STORYMIRROR

Harsha Shetty

Abstract Drama Others

4  

Harsha Shetty

Abstract Drama Others

ಕೃಷ್ಣ ಕುಟೀರ ಭಾಗ 11 ನಿಂಗಿ ಆಸ್ತಿ ಕಾಗದದ ಮೇಲೆ ಸಹಿ ತಗೊಳ್ಳುವುದು

ಕೃಷ್ಣ ಕುಟೀರ ಭಾಗ 11 ನಿಂಗಿ ಆಸ್ತಿ ಕಾಗದದ ಮೇಲೆ ಸಹಿ ತಗೊಳ್ಳುವುದು

6 mins
237

 ವಿಜೇಂದ್ರ ಜಯಂದ್ರನ್ನು ಕುರಿತು ಆ ಮುದುಕ ವಿಶ್ವನಾಥ ಸತ್ತು ಎರಡು ವಾರವಾಯಿತು ಆದರೆ ಇದು ತನಕ ಆ ನಿಂಗಿ  ಯಾವ ಸುದ್ದಿಯು ಇಲ್ಲ ನನಗೆ ಆದಷ್ಟು ಬೇಗ ಕೆಲಸ ಮುಗಿಸಿ ಪಟ್ಟಣಕ್ಕೆ ಹೋಗುವ ಅಂದರೆ ಇಲ್ಲಿ ಕೆಲಸನೇ ಆಗ್ತಾ ಇಲ್ಲ

 ಜಯಂದ್ರ : ಏ ಕೋಕು ಹೋಗು ಹೇಗಾದರೂ ಮಾಡಿ ಆ ನಿಂಗೆಯನ್ನು ಕರ್ಕೊಂಡು ಬಾ

 ಕೋಕು : ಅವಳು ಇರೋದು ಕೃಷ್ಣ ಕುಟೀರ ಮನೆಯಲ್ಲಿ ಆ ಮನೆಯವರಿಗೆ ನಿಮ್ಮನ್ನು ಕಂಡರೆ ಆಗಲ್ಲ ನಾನೆಲ್ಲಾದ್ರೂ ನಿಂಗಿಯನ್ನು ಭೇಟಿಯಾಗಲು ಮನೆ ಒಳಗಡೆ ಹೋದರೆ ಜಗನ್ನಾಥ್ ಅವರಿಗೆ ಹಾಗೂ ಶೇಷನಿಗೆ ಸಂಶಯ ಬರಲ್ವಾ

 ಜಯಂದ್ರ : ಅವರಿಲ್ಲದ ಸಮಯವನ್ನು ನೋಡಿ ಕರ್ಕೊಂಡು ಬರಲೇ 

 ಆವಾಗ ಒಂದು ಹೆಣ್ಣು ಧ್ವನಿ ಹಿಂದಗಡೆಯಿಂದ ಬಂತು 

 ಅದರ ಅವಶ್ಯಕತೆ ಇಲ್ಲ 

 ವಿಜೇಂದ್ರ ಮತ್ತು ಜಯೇಂದ್ರ ತಿರುಗಿ ನೋಡಿದಾಗ ಅಲ್ಲಿ ನಿಂಗಿ ನಿಂತಿದ್ಲು 

 ವಿಜಯೇಂದ್ರ : ನಿಂಗಿ ನಿಂಗಿ ನಿಂಗಿ where were you?

 ನಮಗೆ ಆದಷ್ಟು ಬೇಗ ಕೆಲಸ ಶುರು ಮಾಡಬೇಕು ನೀನು ಆ ಪತ್ರದ ಮೇಲೆ ಸಹಿ ಹಾಕೊಂಡ್ ಬಾ 

 ನಿಂಗಿ : ಅದು ಹೇಗಾದರೂ ನಾನು ಹಾಕೊಂಡು ಬರ್ತೀನಿ ಆದರೆ ಅದಕ್ಕೂ ಮೊದಲು ನನಗೆ ಸ್ವಲ್ಪ ಅಡ್ವಾನ್ಸ್ ಕೊಡಿ 

 ವಿಜೇಂದ್ರ :you bloody bitch

 ನಿಂಗಿ : ಏನು ಏನಂದೆ ನೀನು 

 ವಿಜೇಂದ್ರ : ಏನಿಲ್ಲ ನಿನಗೆ ಎಷ್ಟು ಅಡ್ವಾನ್ಸ್ ಬೇಕು 

 ನಿಂಗಿ : ಏಳು ಕೋಟಿಯ 10% 

 ಜಯಂದ್ರ : ಅಂದ್ರೆ 70ಲಕ್ಷ ನಿನಗೇನಾದರೂ ತಲೆ ಕೆಟ್ಟಿದೆ ಅಷ್ಟೊಂದ್ ಹಣ ನೀನು ನೀನ್ ಜನ್ಮದಲ್ಲಿ ನೋಡಿದೆ 


