನ್ ಹೊರಗಡೆ ಬಂದನು 

 ಖಾನ್ : ಜಯಂದ್ರ ಏನ್ ಸಮಾಚಾರ ಇವತ್ತು ನಮ್ಮನೆ ಕಡೆ ಬಂದಿದ್ದೀಯಾ 

 ಜಯಂದ್ರ : ಏನ್ ಇಲ್ಲ ಖಾನ್ ಬಾಯ್ ಹೀಗೆ ನಿಮ್ಮ ಯೋಗ ಕ್ಷೇಮ ಕೇಳಿ ಹೋಗುವಂತ ಬಂದೆ 

ಖಾನ್ : ಯಾಕೆ ನನಗೆ ಏನಾಗಿದೆ

 ಜಯಂದ್ರ : ಏನಿಲ್ಲ ಖಾನ್ ಭಾಯ್ ಊರಿನ ಜನರೆಲ್ಲ ಆ ಜಗನ್ನಾಥ ನಿಮ್ಮ ಮನೆಗೆ ನುಗ್ಗಿ ನಿಮಗೆ ಮತ್ತು ನಿನ್ ತಮ್ಮನಿಗೆ ಸರಿಯಾಗಿ ಬಾರಿಸಿದೆನಂತೆ ನಿಮ್ ಬೇಗಮ್ ನಿಮಗಾಗಿ ಪ್ರಾಣ ಬಿಕ್ಷೆ ಕೇಳುವ ಪರಿಸ್ಥಿತಿ ಬಂತಂತೆ ಆ ಕೃಷ್ಣ ಕುಟೀರ ಮನೆದವರಿಗೆ ಕೊಬ್ಬು ಖಾನ್ ಭಾಯ್ ಈ ಊರಿನವರೆಲ್ಲ ಅವರಿಗೆ ಗುಲಾಮ್ ಅಂತ ಅಂದುಕೊಂಡುಬಿಟ್ಟಿದ್ದಾರೆ

 ಖಾನ್ : ಇರಲಿ ಜಯಂದ್ರ ನಮಗೂ ಒಂದು ಕಾಲ ಬರುತ್ತೆ ಆವಾಗ ನಾನು ತೋರಿಸ್ತೀನಿ ಈ ಖಾನ್ ಏನು ಅಂತ 

 ಜಯಂದ್ರ,: ನೋಡಿ ಖಾನ್ ಬಾಯ್ ದುಶ್ಮನ್ ಕ ದುಶ್ಮನ್ ದೋಸ್ತ್ ಅಂತ ಹೇಳ್ತಾರೆ ನೀವು ನಮ್ಮೊಂದಿಗೆ ಕೈಜೋಡಿಸಿದರೆ ಆ ಜಗನ್ನಾಥನಿಗೆ ಸರಿಯಾದ ಬುದ್ದಿ ಕಲಿಸಬಹುದು 

 ಆವಾಗ ಅಲ್ಲಿಗೆ ಬಂದ ಖಾನ್ ಹೆಂಡತಿ ರೀ ನೀವು ಈ ಹಲ್ಕ ನನ್ ಮಗನ ಒಟ್ಟಿಗೆ ಸೇರ್ಕೊಂಡು ನಮ್ಮ ಭಯ್ಯನಿಗೆ ಏನು ಕೇಡು ಮಾಡಬೇಡಿ ಸ್ವಲ್ಪ ದಿನ ಹೋಗ್ಲಿ ನಾನೇ ಹೋಗಿ ಜಗನ್ನಾಥ್ ಭಯ್ಯ ಮತ್ತು ವಿಭಾ ಬಿಜಿ ಹತ್ರ ಮಾತಾಡ್ತೀನಿ 

