STORYMIRROR

Harsha Shetty

Abstract Drama Others

4  

Harsha Shetty

Abstract Drama Others

ಕೃಷ್ಣ ಕುಟೀರ ಭಾಗ-1

ಕೃಷ್ಣ ಕುಟೀರ ಭಾಗ-1

3 mins
409

 ಸುರೇಂದ್ರ (20 ವರ್ಷ) ತನ್ನ ಗೆಳೆಯರ ಜೊತೆ ಕ್ರಿಕೆಟ್ ಆಡುತ್ತಿರುವಾಗ ಅವನ ಗೆಳೆಯ ಕಿಶೋರ್ ಎಸೆದ ಚೆಂಡಿಗೆ ಸುರೇಂದ್ರ ಹೊಡೆದ ಏಟಿಗೆ ಚಂಡು ಅಂಗಣದ ಹೊರಾಂಗಣ ಹೋಗಿ ಕಟರ ಸ್ಕೂಟರ್ ಅಲ್ಲಿ ಹೋಗುತ್ತಿದ್ದ ಇಬ್ಬರು ಅಪರಿಚಿತರಲ್ಲಿ ಸ್ಕೂಟರ್ ಬಿಡುತ್ತಿರುವ ಚಾಲಕನಿಗೆ ಹೋಗಿ ತಾಗುತ್ತದೆ ಚಾಲಕ ಮತ್ತು ಅವನ ಹಿಂದೆ ಕೂತಿದ್ದ ಸವಾರರಿಬ್ಬರು ಬ್ಯಾಲೆನ್ಸ್ ತಪ್ಪಿ ಬೀಳುತ್ತಾರೆ ಹಾಗೂ ಇಬ್ಬರಿಗೂ ಅಲ್ಪಸ್ವಲ್ಪ ಗಾಯವಾಗುತ್ತದೆ ಕೋಪಗೊಂಡ ಚಾಲಕನು ಹಾಗೂ ಅವನ ಸಹಪಾಠಿಯೂ ಗ್ರೌಂಡ್ಲ್ಲಿ ಆಡುತ್ತಿದ್ದ ಮಕ್ಕಳತ್ರ ಸಿಟ್ಟಿನಿಂದ ಧಾವಿಸುತ್ತಾರೆ ಅದನ್ನು ನೋಡಿದ ಸುರೇಂದ್ರ ಗೆಳೆಯರು ಪಲಾಯನ ಮಾಡುತ್ತಾರೆ. ಆದರೆ ಸುರೇಂದ್ರ ಮಾತ್ರ ಹೆದರದೆ ದಿಟ್ಟವಾಗಿ ನಿಂತಿದ್ದಾನೆ. 

 ಚಾಲಕ: ಯಾರ ಯಾರ ಬಾಲ್ ಹೊಡೆದದ್ದು 

 ಸುರೇಂದ್ರ: ನಾನೇ ಏನೀಗ 

 ಚಾಲಕ : ಹುಡುಗ ಆಡುವಾಗ ಉಷಾರಾಗಿ ಆಡಬೇಕಂತ ಗೊತ್ತಿಲ್ವಾ ಹೀಗೆ ದಾರಿಯಲ್ಲಿ ಹೋಗೋರಿಗೆ ಎಲ್ಲಾ ತೊಂದರೆ ಮಾಡಬಾರದು ಅಂತ ಅರ್ಥ ಆಗಲ್ವಾ ನಿನಗೆ 

ಸುರೇಂದ್ರ : ನೀನು ಈ ಊರಿನವಲ್ಲ ಅಂತ ಕಾಣುತ್ತದೆ ಅದಕ್ಕೆ ನನ್ನ ಹತ್ತಿರ ಈತರ ಮಾತಾಡ್ತೀಯಾ ನನ್ನಪ್ಪ ಯಾರು ಅಂತ ಗೊತ್ತಾ. 

ಚಾಲಕ: ನಿನ್ನಪ್ಪ ಯಾರಾದರೂ ನನಗೇನು ನಮಗಾದ ನಷ್ಟ ಯಾರು ಕೊಡುತ್ತಾರೆ. 

ಸುರೇಂದ್ರ : ನಿನಗೇನು ಮಹಾ ನಷ್ಟವಾಗಿದೆ ಕಟರ ಸ್ಕೂಟರ್ ಬ್ಯಾರೆ. 

ಚಾಲಕ: ಎ ಅದು ನಮ್ಮಪ್ಪ ನನಗೆ ಕೊಟ್ಟಿರುವುದು ಅವರಿಗೆ ಅವರಪ್ಪ ಕೊಟ್ಟಿರುವುದು ಅದನ್ನು ಕಟಾರ ಅಂದರೆ ಜಾಗ್ರತೆ. 