 ವಿಜೇಂದ್ರ : ಅಷ್ಟೊಂದು ಹಣ ಕೊಡಲಿಕ್ಕೆ ಆಗಲ್ಲ ಒಂದು ಐದು ಲಕ್ಷ ಬೇಕಾದರೂ ಕೊಡ್ತೀನಿ ಮಿಕ್ಕಿದು ಕೆಲಸ ಆದ್ಮೇಲೆ


ನಿಂಗೆ : ಆಯ್ತು ಹಾಗಾದ್ರೆ ಮಿಕ್ಕಿದ್ದನ್ನು ನಾನು ಕೆಲಸವಾದ ಮೇಲೆ ತಗೊಳ್ತೀನಿ 


 ಹಣ ತಗೊಂಡ್ ಮೇಲೆ ನಿಂಗಿ ಮತ್ತೆ ಸುಕೇಶ ಇಬ್ಬರು ಎಲ್ಲಿಗೋ ಮಾಯವಾದರು

 ಅವರು ಮಾಯವಾದದನ್ನು ಕಂಡು ವಿಜಯೇಂದ್ರನಿಗೆ ವಿಪರೀತ ಕೋಪ ಬಂತು

 ಅವರನ್ನು ಹುಡುಕಲು ತನ್ನ ಆಳುಗಳನ್ನು ಕಳಿಸಿದನು ಒಂದು ವಾರ ಅವರನ್ನು ಅವನ ಆಳುಗಳು ಹುಡುಕಿದಾಗ ಅವರಿಬ್ಬರನ್ನು ಒಂದು ಕ್ಲಬ್ಬಿನಲ್ಲಿ ಜೂಜಾಡೋದನ್ನು ಕಂಡು ವಿಜಯೇಂದ್ರ ಹತ್ರ ಕರ್ಕೊಂಡು ಬಂದರು

 ವಿಜೇಂದ್ರ : ನಿನ್ನನ್ನು ನಂಬಿಕೊಂಡು ಐದು ಲಕ್ಷ ಕೊಟ್ಟರೆ ಅದನ್ನು ಹಿಡ್ಕೊಂಡು ಓಡಿ ಹೋಗಿದ್ದೀಯಾ ನಿಮ್ಮಿಬ್ಬರ ಇಲ್ಲೇ ಕೊಚ್ಚಾಕಿ ಬಿಡ್ತೀನಿ 

 ನಿಂಗಿ : ಓಡಿ ಹೋಗಲಿಲ್ಲ ಮಜಾ ಮಾಡದೆ ತುಂಬಾ ದಿನವಾಯಿತು ಅದಕ್ಕೆ ಹಣ ಸಿಕ್ತಾಲ್ಲ ಸ್ವಲ್ಪ ಮಜಾ ಮಾಡುವಂತ ಹೊರಗಡೆ ಹೋಗಿದ್ದೇವೆ 

 ಜಯಂದ್ರ : ನಮಗೆಲ್ಲಿ ಪ್ರಾಣ ಹೋಗ್ತಿದೆ ನಿಮಗೆ ಮಜಾನಾ ತಮ್ಮ ಅಲ್ಲಲ್ಲ ಸರ್ ಅವರತ್ರ ಆಗಲ್ಲ ಸರ್ ಇಬ್ಬರನ್ನ ಇಲ್ಲೇ ಮುಗಿಸಿ ಬಿಡಿ 

 ವಿಜೇಂದ್ರ : ನನಗೂ ಹಾಗೆ ಅನಿಸುತ್ತಿದೆ ಈ ನಾಲಾಯಕ್ಗಳನ್ನ ನಂಬಿ ನಾನು ದೊಡ್ಡ ತಪ್ಪು ಮಾಡಿದೆ 

 ನಿಂಗಿ : ಇಲ್ಲಲ್ಲ ನಿಮ್ಮ ಕೆಲಸ ಮಾಡೇ ಮಾಡ್ತೀವಿ ನಮಗೆ ಇನ್ನು ಸ್ವಲ್ಪ ಸಮಯ ಕೊಡಿ 

 ವಿಜಯೇಂದ್ರ : ಆಯ್ತು ಎರಡು ವಾರ ಟೈಮ್ ಕೊಡ್ತೀನಿ ಅಲ್ಲಿ ತನಕ ಕೆಲಸವಾಗದಿದ್ದರೆ ನಿಮ್ಮ ಪ್ರಾಣ ಪಕ್ಷಿಯನ್ನು ನಾನು ತೆಗೆದು ಬಿಡ್ತೀನಿ 