 ಖಾನ್ ಸಿಟ್ಟಿಗೆದ್ದು : ಥೂ ಜಾ ಗಂಡಸರು ಮಾತಾಡುವಾಗ ನಿಂದೇನು ಮಧ್ಯದಲ್ಲಿ 

ಖಾನ್ : ಜಯಂದ್ರ ಅವಳ ಹೇಳಿದ ಮಾತಿಗೆ ಬೇಸಾರು ಮಾಡಬೇಡ ಅದು ಏನು ಮಾಡಬೇಕಂತ ಇದ್ದೀಯ 

 ಜಯಂದ್ರ : ಏನಿಲ್ಲ ಖಾನ್ ಭಯ್ಯ ನಿಮಗೆ ಗೊತ್ತಿರುವ ಹಾಗೆ ನಾವೊಂದು distallary factory ಈ ಊರಲ್ಲಿ ತೆರೆಯಲು ಯೋಚಿಸುತ್ತಿದ್ದೇವೆ ಅದಕ್ಕೆ ನಿನಗೆ ಗೊತ್ತಿರುವಾಗೆ ನೂರು ಎಕ್ಕರೆ ಜಮೀನು ಬೇಕು ನಿನ್ನತ್ರ ಇವಾಗ್ಲೇ 40 ಎಕರೆ ಇದೆ ಅದು ನಮಗೆ ಬರೆದುಕೊಟ್ಟು ಬಿಟ್ಟರೆ ಮಿಕ್ಕಿದರ ವ್ಯವಸ್ಥೆ ನಾವು ಮಾಡ್ಕೊಳ್ತೀವಿ ನಾವು ನಿಮ್ಮನ್ನ ಪಾಟ್ನರ್ ಮಾಡ್ಕೊಳ್ತೀವಿ 

 ಖಾನ್ : ಅದೆಲ್ಲಾ ಸಾಧ್ಯವಿಲ್ಲ ಶರಬ್ ದಂದ ನಮಗೆ ಹರಾಮ್ ಅದು ಸಹ ವಿಶ್ವನಾಥ್ ಅವರು ಅದನ್ನು ಈ ಊರಿನ ಜನರಿಗೆ ಒಳಿತಾಗಲಿ ಅಂತ ತೆಂಗಿನ ಎಣ್ಣೆ ಮಿಲ್ಲು ಹಾಕಲು ಕೊಟ್ಟಿದ್ದು ಅವರಿಗೆ ನಂಬಿಕೆ ದ್ರೋಹ ಮಾಡಲು ನನಗೆ ಇಷ್ಟವಿಲ್ಲ 

 ಜಯಂದ್ರ : ಆಯ್ತು ಖಾನ್ ಭಯ್ಯ ನಿನ್ನಿಷ್ಟ ಏನು ನೀನು ನಮ್ಮ ತರ ಗಂಡಸ ಅಂತ ನಿನ್ನತ್ರ ಬಂದಿರೋದು ಆದರೆ ನೀನು ಬಿಡು ಷಂಡನೇ ಸರಿ 

ಖಾನ್ ಜಯೇಂದ್ರ ಕಾಲರ್ ಹಿಡಿದು

 ಖಾನ್ : ಏನು ಹೇಳಿದೆ ಬದ್ಮಾಶ್ ನಿನಗೆ ಇಲ್ಲೇ ಸಮಾಧಿ ಕಟ್ಟಿ ಬಿಡ್ತೀನಿ 

 ಜಯಂದ್ರ : ಕೇವಲ ಒಂದು ಹಸುಗೋಸ್ಕರ ನಿನ್ನ ಹತ್ತು ವರ್ಷದ ಗೆಳೆತನವನ್ನು ಮರೆತು ನಿನಗೂ ಹಾಗು ನಿನ್ನ ತಮ್ಮನಿಗೆ ನಾಯಿ ಹೊಡೆದಾಗ ಹೊಡೆದನಲ್ಲ ಆತನ ಮೇಲೆ ಯಾವುದೇ ರೋಷ ದ್ವೇಷ ಇಲ್ಲದ ನೀನು ಒಬ್ಬ ಷಂಡ ಸರಿ ನಿನಗೂ ಚೆನ್ನಾಗಿ ಗೊತ್ತು ನೀನು ಒಬ್ಬನಾಗಲಿ ನಾನೊಬ್ಬನಾಗಲಿ ಆ ಜಗನ್ನಾಥನದು ಏನು ಕಿತ್ಕೊಳಿಕೆ ಆಗಲ್ಲ ಯಾಕಂದ್ರೆ ಇಡೀ ಊರೇ ಅವನ ಮುಷ್ಟಿಯಲ್ಲಿದೆ ಅದಕ್ಕೆ ನಾವಿಬ್ರೂ ಒಟ್ಟಾದರೆ ಅವನಿಗೆ ಆರಾಮವಾಗಿ ಸಮಾಧಿ ಕಟ್ಟಬಹುದು ಯೋಚಿಸು ಖಾನ್ ಭಾಯ್ ಯೋಚಿಸು 