ಸುರೇಂದ್ರ : ಏನು ಅದು mercedes-benz ನಿನಗೆ ನಿನ್ನಪ್ಪ ಕೊಟ್ಟಿರುವುದು 

ಚಾಲಕ : ನನಗೆ ಅದೆಲ್ಲ ಗೊತ್ತಿಲ್ಲ ಈಗ ನನಗಾಗಿರುವ ನಷ್ಟವನ್ನು ಕೊಡು ಅಥವಾ ನಡಿ ಪೋಲಿಸ್ ಸ್ಟೇಷನ್ ಗೆ 

ಸುರೇಂದ್ರ : ಏನು ನಾನ್ ಕಾಣದ ಪೊಲೀಸ್ ಸ್ಟೇಷನ್ 

 ಆದರೆ ನನಗೆ ನಿನ್ನಂಥವನು low ಕ್ಲಾಸ್ people ಜೊತೆ argue ಮಾಡಲು ಇಷ್ಟವಿಲ್ಲ 

 ಎಂದು ಹೇಳಿ ಸುರೇಂದ್ರ ತನ್ನ ಕತ್ತಲಿದ್ದ gold chain ಕೊಟ್ಟ

ಅದನ್ನು ನೋಡಿದ ಚಾಲಕ ಮತ್ತವನ ಸಹಪಾಠಿಯು ಸಂತೋಷವೂ ಹಾಗೂ ಆಶ್ಚರ್ಯಚಕಿತರಾದರು.

ಆಗ ಚಾಲಕನ ಸಹಪಾಠಿಯೂ ಮಗ ಹೊಡೆಯಲ್ಲ ಲಾಟರಿ 5000 ಸಿಕ್ಕದ ಕಟರ ಸ್ಕೂಟರಿಗೆ ಇವನು 50000 ಚೈನನ್ನು ಕೊಟ್ಟನಲ್ಲ

 ಚಾಲಕ: ನಿಲ್ಲು ಇನ್ನೂ ಇವನು ಸುಮ್ಮನೆ ಯಾಮರ್ಸ್ತ ಇದ್ದಾನೆ ಚೈನು originala ಅಂತ ನೋಡುವ ಮೊದಲು

ಎಂದು ಹೇಳಿ ಚಾಲಕನು ಚೈನನ್ನು ಉಜ್ಜಿ ನೋಡಿದನು. ಎ originalo ಇದು ಎಂದು ಕೂಗಿ ಸಹಪಾಠಿಗೆ ಹೇಳಿದನು ಮತ್ತೆ ಚಾಲಕನು ಸುರೇಂದ್ರನ 

ಕುರಿತು boss ತುಂಬಾ ಥ್ಯಾಂಕ್ಸ್ ನಾ ಮಾತಾಡಿದ್ದಕ್ಕೆ ಎಲ್ಲ ಬೇಜಾರು ಮಾಡಿಕೊಳ್ಳಬೇಡಿ ಓಕೆ ಸರ್ ನಾವು ಹೊರಡುತ್ತೇವೆ bye

ಆವಾಗ್ಲೇ ಸುರೇಂದ್ರನಾ ಕೆನ್ನೆಗೆ ಪಟಾರ್ ಅಂತ ಏಟು ಬಿತ್ತು ಎಟಿಕೆ ಸುರೇಂದ್ರ ಹೋಗಿ ಮೂರಡಿ ಯಾಚೆ ಬಿದ್ದ ಚಾಲಕ ಮತವನ್ನು ಸಹಪಾಠಿ ತಿರುಗಿ ನೋಡಿದರೆ ಒಬ್ಬ ಆರು ಅಡಿ ಎತ್ತರದ ವ್ಯಕ್ತಿ ಬಿಳಿ ಪಂಚೆ ಉಟ್ಕೊಂಡು 

 ತಲೆಗೆ ಒಂದು ಬಟ್ಟೆ ಕಟ್ಟಿಕೊಂಡು ಹಾಗೂ ಮೈಯ ಬಿಟ್ಕೊಂಡು ಹಾಗೂ ಅವನ ಕೈಯಲ್ಲಿ ಎತ್ತುಗಳನ್ನು ಓಡಿಸುವ ಬೆತ್ತ ವಿತ್ತು ನೋಡಲ್ ಅವನು ಸಾಧಾರಣ ರೈತ ನಾಗೆ ಕಾಣುತ್ತಿದ್ದಾನೆ . ಅವನು ಸುರೇಂದ್ರ ಅನ್ನು ಕುರಿತು ಬಡ್ಡಿ ಮಗನೇ ಏನು ನೀನು ದೊಡ್ಡ ಸಾಹುಕಾರ ಚೈನ್ ಎತ್ತು ಕೊಡ್ತಿದ್ದೀಯಾ ತಾನೇ ಸಂಪಾದಿಸಿದರೆ ಅದರ ದರ್ದು ಗೊತ್ತಾಗುವುದು ಬಿಟ್ಟ್ಟಿ ಮನೆಯಲ್ಲಿ ಕೂತ್ಕೊಂಡು ತಿಂತೀಯಾ ಅದಕ್ಕೇ ಈ ಆಡಂಬರ ಅದನ್ನು ನೋಡಿದ ಚಾಲಕನು: ಲೇಯ್ ಯಾರೋ ನೀನು ನಮ್ ಬಾಸ್ ಮೇಲೆ ಕೈ ಮಾಡ್ತಿದ್ದೀಯಾ ಆಗ ಆ ವ್ಯಕ್ತಿಯು ಏನು ಈ ನಾಲಾಯಕ್ಕು ನಿಮ್ಮ boss