 ಸುಕೇಶ : ಇಲ್ಲ ಸರ್ ಇನ್ನು ನಿಮ್ಮ ಮುಂದೆ ಬಂದರೆ ಕೆಲಸ ಮುಗಿಸಿಕೊಂಡು ಬರುವುದು 

 ವಿಜೇಂದ್ರ : ಹಾಗೆ ಮಾಡಿದರೆ ನಿಮಗೇನೇ ಒಳ್ಳೆಯದು ಇಲ್ಲಾದರೆ ಮುಂದೆಗೆ ಆಗುವ ಅನಾಹುತಕ್ಕೆ ನೀವೇ ಕಾರಣ 

ನಿಂಗೆ ಮತ್ತೆ ಸುಕೇಶ ಕೃಷ್ಣ ಕುಟೀರ ಮನೆಗೆ ಮರಳಿದರು

 ಅವರನ್ನು ನೋಡಿದ ವಿಭ

 ವಿಭ : ಏನಕ್ಕ ಹೇಳದೇ ಕೇಳದೆ ಮಾಯವಾಗಿದ್ದೀಯಾ ನಮಗೆಲ್ಲ ಎಷ್ಟು ಚಿಂತೆವಾಗಿತ್ತು ಗೊತ್ತಾ

 ನಿಂಗಿ : ಹಾಗೇನು ಇಲ್ಲ ವಿಭಾ ಇವರಪ್ಪನಿಗೆ ಹುಷಾರ್ಲಿಲ್ಲ

 ಅದಕ್ಕೆ ನೋಡ್ಲಿಕ್ಕೆ ಹೋಗಿದ್ದೇವೆ

 ಆವಾಗ ಅಲ್ಲಿಗೆ ಧಾವಿಸಿದ ಜಗನ್ನಾಥನ್ನು

 ಜಗನ್ನಾಥ : ಈಗ ಹೇಗಿದೆ ನಿಮ್ಮ ಅಪ್ಪನ ಆರೋಗ್ಯ ಅಳಿಯಂದಿರೇ 

 ಸುಕೇಶ : ಪರ್ವಾಗಿಲ್ಲ ಬಾವ 

 ವಿಭಾ : ಪ್ರಯಾಣ ಮಾಡಿ ಸುಸ್ತಾಗಿರ್ತೀರಾ ಬನ್ನಿ ಊಟ ಮಾಡಿ ಆಮೇಲೆ ವಿಶ್ರಾಂತಿ ತಗೊಳ್ಳಿಯಂತೆ 

 ಎಂದಿನಂತೆ ಜಗನ್ನಾಥನು ಅವತ್ತು ತೋಟಕ್ಕೆ ಹೋಗದೆ ಒಂದೇ ಮೂಲೆಯಲ್ಲಿ ವ್ಯಾತೆ ಬಿಡುತ್ತಾ ಮನೆಯ ಒಂದು ಮೂಲೆಯಲ್ಲಿ ಕೂತಿದ್ದನು 

ಇದೇ ಸರಿಯಾದ ಸಮಯ ಎಂದುಕೊಂಡು ನಿಂಗಿ 

 ಜಗನ್ನಾಥ ಏನಪ್ಪಾ ಅಪ್ಪನ ಬಗೆ ಯೋಚಿಸ್ತಾ ಇದ್ಯಾ ಏನು ಮಾಡೋದಪ್ಪ ದೇವರ ಇಚ್ಛೆಯ ಮೇಲೆ ನಾವೇನು ಮಾಡಲಿಕ್ಕೆ ಆಗುತ್ತದೆ ನೀನು ಏನು ಕೆಲಸ ಮಾಡದೆ ಹೀಗೆ ಗಂಟೆಗಟ್ಟಲೆ ವ್ಯಾತೆ ಬಿಡುತ್ತಾ ಇದ್ದರೆ ಆರೋಗ್ಯದ ಗತಿ ಏನಪ್ಪ ಆವಾಗ ಅಲ್ಲಿಗೆ ಧಾವಿಸಿದ ವಿಭಾ ಅಳುತ್ತಾ ಹಾಗೆಳಕ್ಕ ಮಾವ ಸತ್ತು ಒಂದು ತಿಂಗಳಾಯಿತು ಇವರು ಕೆಲಸಕ್ಕೂ ಹೋಗದೆ ಇಡೀ ದಿನ ಒಂದು ಮೂಲೆಯಲ್ಲಿ ಕೂರ್ತಾರೆ 

 ಜಗನ್ನಾಥ : ನಾನು ಎಷ್ಟು ಅಪ್ಪನನ್ನು ಮರೆಯಲು ಪ್ರಯತ್ನಿಸಿದರು ನನಗೆ ಆಗ್ತಿಲ್ಲಕ್ಕ ಅವರು ಇಲ್ಲೇ ಎಲ್ಲೋ ಇದ್ದಾರೆ ಅಂತ ಅನಿಸುತ್ತಿದೆ 