 ಖಾನ್ ಸ್ವಲ್ಪ ಯೋಚನೆ ಮಾಡಿ 

 ಖಾನ್ : ಆಯ್ತು ನಿನಗೆ ಆ ಜಾಗವನ್ನು ಬರೆದುಕೊಡುತ್ತೇನೆ ಆದರೆ ನನಗೆ patnership ಬೇಡ ಆ ಜಾಗದ ರೇಟ್ ಬೇಕು 

 ಜಯಂದ್ರ : ಆಯ್ತು ಖಾನ್ ಬಾಯಿ ನೀನು ಹೇಳಿದಷ್ಟು ರೇಟ್ ಕೊಡ್ತೀವಿ,ಇದಲ್ಲ ಗಂಡಸರ ಮಾತಂದ್ರೆ ಇನ್ನು ನೋಡು ಆ ಕೃಷ್ಣ ಕುಟೀರ ಮನೆಯವರಿಗೆ ನಾನು ಹೇಗೆ ಸಮಾಧಿ ಕಟ್ಟುತ್ತೇನೆ ಅಂತ, ಹಾತ್ ಮಿಲಾಯಿಸು ಖಾನ್ ಬಾಯ್ 

ಇಲ್ಲಿ ಕಷ್ಟಕುಟೀರ ಮನೆಯಲ್ಲಿ ಶೇಷ ವಿಭ ಕುರಿತು 

ಶೇಷ : ಏನಮ್ಮ ಇದು ಅಪ್ಪನಿಗೇನಾದರೂ ಹುಚ್ಚು ಹಿಡಿದಿದೆ ಆ ಹಸುಗೋಸ್ಕರಾಗಿ ಖಾನ್ ಚಾಚನನ್ನು ಹಾಗೆ ಹೊಡೆದಿದ್ದಾರಲ್ಲ 

ವಿಭ : ಲ* ದೇವರನ್ನು ನಂಬದ ನಿನಗೆ ಅದು ಒಂದು ಪ್ರಾಣಿ ಅಷ್ಟೇ ಆದರೆ ನಿಮ್ಮ ಅಪ್ಪನಿಗೆ ಅದು ದೈವ ಸ್ವರೂಪ ಬೆಳಿಗ್ಗೆ ಎದ್ದಾಗ ಮೊದಲು ದೇವರ ಕೋಣೆಗೆ ಹೋಗಿ ವಾಸುದೇವ ಪ್ರಭುವಿನ ಮುಖ ನೋಡಿದ ಮೇಲೆ ಅವರು ಮತ್ತೆ ನೋಡುವುದು ಕೊಟ್ಟಿಗೆಗೆ ಹೋಗಿ ಬಿಟ್ಟುವಿನ ಮುಖವನ್ನು ಅದರ ಹಾಲು ಕುಡಿದೆ ನೀವೆಲ್ಲ ದೊಡ್ಡದಾದದು ಅವರು ಅದನ್ನ ತನ್ನ ಪಾಲಿನ ಕಾಮಧೇನು ಅಂದುಕೊಂಡಿದ್ದಾರೆ 

 ಶೇಷ : ಆಯ್ತಮ್ಮ ಆದರೆ ನಿನಗನ್ಸ್ತದ ಖಾನ್ ಚಾಚಾ ಹಾಗೆಲ್ಲ ಮಾಡಬಹುದಂತ 

 ವಿಭಾ : ಛೆ ಖಾನ್ ಬಾಯಿ ಅಂತವರಲ್ಲ ಆದರೆ ನಾನು ರಫೀಕ್ ನಾನಂಬಲ್ಲ ಅವನಿಗೆ ಹೆಂಡ ಮತ್ತು ಹೆಣ್ಣಿನ ಸಹವಾಸ ಎರಡು ಇದೆಯಂತೆ ಅದನ್ನು ತಿಳಿದ ಖಾನ್ ಬಾಯಿ ಅವನಿಗೆ ಆರ್ಥಿಕ ನೆರವು ಕೊಡುವುದು ನಿಲ್ಲಿಸಿದರು ಅದಕ್ಕೆ ಹಣದಾಸೆಗೆ ಅವನು ಕೃತ್ಯವನ್ನು ಮಾಡಿರಬಹುದು 