 ಚಾಲಕ:ಹೌದು ಮತ್ತೆ ಅವರ ಮೇಲೆ ಕೈ ಮಾಡಿದ ಜಾಗ್ರತೆ

 ಸುರೇಂದ್ರ:ಲೋ ಸುಮ್ನೆ ಇರಲೆ 

ಚಾಲಕ: ಬಾಸ್ ನೀವು ಸುಮ್ಮನಿರಿ ನಿಮ್ಮ ಮೇಲೆ ಕೈ ಮಾಡಲಿಕ್ಕೆ ಇವನಿಗೆ ಎಷ್ಟು ಧೈರ್ಯ. 

ಆವಾಗ ವ್ಯಕ್ತಿಯು ಚಾಲಕನ ಹತ್ರ ಇದ್ದ ಚೈನನ್ನು ಕಿತ್ತುಕೊಂಡು ಚಾಲಕನ ಕೆನ್ನೆ ಮೇಲೆ ಬಾರಿಸಿದ ಅದನ್ನು ನೋಡಿದ ಚಾಲಕನ ಸಹಪಾಠಿಯೂ ಹೆದರಿ ಹಿಂಜರಿದ ಆಗ ಚಾಲಕನಿಗೂ ಆ ವ್ಯಕ್ತಿಯ ದೇಹವನ್ನು ನೋಡಿ ಅವನ ಮೇಲೆ ಕೈಮಾಡಲು ಧೈರ್ಯವಾಗಲಿಲ್ಲ 

ಆವಾಗ ಆ ವ್ಯಕ್ತಿಯು ಸುರೇಂದ್ರನತ್ತ ದಾವಿಸಿ ತನ್ನಲ್ಲಿದ್ದ ಬೆತ್ತದಿಂದ ಸುರೇಂದ್ರನಿಗೆ ಹೊಡೆಯಲು ಆರಂಭಿಸಿದ ಅವರ ಸುರೇಂದ್ರ ಅಪ್ಪ ಬೇಡಪ್ಪ ಬಿಟ್ಟು ಬಿಡಪ್ಪ ಕಿರುಚಲು ಆರಂಭಿಸಿದನೋ 

 ಚಾಲಕ ಮತ್ತು ಅವನ ಸಹಪಾಠಿ : ಏನು ಇವನು ನಿಮ್ಮಪ್ಪನ ಎಂದು ನಾಡುಕುತ ಕೇಳಿದರು ಆವಾಗ ವ್ಯಕ್ತಿಯು ಚಾಲಕ ಮತ್ತು ಅವನ ಸಹಪಾಠಿ ಹತ್ತಿರ ದಾವಿಸಿ ಎಷ್ಟು ನಿಮಗೆ ನಷ್ಟವಾಗಿರುವುದು ಆವಾಗ ಚಾಲಕನು ನಡುಗುತ್ತಾ ಏನು ನಮ್ಮ ಸ್ಕೂಟರು ಹಾಗೂ ಗಾಯಗ ಗಳಿಗೆ band aid ಕುಡಿದರೆ ಅಬ್ಬಬ್ಬಾ ಅಂದ್ರೆ 1000 ರೂಪಾಯಿ ಆಗಬಹುದು.

ಆವಾಗ ವ್ಯಕ್ತಿಯು ತಮ್ಮ ಜೇಬಿನಿಂದ ಹಣವನ್ನು ತೆಗೆದು ಸಾವಿರ ರೂಪಾಯಿಯನ್ನು ಚಾಲಕನಿಗೆ ಕೊಟ್ಟು ಇನ್ನು ನೀವು ಇಲ್ಲಿಂದ ತೊಲಗಿ ಎಂದು ಗರ್ಜಿಸಿದರು ಅದನ್ನು ಕೇಳಿದ ಚಾಲಕ ಮತ್ತು ಅವನ ಸಹಪಾಠಿಯೂ ಕಾಲಿಗೆ ಬುದ್ಧಿ ಹೇಳಿದರು ಹಾಗೂ ಆ ವ್ಯಕ್ತಿಯು ಸುರೇಂದ್ರನತ್ತ ಧಾವಿಸಿ ಅವನ ಜುಟ್ಟನ್ನು ಹಿಡಿದು ತನ್ನೊಂದಿಗೆ ಕರೆದೊಯ್ದನು


Rate this content
Log in

Similar kannada story from Abstract