 ನಿಂಗಿ : ಹೌದಪ್ಪ ಅವರಿಲ್ಲು ಹೋಗಲಿಲ್ಲ ಅವರ ಆತ್ಮವೂ ಈ ಕೃಷ್ಣ ಕುಟೀರ ಮನೆಯೊಳಗಡೆ ತಿರುಗಾಡ್ತಾ ಇದೆ 

 ಅಲ್ಲೇ ಇದ್ದ ಸುಕೇಶನು : ನಿಂಗಿಯ ಕಿವಿಯಲ್ಲಿ ಲ* ನಿಂಗೆ ಏನ್ ಹೇಳ್ತಾ ಇದ್ದೀಯಾ ನಿನ್ನ ಅಪ್ಪನ ಆತ್ಮ ಎಲ್ಲಾದರೂ ಇಲ್ಲಿದ್ದರೆ ಮೊದಲು ಬಲಿ ನಿನ್ನದೇ ತಗೊಳೋದು 

 ನಿಂಗಿ : ನೀನು ಸ್ವಲ್ಪ ಬಾಯಿ ಮುಚ್ಚಿಕೊಂಡು ಇರುತ್ತೀಯಾ 

 ವಿಭಾ : ಏನಂತೆ ಭಾವಂದು 

 ನಿಂಗಿ :ಏನಿಲ್ಲ ಅವರಿಲ್ಲೇ ಊರಲ್ಲಿ ಒಂದು ಹಾಲಿನ ಡೈರಿ ಹಾಕಬೇಕಂತಿದ್ದಾರೆ ಊರಿನವರು ಬಂದು ಅವರ ಹಾಲನ್ನು ಸಿಟಿಯಲ್ಲಿ ಮಾರುವುದು ಬಿಟ್ಟು ಇವರಿಗೆ ನೇರ ಮಾರಬಹುದು 

 ಜಗನ್ನಾಥ : ಇದು ತುಂಬಾ ಒಳ್ಳೆಯ ವಿಷಯ ನಾನು ಯಾವುದಕ್ಕಾದರೂ ಸಹಾಯವಾಗಬಹುದು ಇದರಲ್ಲಿ 

 ನಿಂಗಿ : ಏನಿಲ್ಲ ಜಗನ್ನಾಥ ಬ್ಯಾಂಕಲ್ಲಿ ಹಾಲಿನ ಭೂತ್ಹಾಕಲು ಲೋನ್ ತಗೊಂಡಿದೀವಿ ಅದಕ್ಕೆ ಗ್ಯಾರೆಂಟಿಯಾಗಿ ನಿಂದು ಸಹಿ ಬೇಕಿತ್ತು 

 ಜಗನ್ನಾಥ : ಕೊಡು ಎಲ್ಲಿ ಸಹಿ ಮಾಡಬೇಕು 

 ನಿಂಗಿ : ಸಹಿ ಜೊತೆ ಹೆಬೆಟ್ಟು ಬೇಕು ಹಾಗೂ ನಿನ್ನ ಮಕ್ಕಳ ಸಹಿಕೊಡಬೇಕು 

 ಜಗನ್ನಾಥ : ಆಯ್ತಕ್ಕ ಕೊಡು ಸಹಿ ಮಾಡ್ತೀನಿ 

 ಇದನ್ನೆಲ್ಲ ತನ್ನ ಕೊಠಡಿ ಒಳಗಡೆ ಕುತ್ಕೊಂಡು ಕೇಳುತ್ತಿದ್ದ ಶೇಷನಿಗೆ ಸಂಶಯವಾಯಿತು 

ಬ್ಯಾಂಕ್ ಗ್ಯಾರಂಟಿ ಮಕ್ಕಳ ಸಹಿ ಏಕೆ ಆತನ ಕೊಠಡಿಯಿಂದ ಎದ್ದು ಬಂದು 

 ಶೇಷ : ನಿಂಗಿ ದೊಡ್ಡಮ್ಮ ಒಂದು ನಿಮಿಷ ಬ್ಯಾಂಕಿನವರು agreement ಸರಿಯಾಗಿ ಮಾಡಿದರಂತ ನೋಡ್ತೀನಿ ಒಮ್ಮೆ ಎಂದು ಪತ್ರವನ್ನು ತೆಗೆದುಕೊಂಡು ಓದಲು ಪ್ರಾರಂಭಿಸಿದನು 