 ಶೇಷ : ನನಗೆ ಯಾಕೋ ಆ ಜಾಯೇಂದ್ರ ಮತ್ತು ವಿಜಯೇಂದ್ರ ಮೇಲೆ ಸಂಶಯ 

 ವಿಭ : ಯಾರು ಈ ವಿಜಯೇಂದ್ರ 

 ಶೇಷ : ಅದೆಲ್ಲ ಆಮೇಲೆ ಹೇಳ್ತೀನಿ ಅಮ್ಮ ಮೊದಲು ಅಪ್ಪನಿಗೆ ಖಾನ್ ಚಾಚನತ್ರ ಹೋಗಿ ಆಗಿದ್ದನ್ನು ಮರೆತು ಮತ್ತೆ ಸ್ನೇಹವನ್ನು ಮುಂದುವರಿಸಲಿಕ್ಕೆ ಹೇಳು 

 ವಿಭ : ಅಯ್ಯೋ ನನಗಲ್ಲಪ್ಪ ಅದರ ಬಗ್ಗೆ ಮಾತಾಡಿದರೆ ನಿನ್ನಪ್ಪ ರುದ್ರತಾಂಡವಾಡ್ತಾರೆ 

 ಶೇಷ : ನನಗೆ ಯಾಕೋ ಆಗುವುದೆಲ್ಲ ಸರಿಯಾಗಿ ಕಾಣ್ತಿಲ್ಲಮ್ಮ ಏನು ದೊಡ್ಡ ಅನ್ರೀಕ್ಷಿತವಾದ ಅಪಘಾತ ಆಗು ಹಾಗೆ ಕಾಣುತ್ತದೆ ಆದಷ್ಟು ಬೇಗ ಜಯಂದ್ರ ಮತ್ತು ವಿಜಯೇಂದ್ರನಿಗೆ ಒಂದು ಗತಿ ಕಾಣಿಸಬೇಕು 

 ಜಯಂದ್ರನ ತನ್ನ ವಕೀಲ ಹಾಗೂ ಇನ್ಸ್ಪೆಕ್ಟರ್ ಮುರುಗನ್ ಮತ್ತು ಕೆಲವು ಆಳುಗಳ ಜೊತೆ ಖಾನ್ ಜಾಗಕ್ಕೆ ಬಂದು ಅಡಿಪಾಯ ಹಾಕಲು ಪ್ರಾರಂಭಿಸಿದ ಆ ವಿಷಯ ಶೇಷನಿಗೆ ಮತ್ತು ಜಗನ್ನಾಥನಿಗೆ ತಿಳಿದು ಬಂತು ಇಬ್ಬರು ಓಡೋಡಿ ಜಾಗದ ಹತ್ತಿರ ಬಂದರು 

 ಜಗನ್ನಾಥ : ಜಯಂದ್ರ ಯಾರು ನಿನಗೆ ನಮ್ ಜಾಗದಲ್ಲಿ Distallery factory ಹಾಕಲು ಅನುಮತಿ ಕೊಟ್ಟದು 

 ನಾನೇ ಎಂಬ ಒಂದು ಸ್ವರ ಕೇಳಿ ಬಂತು 

 ಜಗನ್ನಾಥ ಮತ್ತು ಶೇಷ ತಿರುಗಿ ನೋಡಿದರು 

 ಆವಾಗ ಅಲ್ಲಿ ಖಾನ್ ನಿಂತಿದ್ದನು 

 ಜಗನ್ನಾಥ್ : ಲೋ ಖಾನ್ ನೀನ್ ಯಾವನೋ ನಮ್ ಜಾಗದಲ್ಲಿ distallary ಕಟ್ಟಲು ಅನುಮತಿ ಕೊಡುವವನು 

 ಖಾನ್ : ಈ ಜಾಗ ನನ್ನದು ವಕೀಲರೇ ದಾಖಲಾತಿ ತೋರ್ಸಿ ಇವರಿಗೆ 

 ಶೇಷ ದಾಖಲೆತಿ ನೋಡಿ ತಲೆ ತಗ್ಗಿಸಿದ ಇವರಿಗೆ ತಾತ ಈ ಜಾಗವನ್ನು ಬರೆದುಕೊಟ್ಟಿದ್ದಾರೆ ನಿಮ್ಮ ಮತ್ತು ನಮ್ಮ ಸಹಿ ಕೂಡ ಇದೆ ನಾವು ಆವತ್ತು ತಾತ ಹೇಳಿದ ಕೂಡಲೇ ನೋಡದೆ ಸಹಿ ಮಾಡಿದಿವಲ್ಲ ಅದು ಈ ದಾಖಲಾತಿಗೆ ಕಾಣಿಸುತ್ತದೆ