ಶೇಷ ಮತ್ತೆ ಜಗನ್ನಾಥ ಈಗ ಕೂಡ ಮಾತಾಡ್ತಾ ಇಲ್ಲ 

 ಜಗನ್ನಾಥನ್ನು ವಿಭನ ಸನ್ನೆ ಮಾಡಿ ಅದೇನೆಂತ ಕೇಳು ಅಂತ ಹೇಳಿದ 

 ವಿಭ : ಶೇಷ ಏನಾಯ್ತು ಪತ್ರ ಸರಿಯಾಗಿದೆಯಾ 

 ಶೇಷ : ಇಲ್ಲಮ್ಮ ಸ್ವಲpoints miss ಆಗಿದೆ

 ದೊಡ್ಡಮ್ಮ ನನ್ ರೂಮಿಗೆ ಸ್ವಲ್ಪ ಬರ್ತೀರಾ ಯಾವ ಪಾಯಿಂಟ್ಸ್ ಹಾಕ್ಬೇಕಂತ ನಾನು ನಿಮಗೆ ಹೇಳ್ತೀನಿ ಎಂದು ಹೇಳಿ ನನ್ನ ಕೊಠಡಿಗೆ ಕರ್ಕೊಂಡು ಹೋದನು 


ನಿಂಗಿ ಮತ್ತೆ ಸುಕೇಶ ಶೇಷನ ಹಿಂದೆ ಅವನ ಕೊಠಡಿಗೆ ಹೋದರು

 ಕೊಠಡಿಗೆ ಹೋದಾಗೆ ಶೇಷ ಬಲವಾದ ಏಟನ್ನು ಸುಕೇಶನ ಕೆನ್ನೆ ಮೇಲೆ ಹೊಡೆದನು

 ಸುಕೇಶ : ಯಾಕಪ್ಪ ಹೊಡಿತಿದ್ದಿಯಾ

 ಶೇಷ : ಈ ಅಗ್ರಿಮೆಂಟ್ ಯಾರ್ ಮಾಡಿದ್ದು ಇದರಲ್ಲಿ ಏನಿದೆ ಅಂತ ನಿಂಗೊತ್ತಿಲ್ವಾ ಅಂತ ಹೇಳಿ ಇನ್ನೊಂದು ಕೆನ್ನೆಗಿಟನ್ನು

 ಸುಕೇಶ : ಅಯ್ಯೋ ಇದು ನಾನಲ್ಲಪ್ಪ ನಿನ್ನ ದೊಡ್ಡಮ್ಮ ಮಾಡಿದ್ದು ನನಗ್ಯಾಕೆ ಹೊಡಿತಿದ್ದೀಯಾ

 ಶೇಷ : ನನಗದು ಗೊತ್ತು ಅವರಿಗೆ ಹೊಡಿಲಿಕ್ಕೆ ಆಗಲ್ಲ ಅದಕ್ಕೆ ನಿನಗೆ ಹೊಡಿತಿದ್ದೀನಿ ಯಾಕೆಂದರೆ ಅವರು ನನ್ನ ದೊಡ್ಡಮ್ಮ ಆದರೆ ನಿನ್ನನ್ನು ಅವಳ ಗಂಡ ಅಂತ ನಾನು ನನ್ನ ಅಜ್ಜನ ತರ ಯಾವತ್ತೂ ಒಪ್ಪಿಕೊಳ್ಳಲಿಲ್ಲ

 ಶೇಷ : ನಿಮ್ಮಿಬ್ಬರ ಬಂಡವಾಳ ನನ್ನಪ್ಪನ ಮುಂದೇನೆ ಬಹಿರಂಗಪಡಿಸುತ್ತೆ ಆದರೆ ಇವಾಗ ಅಜ್ಜನನ್ನು ಕಳಕೊಂಡು ಅವರು ತುಂಬಾ ನೊಂದಿದ್ದಾರೆ ನೀವು ಯಾವಾಗ ಅಗ್ರಿಮೆಂಟ್ ಅಲ್ಲಿ ಮಕ್ಕಳ ಸಹಿ ಬೇಕಂತ ಹೇಳಿದರು ಆವಾಗ್ಲೇ ನನಗೆ ಸಂಶಯವಾಯಿತು ಬ್ಯಾಂಕ್ ಸಾಲಕೆ ಮಕ್ಕಳ ಸಹಿ ಕೇಳಲ್ಲ ಆದರೆ ಇದು ಪಿತ್ರಾಜಿತ ಆಸ್ತಿ ಈ 100 ಎಕರೆ ಕೊಡಬೇಕಾದರು ಮಕ್ಕಳ ಸೈನ್ ಬೇಕೇ ಬೇಕು ಮರ್ಯಾದೆಯಿಂದ ನಾಳೆ ಬೆಳಗ್ಗೆ ವರೆಗೆ ಜಾಗ ಖಾಲಿ ಮಾಡಿದರೆ ಸರಿ ಇಲ್ಲದಿದ್ದರೆ ನಿಮ್ಮನು ಒಳಗಡೆ ಹಾಕ್ಸ್ತೀನಿ

 ನಿಂಗಿ : ಶೇಷ ದಮ್ಮಯ ಕಂದ ನಿನ್ನನ್ನು ಬಾಲ್ಯದಿಂದ ಲಾಲನೆ ಪಾಲನೆ ಮಾಡಿದಿನಿ ಏನೋ ದುಡ್ಡಿಗಾಸೆಗೆ ಮಣ್ಣು ತಿನ್ನೋ ಕೆಲಸ ಮಾಡಿಬಿಟ್ಟಿದೀವಿ ಕ್ಷಮಿಸು ಕಂದ ಬೇಕಾದರೆ ನಿನ್ನ ಕಾಲು ಹಿಡಿತೀನಿ ನಿಂಗಿ ಅಳುವಿಗೆ ಶೇಷ ಕರಗಿ ಹೋದನು

 ಶೇಷ : ಇನ್ನೊಮ್ಮೆ ಹೀಗೆ ಮಾಡಬೇಡಿ ಎಂದು ಹೇಳಿ agreement ಹರಿದು ಹಾಕಿದನು

 ಶೇಷ ನೇರ ಜಯಂದ್ರ ಮನೆಗೆ ಹೋದನು 

 ಜಯಂದ್ರ ಮನೆಯ ಹೊಸ್ತಿಲಿನಲ್ಲಿ ನಿಂತು 

 ಶೇಷ : ಜಯಂದ್ರ ಹೊರಗಡೆ ಬಾರೋಲೋಫರ್ ಎಂದು ಕೂಗಿದ 

 ಜಯಂದ್ರ : ಏನು ಬಡ್ಡಿಮಗನೇ ಮನೆವರೆಗೆ ಬಂದಿದಿಯಾ ಏನ್ ವಿಷಯ 

 ಶೇಷ : ಏ ಜಯಂದ್ರ ನಮ್ಮ ಮನೆಯ ವಿಷಯದಲ್ಲಿ ತಲೆ ಹಾಕಬೇಡ ಅಂತ ಎಷ್ಟು ಸರಿ ಹೇಳಿದರು ನಿಂಗೆ ಬುದ್ಧಿ ಬರಲ್ಲ ಅಲ್ವಾ

 ಜಯಂದ್ರ : ಮತ್ತೆ ನೀನು ಮತ್ತೆ ನಿನ್ನ ಅಪ್ಪ ನನ್ನ ಅಷ್ಟೊಂದ್ ವ್ಯವಾರಗಳ ಮುಚ್ಚಿ ಹಾಕಿದರಲ್ಲ ಅದಕ್ಕೇನ್ ಹೇಳ್ತೀಯಾ

 ಶೇಷ : ನ್ಯಾಯವಾದ ಕೆಲಸ ಮಾಡಿದರೆ ಯಾರು ನಿನ್ನನ್ನು ಈ ಊರಲ್ಲಿ ತಡಿಯಲ್ಲ ಆದರೆ ನೀನು ಮಾಡುವುದು ಎಲ್ಲಾ 2 number ಕೃತ್ಯ

 ಜಯಂದ್ರ : ನನ್ನಿಷ್ಟ ಕಣೋ ನನ್ನ ಜಮೀನು ನಾನು ಏನು ಬೇಕಾದರೂ ಮಾಡ್ತೀನಿ ನೀನ್ ಯಾವನೋ ಕೇಳಲಿಕ್ಕೆ

 ಶೇಷ : ನೀನು ಹೀಗೆಲ್ಲ ಕೇಳಲ್ಲ ಏನಿದ್ರೂ ದಂಡಂ ದಶಗುಣಂ ಎಂದು ಹೇಳಿ ಶೇಷ ಮುಂದಕ್ಕೆ ಬಂದ

 ಜಯಂದ್ರ : ಬಾರೋ ಬಾ ಇವತ್ತು ಇಲ್ಲೇ ನಿನ್ನ ಚಟ್ಟ ಕಟ್ಟಿ ಬಿಡ್ತೀನಿ ಎಂದು ಹೇಳಿ ಅಲ್ಲೇ ಇದ್ದ ವಿಜೇಂದ್ರನಾ ಅಂಗರಕ್ಷಕ ಕುರಿತು ಸಿಗಿದು ಹಾಕಿ ಈತನ ಎಂದು ಹೇಳಿದನು