 ಜಗನ್ನಾಥ : ನಂಬಿದಕ್ಕೆ ಚೆನ್ನಾಗಿ ದ್ರೋಹ ಮಾಡಿದೆವಲ್ಲಕ ಖಾನ್ ನನ್ನ ಅಪ್ಪ ನಿನ್ನ ಎಷ್ಟು ನಂಬಿ ಈ ಊರಿನವರಿಗೆ ಒಳ್ಳೆದಾಗಲಿ ಅಂತ ಆ ಜಾಗವನ್ನು ಬರೆದುಕೊಟ್ಟರು ಆದರೆ ನೀನು ಮಾಡಿದೆನು 

 ಶೇಷ : ಖಾನ್ ಚಾಚಾ ಸುಮ್ಮನೆ ಜಯಂದ್ರನ ಜೊತೆ ಸೇರಬೇಡಿ ಇವನು ಎರಡು ತಲೆಯ ಹಾವು 

 ಖಾನ್ : ಬಚ್ಚ ನೀವು ನನಗೆ ಏನು ಮಾಡಬೇಕು ಮಾಡಬಾರದಂತ ಹೇಳುವ ಅವಶ್ಯಕತೆ ಇಲ್ಲ ಮೊದಲು ನಿನ್ನ ಅಪ್ಪನನ್ನು ತಿದ್ದು , ನಮ್ಮ ಹತ್ತು ವರ್ಷದ ದೋಸ್ತಿನ ಮರೆತು ನಾಯಿ ಹೊಡೆದಂಗೆ ಹೊಡೆದಿದ್ದಾನೆ ಅಲ್ಲ ಇವನು ಒಬ್ಬ ಮನುಷ್ಯನ 

 ಶೇಷ : ಖಾನ್ ನಾಲಿಗೆ ಬಿಗಿ ಹಿಡಿದು ಮಾತಾಡು ನನ್ನಪ್ಪ ನಿನಗೆ ಹೊಡೆದಷ್ಟೇ ನನ್ನಪ್ಪನ ಬಗ್ಗೆ ಏನಾದರೂ ಕೆಟ್ಟದು ಮಾತಾಡಿದ್ರೆ ನಿನ್ನ ಸಮಾಧಿ ಕಟ್ಟಿ ಬಿಡುತ್ತೇವೆ 

 ಆವಾಗ ಅಲ್ಲಿಗೆ ಧಾವಿಸಿದ ಇನ್ಸ್ಪೆಕ್ಟರ್ ಮುರುಗನ್ ನೋಡಿ ಜಗನ್ನಾಥ್ ಸರ್ ಜಾಗ ಜಯಂದ್ರನ ಹೆಸರಲ್ಲಿದೆ ಅದರಲ್ಲಿ ಅವರು ಏನು ಬೇಕಾದರೂ ಮಾಡಬಹುದು distallery ಕಟ್ಟಲು ಸರ್ಕಾರಿ ಲೈಸೆನ್ಸ್ ಕೂಡ ಇದೆ ಇದಕ್ಕೆ ನೀವು ಅಡ್ಡ ಬಂದರೆ ನಾವು ನಿಮ್ಮೇಲೆ ಕೇಸ್ ಮಾಡಬೇಕಾಗುತ್ತದೆ ದಯವಿಟ್ಟು ಇಲ್ಲಿಂದ ಹೊರಟುಹೋಗಿ

 ಜಗನ್ನಾಥ ಮತ್ತು ಶೇಷ ಏನು ಹೇಳದೆ ಅಲ್ಲಿಂದ ಹೊರಟು ಹೋದರು 

ಜಯಂದ್ರ ಖಾನ್ ಹೆಗಲ ಮೇಲೆ ಕೈಹಾಕಿ ನೋಡಿದಿಯ ಖಾನ್ ಬಾಯ್ ನಾವು ಕೊಟ್ಟ ಶಾಕ್ಗಾ ಹೇಗೆ ಬಾಲ ಮುದುಡಿಕೊಂಡು ಹೋಗುತ್ತಿದ್ದಾರೆ ಅಪ್ಪ-ಮಗ ,ಇನ್ನು ಮುಂದೆ ಏನೇನ್ ಆಗ್ತದೆ ನೋಡ್ತಾ ಇರು 

ಕಥೆ ಮುಂದುವರೆಯುವುದು


Rate this content
Log in

Similar kannada story from Abstract