 ಆರು ಅಂಗರಕ್ಷಕರು ಶೇಷನತ್ತದಾವಿಸಿದರು ಆವಾಗ stop it ಎಂದು ಒಂದು ಧ್ವನಿ ಕೇಳಿ ಬಂತು 

ಶೇಷ ತಿರುಗಿ ನೋಡಿದಾಗಲಿ ವಿಜಯೇಂದ್ರನಿದ್ದನು

 ಶೇಷ : ವಿಜೇಂದ್ರ ನೀನೇನೋ ನಮ್ಮೂರಲ್ಲಿ

 ವಿಜಯೇಂದ್ರ :do you know me

 ಶೇಷ :ವಕೀಲ ಆದ ಎಲ್ಲರಿಗೂ ನಿನ್ನ ಬಗ್ಗೆ ಗೊತ್ತು

Criminal ಲೋಕದ king ಇಂದು ಕರೆದುಪಡುತ್ತೀಯಾ ನಿನ್ನ ಮೇಲೆ 52 cases ಇದೇ ಕೋಟಲ್ಲಿ, ಆದರೆ ಈ ಊರಿಗೆ ಬಂದು ನಿನ್ನ ಬಾಳ ಬಿಚ್ಚಲು ನೋಡಿದರೆ ನೀನು ಮತ್ತೆ ನಿನ್ನ ಸಾಮ್ರಾಜ್ಯ ಎರಡಕ್ಕೂ ಅಂತ್ಯ ಹಾಡಬಿಡ್ತೀನಿ ಜೋಕೆ 

 ಜಯೇಂದ್ರ : ನೀನು ಇಲ್ಲಿಂದ ಬದುಕಿ ಹೋದ್ರೆ ತಾನೇ ಅದನ್ನೆಲ್ಲ ಮಾಡುವುದು ಜಯೇಂದ್ರ ಅಂಗರಕ್ಷಕರನ್ನು ಕುರಿತು ಮುಗ್ಸಿ ಬಿಡ್ರೋ ಅವನನ್ನ 

ವಿಜಯೇಂದ್ರ :wait ನೋಡಿ Mr ಶೇಷ ನನಗೆ ನಿನ್ನ ಫ್ಯಾಮಿಲಿ ಮೇಲೆ ಯಾವುದೇ ವೈರತ್ವ ಇಲ್ಲ ನನಗೆ ಬೇಕಾಗಿರೋದು distallery factory ಕಟ್ಟಲು ನೂರು ಎಕರೆ ಜಮೀನು ಅದರಿಂದ ನಿಮ್ಮ ಊರು ಉದ್ದಾರ ಆಗ್ತದೆ ಊರಿನವರಿಗೆಲ್ಲ ಕೆಲಸವೂ ಸಿಕ್ತಾರೆ

 ಶೇಷ : ನೋಡು mr ವಿಜಯೇಂದ್ರ ನಿನ್ನ ಎಲ್ಲ history ನಂಗೊತ್ತು ನೀನು ಯಾವತ್ತಾದ್ರೂ ಯಾರನ್ನಾದರೂ ಉದ್ದಾರ ಮಾಡಿದ್ದುಂಟೆ ಮೋಸವೇ ನಿನ್ ರಕ್ತದಲ್ಲಿದೆ ನೀನು ನಿನ್ನ ಲಾಭ ಬಿಟ್ಟರೆ ಬೇರೆ ಏನು ಯೋಚಿಸದಿಲ್ಲ ನೂರು ಎಕರೆ ಬಿಡು ನಿನಗೆ ದಮ್ಮಿದ್ರೆ ಒಂದಿಂಚು ಭೂಮಿಯನ್ನು ತೆಗೆದು ತೋರಿಸು ಈ ಊರಿನಲ್ಲಿ ಎಂದು ಹೇಳಿ ಶೇಷ ಅಲ್ಲಿಂದ ಹೊರಟು ಹೋದ

 ಜಯಂದ್ರ ವಿಜಯೇಂದ್ರನ ಕುರಿತುಅವನನ್ನು ಯಾಕೆ ಹೋಗಲಿಕ್ಕೆ ಬಿಟ್ಟೆ

 ವಿಜಯೇಂದ್ರ : ಅವನಿಗೆ ಏನಾದರೂ ಕೇಡು ಮಾಡಿದರೆ ಆ ಜಗನ್ನಾಥ ಮತ್ತೆ ಈ ಊರಿನವರು ನಮ್ಮನ್ನು ಸೀಳಿ ಹಾಕ್ತಾರೆ ಹಾಗೂ ಆ ಇನ್ಸ್ಪೆಕ್ಟರ್ ಮುರುಗನ್ ಆತನು ತುಂಬಾ ಪ್ರಮಾಣಿಕ ಅವನು ಕೂಡ ಕೃಷ್ಣ ಕುಟೀರ ಮನೆಯವರ ಕಡೆ ಇದ್ದಾನೆ

ನನಗೆ ಅನಿಸುತ್ತದೆ ಆ ನಿಂಗಿ agreement ನೋಡಿಬಿಟ್ಟಿದ್ದಾನೆ ಅದಕ್ಕೆ ಇಲ್ಲಿ ಬಂದು ಈ ರಂಪಾಟ ಮಾಡಿದ ಇವನು ಇರುವವರೆಗೆ ನಾವು ಏನು ಮಾಡಲಿಕ್ಕೆ ಆಗಲ್ಲ

 ಜಯಂದ್ರ : ಹಾಗಾದರೆ ಇವನನ್ನು ಮುಗಿಸಿಬಿಡುವ

 ವಿಜಯೇಂದ್ರ : you idiot ಎಲ್ಲರನ್ನು ಹೀಗೆ ಮುಗಿಸ್ತಾ ಹೋದರೆ doubt ಬರೋದು ನಮ್ಮೇಲೆ

 ಅವಾಗ್ಲೇ ವಿಜಯೇಂದ್ರ ಫೋನಿಗೆ ಕಾಲ್ ಬಂತು ಆ ಫೋನಿನ ಮಾತು ಕೇಳಿ ವಿಜಯೇಂದ್ರನ ಮುಖವು ಬಾಡಿ ಹೋಯಿತು

 ಜಯಂದ್ರ ವಿಜಯೇಂದ್ರ ಮುಖ ಬಾಡಿದನು ನೋಡಿ ಜಯಂದ್ರ : ಏನಾಯ್ತು ಸರ್

 ವಿಜಯೇಂದ್ರ : distallary call ಇನ್ನು ಎರಡು ವಾರದಲ್ಲಿ ಶುರು ಕೆಲಸ ಮಾಡದಿದ್ದರೆ ಕಾಂಟಾಕ್ಟ್ ವಾಪಸ್ ತಗೊಳ್ತಾರಂತೆ

 ಜಯೇಂದ್ರ : ಈಗ ಏನು ಮಾಡದ ಸರ್ 

ವಿಜಯೇಂದ್ರ : ಮೊದಲಿಗೆ ಫ್ಯಾಕ್ಟರಿ buildout areaga ಒಂದು 30 ಎಕರೆ ಸಿಕ್ಕಿದ್ರೆ ಸಾಕು ಒಂದು ಸರಿ ಕೆಲಸ ಶುರುವಾದ ಮೇಲೆ ನಾವು ಹೇಗಾದರೂ company ಮನವರಿಕೆ ಮಾಡಿ ಇನ್ನು ಸ್ವಲ್ಪ ಟೈಮ್ ತಗೊಳ್ಳಬಹುದು ಈ ಕೃಷ್ಣ ಕುಟೀರ ಮನೆಯವರ ಬಿಟ್ಟು ಬೇರೆ ಯಾರತ್ರನು ಈ ಊರಿನಲ್ಲಿ ಜಮೀನಿರಲ್ವಾ 

ಕೋಕು : ಇದೆ ಆ ಖಾನ್ ಹತ್ರ 30 ಎಕರೆದ ಇದೆ 30 ಎಕರೆಯಲ್ಲಿ ಆತ ಫ್ಯಾಕ್ಟರಿ ಕಟ್ಟಿದ್ದಾನೆ ಮತ್ತೆ ಎರಡು ತಿಂಗಳ ಹಿಂದೆ ಫ್ಯಾಕ್ಟರಿಗಳನ್ನು ವಿಸ್ತಾರ ಗೊಳಿಸಲು ಪುನ 40 ಎಕರೆ ವಿಶ್ವನಾಥ್ ಅವರು ಬರೆದು ಕೊಟ್ಟಿದ್ರು ಆದರೆ ಆತ ನಿಮಗೆ ಮಾರಲ್ಲ ಯಾಕಂದ್ರೆ ಆತ ಜಗನ್ನಾಥ್ ಅವರಿಗೆ ತುಂಬಾ ಹತ್ತಿರದವರು 

ವಿಜಯೇಂದ್ರ : ಆತನನ್ನು ಜಗನ್ನಾಥವರಿಂದ ದೂರ ಮಾಡಿ ನಮಗೆ ಹತ್ತಿರ ಮಾಡೋಣ 

 ಜಯಂದ್ರ : ಅದು ಹೇಗೆ ಸಾಧ್ಯ ಸರ್ 

 ವಿಜಯೇಂದ್ರ : ನಾನು ಹೇಳಿದಾಗೆ ಮಾಡ್ತಾ ಹೋಗು ಖಾನ್ ನಮ್ ಕಡೆ ಆಗ್ತಾನೆ


ಕಥೆಮುಂದುವರೆಯಲಿದೆ


Rate this content
Log in

Similar kannada story from Abstract